CONNECT WITH US  

ದಾಂಪತ್ಯ ಜೀವನಕ್ಕೆ ಕಾಲಿಟ್ಟ ರಣವೀರ್ ಸಿಂಗ್ & ದೀಪಿಕಾ ಪಡುಕೋಣೆ

ಇಂದು ಕೊಂಕಣಿ ಸಂಪ್ರದಾಯದಂತೆ ದೀಪಿಕಾ ಮತ್ತು ರಣವೀರ್ ಮದುವೆ

ಇಟಲಿ: ಬಾಲಿವುಡ್ ಖ್ಯಾತ ನಟಿ, ಕರಾವಳಿ ಬೆಡಗಿ ದೀಪಿಕಾ ಪಡುಕೋಣೆ ಮತ್ತು ಖ್ಯಾತ ನಟ ರಣವೀರ್ ಸಿಂಗ್ ಇಟಲಿಯ ಲೇಕ್ ಕೋಮೊದಲ್ಲಿ ಬುಧವಾರ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಇಂದು ದಕ್ಷಿಣ ಭಾರತದ ಶೈಲಿಯಂತೆ ಕೊಂಕಣಿ ಸಂಪ್ರದಾಯದಂತೆ ದೀಪಿಕಾ ಮತ್ತು ರಣವೀರ್ ಮದುವೆ ನಡೆದಿದ್ದು, ಈ ಸಂದರ್ಭದಲ್ಲಿ ಇಬ್ಬರ ಕುಟುಂಬದ ಸದಸ್ಯರು ಮತ್ತು ಆಯ್ದ ನಿಕಟ ಗೆಳೆಯರು ಮಾತ್ರ ಹಾಜರಿದ್ದರು. ಬುಧವಾರ 7ಗಂಟೆಯ ಮುಹೂರ್ತಕ್ಕೆ ವಿವಾಹ ನಡೆದಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ. ಆದರೆ ಯಾರಿಗೂ ಫೋಟೋ ತೆಗೆಯುವ ಅವಕಾಶ ನೀಡಿಲ್ಲ. ಆಹ್ವಾನಿತರಿಗೂ ಮೊಬೈಲ್ ನಿಷೇಧಿಸಲಾಗಿತ್ತು ಎಂದು ವರದಿ ವಿವರಿಸಿದೆ.

ಗುರುವಾರ ಮತ್ತೆ ದೀಪಿಕಾ ಮತ್ತು ರಣವೀರ್ ಸಿಂಧಿ ಸಂಪ್ರದಾಯದ ಪ್ರಕಾರ ವಿವಾಹವಾಗಲಿದ್ದಾರೆ. ದೀಪಿಕಾ ಮತ್ತು ರಣವೀರ್ ಆರತಕ್ಷತೆ ನವೆಂಬರ್ 21ರಂದು ಕುಟುಂಬ ಸದಸ್ಯರು ಮತ್ತು ಸ್ನೇಹಿತರಿಗೆ ಬೆಂಗಳೂರಿನಲ್ಲಿ ಹಾಗೂ ನವೆಂಬರ್ 28ರಂದು ಮುಂಬೈನಲ್ಲಿ ನಡೆಯಲಿದೆ ಎಂದು ವರದಿ ವಿವರಿಸಿದೆ.


Trending videos

Back to Top