ನಿಕ್ ಜೊತೆ ಹಿಂದೂ ಸಂಪ್ರದಾಯದಂತೆ ರೊಕಾ ಮಾಡಿಕೊಂಡ ಪ್ರಿಯಾಂಕಾ!
Team Udayavani, Aug 18, 2018, 4:18 PM IST
ಮುಂಬಯಿ : ಕಳೆದ ಕೆಲ ದಿನಗಳಿಂದ ಭಾರೀ ಕುತೂಹಕ್ಕೆ ಕಾರಣವಾಗಿದ್ದ ಅಂತರಾಷ್ಟ್ರೀಯ ಖ್ಯಾತಿಯ ನಟಿ ಪ್ರಿಯಾಂಕಾ ಚೋಪ್ರಾ ಮತ್ತು ಪ್ರಿಯಕರ ನಿಕ್ ಜೊನಾಸ್ ಅವರ ನಿಶ್ಚಿತಾರ್ಥ ಕೊನೆಗೂ ಹಿಂದೂ ಸಂಪ್ರದಾಯದಂತೆ ನಡೆದಿದೆ.
ಹಲವು ಬಾರಿ ಜೊತೆಯಾಗಿ ಕಂಡು ಬಂದಿದ್ದ ಜೋಡಿ ಅಮೆರಿಕಾದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎನ್ನಲಾಗಿತ್ತು. ಆದರೆ ಮುಂಬಯಿಯ ಬಂಗಲೆಯಲ್ಲಿ ಹಿಂದೂ ಸಂಪ್ರದಾಯದಂತೆ ಇಬ್ಬರೂ ರೊಕಾ ಸಂಭ್ರಮವಾಗಿ ಆಚರಿಸಿಕೊಂಡಿದ್ದು ಕೈ ಬೆರಳಿನಲ್ಲಿ ಉಂಗುರ ಕಂಡು ಬಂದಿದೆ.
ಸಮಾರಂಭದಲ್ಲಿ ಪ್ರಿಯಾಂಕಾ ಆಪ್ತರು,ಕೆಲ ನಟಿಯರು, ಜೊನಾಸ್ ಕುಟುಂಬದ ಬೆರಳೆಣಿಕೆಯ ಸದಸ್ಯರು ಮಾತ್ರ ಭಾಗಿಯಾಗಿದ್ದರು ಎಂದು ತಿಳಿದು ಬಂದಿದೆ.
ಸಮಾರಂಭದಲ್ಲಿ ಇಬ್ಬರೂ ಸಂಪ್ರದಾಯಿಕ ದಿರಿಸಿನಲ್ಲಿ ಕಂಡು ಬಂದಿದ್ದಾರೆ. ನಿಕ್ ಶ್ವೇತವರ್ಣದ ಪೈಜಾಮ ಧರಿಸಿದ್ದಾರೆ.
ಇಬ್ಬರೂ ಇನ್ಸ್ಟಾಗ್ರಾಂನಲ್ಲಿ ಫೋಟೋ ಸಮೇತ ಬರೆದುಕೊಂಡಿದ್ದು ‘ನನ್ನ ಹೃದಯ ಮತ್ತು ಆತ್ಮದೊಂದಿಗೆ ಸ್ವೀಕರಿಸಿದ್ದೇನೆ’ ಎಂದು ಪ್ರಿಯಾಂಕಾ ಬರೆದಿದ್ದರೆ,ಜೊನಾಸ್ ‘ಭವಿಷ್ಯದ ಜೊನಾಸ್ ಪತ್ನಿ ..ನನ್ನ ಹೃದಯ ,ನನ್ನ ಪ್ರೀತಿ’ ಎಂದು ಬರೆದಿದ್ದಾರೆ.
ಇಬ್ಬರಿಗೂ ಸಾಮಾಜಿಕ ತಾಣಗಳಲ್ಲಿ ಲಕ್ಷಾಂತರ ಅಭಿಮಾನಿಗಳು ಶುಭ ಹಾರೈಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ʼಖಲ್ನಾಯಕ್ʼ ಸಿನಿಮಾದ ಪ್ರಧಾನ ಪಾತ್ರದ ರೇಸ್ನಲ್ಲಿ ಬಿಟೌನ್ ಸ್ಟಾರ್ಸ್ ಜೊತೆ ಯಶ್, ಅಲ್ಲು?
Malaika Arora: ಮಲೈಕಾಗೆ ಎರಡನೇ ಮದುವೆ ಯಾವಾಗ ಎಂದು ಪ್ರಶ್ನೆ ಕೇಳಿದ ಮಗ; ಶಾಕ್ ಆದ ಮುನ್ನಿ
Aamir Khan: ರಾಜಕೀಯ ಪಕ್ಷದ ಪರ ಪ್ರಚಾರ; ನಕಲಿ ವಿಡಿಯೋ ವಿರುದ್ಧ FIR ದಾಖಲಿಸಿದ ಆಮಿರ್
Salman Khan: ನಟ ಸಲ್ಮಾನ್ ಖಾನ್ ನಿವಾಸದ ಮೇಲೆ ಗುಂಡಿನ ದಾಳಿ; ಇಬ್ಬರ ಬಂಧನ
ಪೊಲೀಸ್ ಪೇದೆಯ ಮಗ, ಕಾನೂನು ಪದವೀಧರ ʼಲಾರೆನ್ಸ್ʼ ಕುಖ್ಯಾತ ಗ್ಯಾಂಗ್ ಸ್ಟರ್ ಆದದ್ದೇಗೆ?
MUST WATCH
ಹೊಸ ಸೇರ್ಪಡೆ
Congress: ಕೈಗಾರಿಕೋದ್ಯಮದಿಂದ ನಿರುದ್ಯೋಗ ಸಮಸ್ಯೆಗೆ ಪರಿಹಾರ: ಜೆಪಿ ಹೆಗ್ಡೆ
Neha hiremath Case; ನಿಷ್ಪಕ್ಷ ತನಿಖೆ ನಡೆಸಿ ನ್ಯಾಯ ಒದಗಿಸಲಾಗುವುದು: ಹೆಬ್ಬಾಳ್ಕರ್
Congress: ಉತ್ಸಾಹದ ಉತ್ತುಂಗದಲ್ಲಿ ಕಾಂಗ್ರೆಸ್; ಕಾರ್ಕಳದಲ್ಲಿ ಜೆಪಿ ಪಡೆ ದಿಟ್ಟ ನಡೆ
Fraud: ರೈಸ್ ಪುಲ್ಲಿಂಗ್ ಹೆಸರಿನಲ್ಲಿ ವಂಚನೆಗೆ ಯತ್ನ; 3 ಸೆರೆ, 69.79 ಲಕ್ಷ ವಶ
Crime: ಸ್ನೇಹಿತನನ್ನೇ ಕೊಲೆ ಮಾಡಿದ್ದ ನಾಲ್ವರು ಆರೋಪಿಗಳ ಸೆರೆ