CONNECT WITH US  

ಬಾಲಿವುಡ್‌ನ‌ ಹಿರಿಯ ಪೋಷಕ ನಟಿ ರೀಟಾ ಭಾದುರಿ ವಿಧಿವಶ 

ಮುಂಬಯಿ: ಬಾಲಿವುಡ್‌ನ‌ ಹಿರಿಯ ಪೋಷಕ ನಟಿ ರೀಟಾ ಭಾದುರಿ ಅವರು ಮಂಗಳವಾರ ಇಹಲೋಕ ತ್ಯಜಿಸಿದ್ದಾರೆ. ಅವರಿಗೆ 62 ವರ್ಷ ಪ್ರಯವಾಗಿತ್ತು. 

ನಟ ಶಿಶಿರ್‌ ಶರ್ಮಾ ಅವರು ಫೇಸ್‌ಬುಕ್‌ನಲ್ಲಿ ನೋವಿನ ವಿಚಾರವನ್ನು ಬರೆದುಕೊಂಡಿದ್ದು, ಜೂನ್‌ 17 ರಂದು ಅಂಧೇರಿ ಪೂರ್ವದ ಪಾರ್ಸಿವಾಡಾ ರಸ್ತೆಯ ಹಿಂದು ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ತಿಳಿಸಿದ್ದಾರೆ.

 ಹಿರಿಯ ನಟಿ ಮೂತ್ರಪಿಂಡದ ಸಮಸ್ಯೆಯಿಂದ ಬಳಲುತ್ತಿದ್ದರು ಎಂದು ಹಲವು ವರದಿಗಳ ಮೂಲಕ ತಿಳಿದು ಬಂದಿದೆ. 

70 ರಿಂದ 90 ರ ದಶಕದಲ್ಲಿ ಹಲವು ಬಾಲಿವುಡ್‌ ಚಿತ್ರಗಳಲ್ಲಿ ರೀಟಾ ಅವರು ನಟಿಸಿದ್ದರು. ಸಾವನ್‌ ಕೋ ಆನೆ ದೋ, ರಾಜಾ, ಹಿಟ್‌ ಚಿತ್ರಗಳು  ರಾಜಾ ನಟನೆಗಾಗಿ ಫಿಲ್ಮ್ ಫೇರ್‌ ಪ್ರಶಸ್ತಿಗೆ ಭಾಜನರಾಗಿದ್ದರು. 

70 ಕ್ಕೂ ಹೆಚ್ಚು ಚಿತ್ರಗಳು ಮತ್ತು ಕಿರುತೆರೆಯಲ್ಲೂ ಬಣ್ಣ ಹಚ್ಚಿದ್ದರು. 

ರೀಟಾ ಅವರು ಕೊನೆಯದಾಗಿ ಅಭಿನಯಿಸಿರುವ ನಿಮ್ಕಿ ಮುಖೀಯಾ ಸದ್ಯ ಪ್ರಸಾರವಾಗುತ್ತಿದೆ. 


Trending videos

Back to Top