ನವರಾತ್ರಿಗೆ ಸಲ್ಮಾನ್ ಖಾನ್ ಲವ್ರಾತ್ರಿ: ಬಿಹಾರ ಕೋರ್ಟಿನಲ್ಲಿ ದೂರು
Team Udayavani, Sep 6, 2018, 4:56 PM IST
ಮುಜಫರಪುರ : ‘ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಅವರ ಸ್ವಂತ ನಿರ್ಮಾಣದ ಮುಂದಿನ ಚಿತ್ರದ ಹೆಸರು ಲವ್ರಾತ್ರಿ; ಇದು ಹಿಂದೂ ಹಬ್ಬ ನವರಾತ್ರಿಯನ್ನು ಧ್ವನಿಸುತ್ತದೆ. ಸಲ್ಮಾನ್ ಖಾನ್ ಅವರ ಚಿತ್ರಗಳು ಸಾಮಾನ್ಯವಾಗಿ ಅಶ್ಲೀಲತೆಯನ್ನು ಮೆರೆಯುವುದರಿಂದ ನವರಾತ್ರಿ ಪದವನ್ನು ಸಂಕೇತಿಸುವ ಲವ್ ರಾತ್ರಿ ಚಿತ್ರದಲ್ಲಿ ದುರ್ಗಾ ದೇವಿಯನ್ನು ಅವಮಾನಿಸುವ ಸಾಧ್ಯತೆ ಇದೆ’ ಎಂದು ಆರೋಪಿಸಿ ಇಲ್ಲಿನ ವಕೀಲ ಸುಧೀರ್ ಕುಮಾರ್ ಓಝಾ ಎಂಬವರು ಬಿಹಾರದ ನ್ಯಾಯಾಲಯದಲ್ಲಿ ಸಲ್ಮಾನ್ ಖಾನ್ ವಿರುದ್ಧ ದೂರು ದಾಖಲಿಸಿದ್ದಾರೆ.
ವಕೀಲ ಓಝಾ ಅವರ ದೂರಿನ ವಿಚಾರಣೆಯನ್ನು ಉಪ ವಿಭಾಗೀಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಶೈಲೇಂದ್ರ ಕುಮಾರ್ ಅವರು ಇದೇ ಸೆ.12ಕ್ಕೆ ನಿಗದಿಸಿದ್ದಾರೆ.
‘ಸಲ್ಮಾನ್ ಅವರ ಲವ್ ರಾತ್ರಿ ಚಿತ್ರ ನವರಾತ್ರಿ ಸನಿಹ, ಈ ವರ್ಷ ಅಕ್ಟೋಬರ್ 5ರಂದು ಬಿಡುಗಡೆಯಾಗಲಿದ್ದು ಇದು ಹಿಂದುಗಳ ಧಾರ್ಮಿಕ ಭಾವನೆಯನ್ನು ನೋಯಿಸುವಂತಿದೆ’ ಎಂದು ವಕೀಲ ಓಝಾ ತಮ್ಮ ದೂರಿನಲ್ಲಿ ಹೇಳಿದ್ದಾರೆ.
ಯೂ ಟ್ಯೂಬ್ ಮತ್ತಿತರ ಚ್ಯಾನಲ್ಗಳಲ್ಲಿ ಈಗಾಗಲೇ ಲವ್ ರಾತ್ರಿ ಚಿತ್ರದ ಪ್ರೋಮೋಗಳು, ಟೀಸರ್ಗಳು ಬಿಡುಗಡೆಯಾಗಿದ್ದು ಅವನ್ನು ತಾನು ಕಂಡಿರುವ ಕಾರಣ ತನಗೆ ಚಿತ್ರದ ಬಗ್ಗೆ ಈ ಅಭಿಪ್ರಾಯ ಬಂದಿದೆ ಎಂದು ಓಝಾ ಹೇಳಿದ್ದಾರೆ.
ಓಝಾ ಅವರು ತಮ್ಮ ದೂರಿನಲ್ಲಿ ಸಲ್ಮಾನ್ ಖಾನ್, ಅವರ ಭಾವ ಆಯುಷ್ ಶರ್ಮಾ, ಹೊಸ ನಟಿ ವರೀನಾ ಹುಸೇನ್ ಅವರನ್ನು ಉತ್ತರದಾಯಿಗಳನ್ನಾಗಿ ಹೆಸರಿಸಿದ್ದಾರೆ.
ಲವ್ ರಾತ್ರಿ ಚಿತ್ರವು ಅಭಿರಾಜ್ ಮಿನಾವಾಲಾ ಅವರ ಚೊಚ್ಚಲ ನಿರ್ದೇಶನದ ಚಿತ್ರವಾಗಿದೆ. ಚಿತ್ರದಲ್ಲಿ ರಾಮ್ ಕಪೂರ್ ಮತ್ತು ರೋನಿತ್ ರಾಯ್ ಕೂಡ ನಟಿಸಿದ್ದು ಇವರನ್ನು ಕೂಡ ದೂರಿನಲ್ಲಿ ಉತ್ತರದಾಯಗಳನ್ನಾಗಿ ಮಾಡಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Rap song: ವೋಟು ನಮ್ಮ ಪವರ್ ರ್ಯಾಪ್ ಸಾಂಗ್ ಬಿಡುಗಡೆ
ಭಾರತದಲ್ಲಿ ರಿಲೀಸ್ಗೂ ಮುನ್ನ ʼಮಂಕಿ ಮ್ಯಾನ್ʼ ಹೆಚ್ ಡಿ ಕಾಪಿ ಲೀಕ್: ವಿಳಂಬ ಯಾಕೆ?
Deepfake video ವಿರುದ್ಧ ನಟ ರಣ್ವೀರ್ ಸಿಂಗ್ ದೂರು
Ranveer Singh: ಮತಯಾಚನೆಯ ಡೀಪ್ ಫೇಕ್ ವಿಡಿಯೋ ವೈರಲ್; FIR ದಾಖಲಿಸಿದ ನಟ ರಣ್ವೀರ್
Big B: ʼಕಲ್ಕಿʼಗಾಗಿ ʼಅಶ್ವತ್ಥಾಮʼನ ಅವತಾರ ತಾಳಿದ ಬಿಗ್ ಬಿ; ಗಮನ ಸೆಳೆದ ಪಾತ್ರದ ಝಲಕ್
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ