CONNECT WITH US  

ನನ್ನ "ಬೇಬಿ' ಕ್ಯಾಟ್ ಎಂದ ಸಲ್ಮಾನ್ ಖಾನ್: ವೀಡಿಯೋ ವೈರಲ್

ಇಬ್ಬರು ಹಳೆಯ ಲವರ್ಸ್ ಒಳ್ಳೆಯ ಸ್ನೇಹಿತರಾಗಿರಬಹುದು ಎಂಬುದನ್ನು ಅಮೇರಿಕಾ ಪ್ರವಾಸದಲ್ಲಿರುವ ಬಾಲಿವುಡ್ ಮಾಜಿ ಕಪಲ್ಸ್ ಸಲ್ಮಾನ್ ಖಾನ್ ಮತ್ತು ಕತ್ರಿನಾ ಕೈಫ್ ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.

ಹೌದು! ಸಲ್ಮಾನ್ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಸಂದರ್ಭದಲ್ಲಿ ಕ್ಯಾಟ್‍ರನ್ನು "ತಮ್ಮ ಬೇಬಿ' ಎಂದು ಹೇಳಿದ್ದು, ಇದೀಗ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.


https://twitter.com/bestofsalkat/status/1015160060790628353

ಪತ್ರಿಕಾಗೋಷ್ಠಿ ಹಿನ್ನೆಲೆಯಲ್ಲಿ ವರದಿಗಾರರೊಬ್ಬರು ಇದೇ ತಿಂಗಳ ಜುಲೈ 15ರಂದು ತಮ್ಮ ಬೀಬಿ ಬರ್ತಡೇ ಇದೆ ಎಂದು ಹೇಳಿದ ಕೂಡಲೇ ಅದಕ್ಕೆ ನಗು-ನಗುತ್ತಾ ಉತ್ತರಿಸಿದ ಸಲ್ಮಾನ್, "ನನ್ನ ಬೇಬಿ ಹುಟ್ಟುಹಬ್ಬ ಜುಲೈ 15ರಂದು ಅಲ್ಲ, ಜುಲೈ 16ರಂದು" ಎಂದಿದ್ದಾರೆ.

ಅಲ್ಲದೇ ಸಲ್ಮಾನ್ ಹಾಗೆ ಹೇಳುತ್ತಿದ್ದಂತೆಯೇ ಕತ್ರಿನಾ ನಾಚಿ ನೀರಾಗಿದ್ದು, ಅವರ ಕೆನ್ನೆ ಕೆಂಪಾಗಿದೆ. ಕೂಡಲೇ ಇದರಿಂದ ಎಚ್ಚೆತ್ತ ಸಲ್ಮಾನ್ "ಈ ಬೇಬಿ ಅಲ್ಲ, ಆ ಬೇಬಿ" ಮಾತು ಬದಲಾಯಿಸಿದ್ದಾರೆ.

Trending videos

Back to Top