ಕೆಜಿಎಫ್ ಹವಾ…ಪಾಕ್ ನೆಲದಲ್ಲೂ ಕನ್ನಡ ನಟನ ಸಿನಿಮಾದ ಹೊಸ ಶಕೆ..
Team Udayavani, Jan 10, 2019, 10:42 AM IST
ನವದೆಹಲಿ: ದೇಶಾದ್ಯಂತ ಭರ್ಜರಿ ಸದ್ದು ಮಾಡಿದ್ದ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಸಿನಿಮಾ ಇದೀಗ ಪಾಕಿಸ್ತಾನದಲ್ಲಿ ತೆರೆ ಕಂಡ ಕನ್ನಡ ಮೂಲದ ಬಹುಭಾಷಾ ಅವತರಣಿಕೆಯ ಮೊದಲ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಈಗಾಗಲೇ ಸ್ಯಾಂಡಲ್ ವುಡ್ ನಲ್ಲಿ ಕೆಜಿಎಫ್ ಗಲ್ಲಾಪೆಟ್ಟಿಗೆಯಲ್ಲಿ ಭರ್ಜರಿ ಕಲೆಕ್ಷನ್ ಮಾಡುವ ಮೂಲಕ ಈಗಾಗಲೇ ಹಲವು ಇತಿಹಾಸ ನಿರ್ಮಿಸಿದೆ. ಅಷ್ಟೇ ಅಲ್ಲ ಬಿಡುಗಡೆಯಾದ ಐದು ಭಾಷೆಗಳಲ್ಲಿಯೂ ಕೆಜಿಎಫ್ ಹವಾ ಮುಂದುವರಿದಿದೆ.
ಪಾಕಿಸ್ತಾನದಲ್ಲಿ ಡಿಸೆಂಬರ್ 21ರಂದು ಕೆಜಿಎಫ್ ಬಿಡುಗಡೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿತ್ತು. ಆದರೆ ಇದೀಗ ಹೊಸ ವರ್ಷದಲ್ಲಿ ಕೆಜಿಎಫ್ ರಿಲೀಸ್ ಭಾಗ್ಯ ಕಂಡಿದೆ. ಪಾಕಿಸ್ತಾನದಲ್ಲಿ ಬಾಲಿವುಡ್ ಸಿನಿಮಾಗಳೆಂದರೆ ಭಾರೀ ಬೇಡಿಕೆ. ಆ ನಿಟ್ಟಿನಲ್ಲಿ ಕನ್ನಡ ನಟರೊಬ್ಬರ ಸಿನಿಮಾ ಪಾಕಿಸ್ತಾನದಲ್ಲಿ ತೆರೆ ಕಾಣುತ್ತಿರುವುದು ಇದೇ ಪ್ರಥಮ ಬಾರಿಯದ್ದಾಗಿದೆ.
1980ರ ದಶಕದಲ್ಲಿ ಅಮಿತಾಬ್, ಧರ್ಮೇಂದ್ರ, ರಿಷಿ ಕಪೂರ್, ದಿಲೀಪ್ ಬಳಿಕ ಶಾರುಖ್ ಖಾನ್, ಸಲ್ಮಾನ್ ಖಾನ್, ಅಮೀರ್ ಸೇರಿದಂತೆ ಹಲವು ನಟರ ಸಿನಿಮಾಕ್ಕೆ ಪಾಕ್ ಸಿನಿ ಪ್ರಿಯರು ಮುಗಿ ಬೀಳುತ್ತಿದ್ದರು. ಆ ನಿಟ್ಟಿನಲ್ಲಿ ಪಾಕ್ ನೆಲದಲ್ಲಿ ಕೆಜಿಎಫ್ ಹವಾ ಎಬ್ಬಿಸುತ್ತಿರುವುದು ಮತ್ತೊಂದು ಮೈಲಿಗಲ್ಲಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Rap song: ವೋಟು ನಮ್ಮ ಪವರ್ ರ್ಯಾಪ್ ಸಾಂಗ್ ಬಿಡುಗಡೆ
ಭಾರತದಲ್ಲಿ ರಿಲೀಸ್ಗೂ ಮುನ್ನ ʼಮಂಕಿ ಮ್ಯಾನ್ʼ ಹೆಚ್ ಡಿ ಕಾಪಿ ಲೀಕ್: ವಿಳಂಬ ಯಾಕೆ?
Deepfake video ವಿರುದ್ಧ ನಟ ರಣ್ವೀರ್ ಸಿಂಗ್ ದೂರು
Ranveer Singh: ಮತಯಾಚನೆಯ ಡೀಪ್ ಫೇಕ್ ವಿಡಿಯೋ ವೈರಲ್; FIR ದಾಖಲಿಸಿದ ನಟ ರಣ್ವೀರ್
Big B: ʼಕಲ್ಕಿʼಗಾಗಿ ʼಅಶ್ವತ್ಥಾಮʼನ ಅವತಾರ ತಾಳಿದ ಬಿಗ್ ಬಿ; ಗಮನ ಸೆಳೆದ ಪಾತ್ರದ ಝಲಕ್
MUST WATCH
ಹೊಸ ಸೇರ್ಪಡೆ
Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ
33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್ ಗುಂಡೂರಾವ್