CONNECT WITH US  
echo "sudina logo";

ಅಬ್‌ ತಕ್‌ ಛಪ್ಪನ್‌ ಖ್ಯಾತಿಯ ಚಿತ್ರ ಕಥೆಗಾರ ರವಿಶಂಕರ್‌ ಆತ್ಮಹತ್ಯೆ

ಮಂಬಯಿ: 'ಅಬ್‌ ತಕ್‌ ಛಪ್ಪನ್‌' ಖ್ಯಾತಿಯ ಚಿತ್ರ ಕಥೆ ಬರಹಗಾರ ರವಿಶಂಕರ್‌ ಆಲೋಕ್‌ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರಿಗೆ 32 ವರ್ಷ ವಯಸ್ಸಾಗಿತ್ತು. 

ಅಂಧೇರಿಯ ಪಶ್ಚಿಮದ ಸವೆನ್‌ ಬಂಗ್ಲೋಸ್‌ ನಿವಾಸಿಯಾಗಿದ್ದ ರವಿಶಂಕರ್‌ ಬುಧವಾರ ತಡ ರಾತ್ರಿ ವೇಳೆಗೆ ಕಟ್ಟಡದ ಛಾವಣಿಯಿಂದ ಜಿಗಿದು ಸಾವಿಗೆ ಶರಣಾಗಿದ್ದಾರೆ. 

ಕಾವಲುಗಾರ ಭಾರೀ ಸದ್ದು ಕೇಳಿ ಸ್ಥಳಕ್ಕೆ ತೆರಳಿದಾಗ ರಕ್ತದ ಮಡುವಿನಲ್ಲಿ ರವಿಶಂಕರ್‌ ಬಿದ್ದಿದ್ದರು. ಕೆಲ ಹೊತ್ತಿನಲ್ಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಪ್ರಾಣ ಪಕ್ಷಿ ಹಾರಿ ಹೋಗಿತ್ತು. 

ರವಿಶಂಕರ್‌ ಜೊತೆ ತಂದೆ ತಾಯಿ ವಾಸವಾಗಿದ್ದು ಕೆಲ ದಿನಗಳ ಹಿಂದೆ ಮೂಲ ನಿವಾಸ ಪಟ್ನಾಗೆ ತೆರಳಿದ್ದರು. ಜೊತಯಲ್ಲಿದ್ದ ಸಹೋದರ ಘಟನೆ ನಡೆದಾಗ ಮನೆಯಲ್ಲಿರಲಿಲ್ಲ ಎಂದು ತಿಳಿದು ಬಂದಿದೆ. 

ವರ್ಸೋವಾ  ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಯಾವುದೇ ಡೆತ್‌ ನೋಟ್‌ ಪತ್ತೆಯಾಗಿಲ್ಲ. 

ಆಲೋಕ್‌ ಬೆಟ್ಟಿಂಗ್‌ ನಷ್ಟ ಅನುಭವಿಸಿ ಖನ್ನತೆಗೊಳಗಾಗಿದ್ದು, ಕೆಲ ದಿನಗಳಿಂದ ಚಿಕಿತ್ಸೆಯನ್ನೂ ಪಡೆಯುತ್ತಿದ್ದರು ಎಂದು ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 

Trending videos

Back to Top