CONNECT WITH US  

"ಸರ್ಕಾರ್‌' ಉಗ್ರನಿಗಿಂತ ಕಡಿಮೆ ಇಲ್ಲ: ಸಚಿವ ಟೀಕೆ

ಚೆನ್ನೈ: ತಮಿಳು ನಟ ವಿಜಯ್‌ ನಟನೆಯ "ಸರ್ಕಾರ್‌' ಉಗ್ರಗಾಮಿಗೆ ಸಮನಾಗಿದೆ ಎಂದು ತಮಿಳುನಾಡು ಕಾನೂನು ಸಚಿವ ಸಿ.ವಿ.ಷಣ್ಮುಗಂ ಆರೋಪಿಸಿದ್ದಾರೆ. ಅದರಲ್ಲಿನ ಕೆಲವು ದೃಶ್ಯಗಳು ಸಮಾಜದಲ್ಲಿ ಹಿಂಸಾಕೃತ್ಯಕ್ಕೆ ಪ್ರೇರಣೆ ನೀಡುವಂತಿದೆ ಎಂದಿದ್ದಾರೆ. ಇದರ ಜತೆಗೆ ಸಿನಿಮಾದಲ್ಲಿ ಮಾಜಿ ಸಿಎಂ ಜಯಲಲಿತಾ ಅವರ ಪ್ರಸ್ತಾವವಿದೆ ಎಂದಿದ್ದಾರೆ.  

ಅವರ ಸರಕಾರ ಹಮ್ಮಿಕೊಂಡ ಕೆಲವು ಯೋಜನೆಗಳನ್ನು ಕೆಟ್ಟ ಯೋಜನೆಗಳು ಎಂದು ಬಿಂಬಿಸಲಾಗಿದೆ. ಕೆಲವು ದೃಶ್ಯಗಳನ್ನು ಕತ್ತರಿಸಬೇಕು. ಇಲ್ಲವಾದರೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು  ಎಚ್ಚರಿಕೆ ನೀಡಿದ್ದಾರೆ. ಚಿತ್ರದಲ್ಲಿ ನೇರವಾಗಿ ಜಯಲಲಿತಾರನ್ನು ಪ್ರಸ್ತಾವಿಸಿಲ್ಲ. ಯೋಜನೆಯೊಂದರಲ್ಲಿ ನೀಡಲಾಗುವ ಉಚಿತ ಕೊಡುಗೆಗಳನ್ನು ಸುಟ್ಟುಹಾಕಿರುವಂತೆ ಸಿನಿಮಾದಲ್ಲಿ ಪ್ರದರ್ಶಿಸಲಾಗಿದ್ದು, ಈ ದೃಶ್ಯದಲ್ಲಿ ಡಿಎಂಕೆ ನಾಯಕ ಪಳ ಕರುಪ್ಪಯ್ಯ ನಟಿಸಿದ್ದಾರೆ.

Trending videos

Back to Top