ನಾನು ಹೈ ಗ್ರೇಡ್ ಕ್ಯಾನ್ಸರ್‌ಗೆ ಗುರಿಯಾಗಿದ್ದೇನೆ: ಸೋನಾಲಿ ಬೇಂದ್ರೆ!

ಮುಂಬಯಿ: ಬಾಲಿವುಡ್‌ನ ಖ್ಯಾತ ನಟಿ ಸೋನಾಲಿ ಬೇಂದ್ರೆ ಕ್ಯಾನ್ಸರ್‌ನಿಂದ ಬಳಲುತ್ತಿದ್ದು ನ್ಯೂಯಾಕ್‌ನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ವಿಚಾರವನ್ನು ಖುದ್ದು ಸೋನಾಲಿ ಅವರೇ ಟ್ವೀಟ್ ಮೂಲಕ ಬಹಿರಂಗ ಪಡಿಸಿದ್ದಾರೆ.
43 ರ ಹರೆಯದ ನಟಿ ಟ್ವೀಟರ್‌ನಲ್ಲಿ ಸುಧೀರ್ಘವಾಗಿ ತಾನು ಅನುಭವಿಸಿದ ನೋವು,ಚಿಕಿತ್ಸೆ ಪಡೆಯುತ್ತಿರುವ ಬಗ್ಗೆ ಮತ್ತು ಆತ್ಮವಿಶ್ವಾಸ ತುಂಬಿದ ಕುಟುಂಬ ಸದಸ್ಯರ ಕುರಿತಾಗಿ ಬರೆದಿದ್ದಾರೆ.
ಜೀವನಲ್ಲಿ ನಾವು ನಿರೀಕ್ಷಿಸಿರುವುದಿಲ್ಲ, ಆದರೆ ಕೆಲವೊಮ್ಮೆ ತಿರವನ್ನು ಪಡೆಯಲೇಬೇಕು, ನಾನು ಹೈ ಗ್ರೇಡ್ ಕ್ಯಾನ್ಸರ್‌ಗೆ ಗುರಿಯಾಗಿದ್ದು, ನ್ಯೂಯಾರ್ಕ್‌ನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದೇನೆ. ನನ್ನ ಕುಟುಂಬ ಸದಸ್ಯರು ನನ್ನ ಜೊತೆಯಲ್ಲೇ ಇದ್ದು ಧೈರ್ಯ ತುಂಬುತ್ತಿದ್ದಾರೆ, ವೈದ್ಯರು ಕಾಳಜಿ ವಹಿಸಿ ಚಿಕಿತ್ಸೆ ನೀಡುತ್ತಿದ್ದಾರೆ.ಜೀವನದ ಪ್ರತಿಯೊಂದು ಕ್ಷಣವನ್ನೂ ಹೋರಾಡುತ್ತೇನೆ.ನನಗೆ ಕುಟುಂಬ, ಸ್ನೇಹಿತರ ಬಲವಿದೆ ಎಂದು ಬರೆದಿದ್ದಾರೆ.
ಸೋನಾಲಿ ಟ್ವೀಟ್ ನೋಡಿ ಬಾಲಿವುಡ್ ದಿಗ್ಗಜರು ಟ್ವೀಟ್‌ಗಳ ಮೂಲಕ ಧೈರ್ಯ ಹೇಳಿದ್ದು ಶೀಘ್ರ ಚೇತರಿಸಿಕೊಳ್ಳಲು ಪ್ರಾರ್ಥಿಸಿದ್ದಾರೆ.