CONNECT WITH US  

ಮೀ ಟೂ: ಹೌಸ್‌ಫ‌ುಲ್‌ 4 ಚಿತ್ರದ ನಿರ್ದೇಶಕನ ಪಟ್ಟದಿಂದ ಇಳಿದ ಸಾಜಿದ್‌

ಹೊಸದಿಲ್ಲಿ: ಬಾಲಿವುಡ್‌ ನಲ್ಲಿ ದಿನದಿಂದ ದಿನಕ್ಕೆ ''ಮೀ ಟೂ'' ಲೈಂಗಿಕ ಹಗರಣದ ಆಂದೋಲನ ಹೆಚ್ಚುಚ್ಚು ಕಾವನ್ನು ಪಡೆಯುತ್ತಿದೆ. ಈಗಾಗಲೇ ಚಿತ್ರ ನಟರಾದ ಆಲೋಕ್‌ ನಾಥ್‌, ನಿರ್ದೇಶಕ ಸುಭಾಷ್‌ ಘಾಯ್‌, ಲವ ರಂಜನ್‌ ಅವರಿಗೆ ಉರುಳಾಗಿ ಪರಿಣಮಿಸಿರುವ 'ಮೀ ಟೂ' ಇದೀಗ ಚಿತ್ರ ನಿರ್ದೇಶಕ ಸಾಜಿದ್‌ ಖಾನ್‌ ಅವರನ್ನೂ ಸುತ್ತಿಕೊಂಡಿದೆ. 

ಇದರ ಪರಿಣಾಮವಾಗಿ ಸಾಜಿದ್‌ ಖಾನ್‌ ಅವರು ತಾವು ನಿರ್ದೇಶಿಸುತ್ತಿರುವ "ಹೌಸ್‌ಫ‌ುಲ್‌ 4'' ಎಂಬ ಚಿತ್ರದ ನಿದೇರ್ಶಕನ ಪಟ್ಟದಿಂದ ಕೆಳಗಿಳಿದಿದ್ದಾರೆ.  ಹಾಗಿದ್ದರೂ ಸತ್ಯ ಸಂಪೂರ್ಣವಾಗಿ ಹೊರ ಬರುವ ತನಕ ಜನರು ತೀರ್ಪು ಕೊಡಲು ಮುಂದಾಗಬಾರದು ಎಂದು ಅವರು ಟ್ವಿಟರ್‌ ನಲ್ಲಿ  ವಿನಂತಿಸಿದ್ದಾರೆ. 

ನಡಿಯಡ್‌ವಾಲಾ ಗ್ರ್ಯಾಂಡ್‌ಸನ್‌ ಎಂಟರ್‌ಟೇನ್‌ಮೆಂಟ್‌ ಬ್ಯಾನರ್‌ ನಡಿ ನಿರ್ಮಿಸಲಾಗುತ್ತಿರುವ 'ಹೌಸ್‌ಫ‌ುಲ್‌ 4' ಚಿತ್ರದ ಮೊದಲ ಎರಡು ಕಂತನ್ನು ಸಾಜಿದ್‌ ಖಾನ್‌ ನಿರ್ದೇಶಿಸಿದ್ದಾರೆ. ಈ ಚಿತ್ರ 2019 ದೀಪಾವಳಿಯ ಹೊತ್ತಿಗೆ ತೆರೆ ಕಾಣುವ ಗುರಿ ಹೊಂದಿದೆ. 

ಹೌಸ್‌ಫ‌ುಲ್‌ 4 ಚಿತ್ರದಲ್ಲಿ ರಿತೇಶ್‌ ದೇಶ್‌ಮುಖ್‌, ಬಾಬ್ಬಿ ದೇವಲ್‌, ಶರತ್‌ ಕೇಳ್ಕರ್‌, ಪೂಜಾ ಹೆಗ್ಡೆ, ಕೃತಿ ಖರಬಂದಾ ಮತ್ತು ಕೃತಿ ಸ್ಯಾನನ್‌ ನಟಿಸುತ್ತಿದ್ದಾರೆ. 


Trending videos

Back to Top