CONNECT WITH US  

ರಿಲಯನ್ಸ್‌ ಜಿಯೋ "ಜೂಜಾಟ'ಅಲ್ಲ!:ಮುಖೇಶ್‌ ಅಂಬಾನಿ

ಮುಂಬೈ: ಟೆಲಿಕಾಂ ಕ್ಷೇತ್ರದಲ್ಲಿ ಸುದ್ದಿ ಮಾಡುತ್ತಿರುವ ರಿಲಯನ್ಸ್‌ ಜಿಯೋ ಜೂಜಾಟ ಅಲ್ಲ, ಅದನ್ನು ತುಂಬಾ ಚೆನ್ನಾಗಿ ಯೋಜಿತವಾಗಿಯೇ ಜಾರಿಗೊಳಿಸಿದ್ದೇವೆ ಎಂದು ರಿಲಯನ್ಸ್‌ನ ಮುಖ್ಯಸ್ಥ ಮುಖೇಶ್‌ ಅಂಬಾನಿ ಹೇಳಿದ್ದಾರೆ. ಜಿಯೋದ ಸೇವೆಗಳು ಮತ್ತು ಅದರಲ್ಲಿ ಸಮಸ್ಯೆಗಳ ಕುರಿತ ಕೆಲವೊಂದು ಆರೋಪಗಳ ಕುರಿತಂತೆ ಅವರು ಹೀಗೆ ಹೇಳಿದ್ದಾರೆ. 2.50 ಲಕ್ಷ ಕೋಟಿ ರೂ. ಹೂಡಿಕೆಯೊಂದಿಗೆ ಸಾಕಷ್ಟು ಚಿಂತನೆ ಮಾಡಿಯೇ ಉದ್ಯಮ ಸ್ಥಾಪಿಸಿದ್ದೇವೆ. ಆದಾಗ್ಯೂ ಸೇವೆಯಲ್ಲಿ ಕೆಲವೊಂದು ಸಮಸ್ಯೆಗಳೂ ಇವೆ ಎಂಬುದನ್ನು ಒಪ್ಪಿಕೊಳ್ಳುವುದಾಗಿ ಅವರು ಹೇಳಿದರು. ಇದು ಪ್ರತಿಭಾನ್ವಿತ ವಿದ್ಯಾರ್ಥಿಯೊಬ್ಬ ಪ್ರತಿಷ್ಠಿತ ವಿದ್ಯಾಸಂಸ್ಥೆಗೆ ಸೇರಿ, ಹಾಸ್ಟೆಲ್‌ಗೆ ಪರದಾಡುವಂತೆ ಎಂದು ಅವರು ಬಣ್ಣಿಸಿದರು. ಮಾಧ್ಯಮ ಸಂಸ್ಥೆಗಳು ನಡೆಸಿದ ಕಾರ್ಯಕ್ರಮವೊಂದರಲ್ಲಿ ಹಿರಿಯ ಪತ್ರಕರ್ತರೊಂದಿಗಿನ ಸಂವಾದದಲ್ಲಿ ಅಂಬಾನಿ ಅವರು ಹೀಗೆ ಹೇಳಿದ್ದಾರೆ.

"ದೇಶ ಮೊದಲು, ಕಲೆ ಕಲಾವಿದರೆಲ್ಲ ನಂತರ'
ಮುಂಬೈ: ಇತ್ತೀಚೆಗಿನ ಉರಿ ದಾಳಿ ಬಳಿಕ ಭಾರತದಲ್ಲಿ ಪಾಕಿಸ್ತಾನದ ಕಲಾವಿದರನ್ನು ದೂರ ಇಡುವ ಕುರಿತಂತೆ ರಿಲಯನ್ಸ್‌ ಮುಖ್ಯಸ್ಥ ಮುಖೇಶ್‌ ಅಂಬಾನಿ ತಮ್ಮ ದನಿಗೂಡಿಸಿದ್ದಾರೆ. ದೇಶ ಮೊದಲು ಬಳಿಕವೇ ಸಂಸ್ಕೃತಿ-ಕಲೆಗೆ ಸ್ಥಾನ. ನಾನು ಚಿಂತಕನಲ್ಲ. ಆದರೆ ಸಾಮಾನ್ಯ ಭಾರತೀಯನಂತೆ ಆಲೋಚಿಸುತ್ತೇನೆ. ಮೊದಲು ದೇಶ ಬಳಿಕ ಇದೆಲ್ಲ ಬರುತ್ತದೆ. ಈ ಹಿನ್ನೆಲೆಯಲ್ಲಿ ಕಲಾವಿದರ ನಿಷೇಧ ಸರಿ ಎಂಬರ್ಥದಲ್ಲಿ ಹೇಳಿದ್ದಾರೆ.

Trending videos

Back to Top