ಬಿಟೌನ್ನ “ಸಂಜು’ಗೆ ಕೋಟಿ ಕೋಟಿ ಹಿಟ್ಸ್: Watch
Team Udayavani, Jun 17, 2018, 2:17 PM IST
ರಾಜ್ ಕುಮಾರ್ ಹಿರಾನಿ ನಿರ್ದೇಶನದ “ಸಂಜು’ ಬಾಲಿವುಡ್ ನ ಬಹುನಿರೀಕ್ಷಿತ ಸಿನಿಮಾವಾಗಿದ್ದು, ನಟ ಸಂಜಯ್ ದತ್ ಲೈಫ್ ಸ್ಟೋರಿ ಬೆಳ್ಳಿತೆರೆಯ ಮೇಲೆ ಬರಲು ಸಿದ್ಧವಾಗಿದೆ. ಮತ್ತೊಂದೆಡೆ ಸಂಜು ಆಗಿ ರಣಬೀರ್ ಕಪೂರ್ ಕಮಾಲ್ ಸೃಷ್ಟಿಸಿದ್ದಾರೆ.
“ಸಂಜು’ ಟ್ರೈಲರ್ ಬಿಡುಗಡೆಯಾದಾಗಿನಿಂದ ಇಲ್ಲಿವರೆಗೂ ನಾಲ್ಕು ಕೋಟಿಗೂ (42,541,098) ಹೆಚ್ಚು ವೀಕ್ಷಣೆಗೊಳಗಾಗಿ ಯೂಟ್ಯೂಬ್ ಟ್ರೆಂಡಿಂಗ್ನಲ್ಲಿದೆ. ಇನ್ನು ಟೀಸರ್ನಲ್ಲಿ ಸಂಜಯ್ ಜೀವನದ ಮಸಾಲೆ ತುಂಬಿದ ವಿಷಯಗಳನ್ನು ತೋರಿಸಲಾಗಿದೆ. ಜತೆಗೆ ಅವರಿಗಿದ್ದ ಮಾದಕ ವ್ಯಸನದ ಚಟಗಳು ಹಾಗೂ 300ಕ್ಕೂ ಹೆಚ್ಚು ಜನರೊಂದಿಗಿದ್ದ ದೈಹಿಕ ಸಂಬಂಧಗಳ ಬಗ್ಗೆ ತೋರಿಸಲಾಗಿದೆ.
ಪೊಲೀಸ್ ವಿಚಾರಣೆಯಿಂದ ಹಿಡಿದು ಜೈಲಿನಲ್ಲಿ ಕಳೆದ ಕರಾಳ ರಾತ್ರಿಗಳು, ಸಿನಿ ರಂಗದಲ್ಲಿ ತಾರೆಯಾಗಿದ್ದ ಸಂಜಯ್ ಸಿನಿ ಜೀವನ ಹಾಳಾಗಿ ಮತ್ತೆ ಚಿಗುರೊಡೆಯುವ ಬಳ್ಳಿಯಂತೆ ಮೇಲೇಳುವ ಸಂಜಯ್ ಬಗ್ಗೆ ಈ ಟ್ರೈಲರ್ನಲ್ಲಿ ತೋರಿಸಲಾಗಿದೆ. ರಣಬೀರ್ ಕಪೂರ್ ಈ ಸಿನಿಮಾದಲ್ಲಿ ಯುವ ಸಂಜಯ್ ದತ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಇನ್ನು ಸಿನಿಮಾದಲ್ಲಿ ಸಂಜು ಆಗಿ ರಣಬೀರ್ ಕಪೂರ್, ಪರೇಶ್ ರಾವಲ್, ಮನೀಶಾ ಕೊಯಿರಾಲಾ, ಅನುಷ್ಕಾ ಶರ್ಮಾ, ಸೋನಂ ಕಪೂರ್, ದಿಯಾ ಮಿರ್ಜಾ, ವಿಕಿ ಕೌಶಲ್, ಬೋಮನ್ ಇರಾನಿ ಮುಖ್ಯಭೂಮಿಕೆಯಲ್ಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ramayana Movie: ʼರಾವಣʼನ ಪತ್ನಿಯಾಗಿ ಯಶ್ ಜೊತೆ ನಟಿಸಲಿದ್ದಾರೆ 51 ಹರೆಯದ ಈ ನಟಿ?
ದೀರ್ಘಕಾಲದ ಗೆಳೆಯನೊಂದಿಗೆ ದಾಂಪತ್ಯಕ್ಕೆ ಕಾಲಿಟ್ಟ ತಾಪ್ಸಿ: ಗುಟ್ಟಾಗಿ ಹಸಮಣೆ ಏರಿದ ನಟಿ
ಮೀಟಿಂಗ್ ಮಾಡೋಕ್ಕೂ ರೇಟ್ ಫಿಕ್ಸ್: ನನ್ನ 10 ನಿಮಿಷ ಬೇಕಿದ್ರೆ 1ಲಕ್ಷ ಕೊಡಿ ಎಂದ ನಿರ್ದೇಶಕ
Box office: ʼವೀರ್ ಸಾವರ್ಕರ್ʼ ಆಗಿ ಗೆದ್ರಾ ರಣದೀಪ್ ಹೂಡಾ?; ಮೊದಲ ದಿನ ಗಳಿಸಿದ್ದೆಷ್ಟು?
Priyanka Chopra: ಅಯೋಧ್ಯೆ ರಾಮಲಲ್ಲಾನ ದರ್ಶನ ಪಡೆದ ಪ್ರಿಯಾಂಕಾ ಚೋಪ್ರಾ ದಂಪತಿ
MUST WATCH
ಹೊಸ ಸೇರ್ಪಡೆ
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ