CONNECT WITH US  

ಜಿಯೋ ಗ್ರಾಹಕರಿಗೆ ಮತ್ತಷ್ಟು ಬಂಪರ್ ಆಫರ್!ಅಬ್ಬಾ ಎಷ್ಟೊಂದು ಕೊಡುಗೆ

ಮುಂಬೈ:ದೇಶಾದ್ಯಂತ ಜನಪ್ರಿಯಗೊಳ್ಳುತ್ತಿರುವ ರಿಲಯನ್ಸ್ ಜಿಯೋ ಗ್ರಾಹಕರಿಗೆ ಮತ್ತಷ್ಟು ಆಫರ್ ಗಳನ್ನು ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಖೇಶ್ ಅಂಬಾನಿ ಗುರುವಾರ ಘೋಷಿಸಿದ್ದು, ಇದೀಗ ಜಿಯೋ ಗ್ರಾಹಕರಿಗೆ ಮತ್ತೆ ಮೂರು ತಿಂಗಳ ಕಾಲಾವಧಿ ಜಿಯೋ ವೆಲ್ ಕಮ್ ಉಚಿತ ಸೇವೆಯನ್ನು ವಿಸ್ತರಿಸಿರುವುದಾಗಿ ತಿಳಿಸಿದ್ದಾರೆ.

ಡಿಸೆಂಬರ್ 4ರಂದು ಜಿಯೋನ ಎಲ್ಲಾ ಹೊಸ ಗ್ರಾಹಕರು ಉಚಿತವಾಗಿ ಡಾಟಾ, ವೈಸ್ ಮತ್ತು ಜಿಯೋ ಆಪ್ಸ್ ಅನ್ನು ಪಡೆಯಲಿದ್ದಾರೆ. ಇದು ಜಿಯೋ ಗ್ರಾಹಕರಿಗೆ ಹೊಸ ವರ್ಷದ ಕೊಡುಗೆ ಎಂದು ಹೇಳಿದ್ದಾರೆ.

ಅಷ್ಟೇ ಅಲ್ಲ ನಮ್ಮ ಎಲ್ಲಾ 5. 2ಕೋಟಿ ಜಿಯೋ ಗ್ರಾಹಕರು 2017ರ ಮಾರ್ಚ್ 31ರವರೆಗೂ ವೆಲ್ ಕಮ್ ಉಚಿತ ಸೇವೆ ನಿಗದಿಯಂತೆ ಡಿಸೆಂಬರ್ 31ರವರೆಗೂ ಮುಂದುವರಿಯಲಿದೆ. ಬಳಿಕ ಸ್ವಯಂ ಆಗಿ ಹೊಸ ವರ್ಷದ ವೆಲ್ ಕಮ್ ಆಫರ್ ಲಭಿಸಲಿದೆ. ಇದಕ್ಕೆ ಹೊಸ ಸಿಮ್ ಖರೀದಿಸಬೇಕಾದ ಅಗತ್ಯ ಇಲ್ಲ ಎಂದು ವಿವರಿಸಿದ್ದಾರೆ.

ಶೇರ್ ಹೋಲ್ಡರ್ಸ್ಸ್ ಮತ್ತು ಜಿಯೋ ಗ್ರಾಹಕರನ್ನು ಉದ್ದೇಶಿಸಿ ಮಾತನಾಡಿದ ಮುಖೇಶ್ ಅಂಬಾನಿ, ರಿಲಯನ್ಸ್ ಜಿಯೋ ಕಳೆದ 3 ತಿಂಗಳಲ್ಲಿ ಫೇಸ್ ಬುಕ್, ವಾಟ್ಸಪ್ ಗಿಂತಲೂ ವೇಗವಾಗಿ ಜನಪ್ರಿಯವಾಗಿದೆ. ಆ ಮೂಲಕ ಅತೀ ವೇಗದ ತಂತ್ರಜ್ಞಾನ ಹೊಂದಿರುವ ಕಂಪನಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದರು.

ಜಿಯೋ ಬಿಡುಗಡೆ ಮಾಡಿದ 90 ದಿನದೊಳಗೆ 5 ಕೋಟಿ ಗ್ರಾಹಕರನ್ನು ಪಡೆದಿದೆ ಎಂದರು. ಜಿಯೋ ಗ್ರಾಹಕರಿಗೆ ಉತ್ತಮವಾದ ಕೊಡುಗೆಯನ್ನು ನೀಡುತ್ತಿದೆ ಎಂದು ಹೇಳಿದರು. ಜಿಯೋ ಡಾಟಾ ಪ್ಲ್ಯಾನ್ಸ್ ಪ್ರಕಾರ ಪ್ರತಿ ಜಿಬಿಯ ದರ ಕೇವಲ 50 ರೂಪಾಯಿಯಂದ ಆರಂಭವಾಗುತ್ತಿದೆ.

149 ರೂಪಾಯಿಗೆ ಜಿಯೋ ಗ್ರಾಹಕರು ಉಚಿತ ವೈಸ್ (ಸ್ಥಳೀಯ ಮತ್ತು ಎಸ್ ಟಿಡಿ), ಉಚಿತ ರೋಮಿಂಗ್ ಮತ್ತು 4ಜಿ ಡಾಟಾದಲ್ಲಿ 0.3ಜಿಬಿ ಜೊತೆಗೆ 100 ಎಸ್ ಎಂಎಸ್ ದೊರೆಯಲಿದೆ.

4,999 ರೂಪಾಯಿ ಪ್ಲಾನ್ ನಲ್ಲಿ ಗ್ರಾಹಕರು 75ಜಿಬಿ ಹಾಗೂ 28 ದಿನಗಳ ಕಾಲ ರಾತ್ರಿ ಹೊತ್ತು 4ಜಿ ಸೇವೆ ಸಿಗಲಿದೆ. ಇನ್ನು 499, 999 ರೂಪಾಯಿ, 1499 ರೂ. ಮತ್ತು 3999 ರೂಪಾಯಿ ಪ್ಲಾನ್ ಇದೆ.

ಹೈಲೈಟ್ಸ್:

*ಮಾರ್ಚ್ 31ರವರೆಗೆ ವೆಲ್ ಕಮ್ ಆಫರ್ ಸೇವೆ ಮುಂದುವರಿಕೆ
*ಹೊಸ ಗ್ರಾಹಕರಿಗೆ ಡಿ.4ರಿಂದ ಉಚಿತ ಡಾಟಾ, ವೈಸ್ ಹಾಗೂ ವಿಡಿಯೋ ಕರೆ ಸೇವೆ ಲಭ್ಯ
*ಪ್ರತಿ ದಿನ 6 ಲಕ್ಷ ಜನರಿಂದ ಜಿಯೋ ಸಿಮ್ ಖರೀದಿ
*ಫೇಸ್ ಬುಕ್, ವಾಟ್ಸಪ್ ಗಿಂತಲೂ ಜಿಯೋ ಹೆಚ್ಚು ಜನಪ್ರಿಯವಾಗುತ್ತಿದೆ
* ಜಿಯೋಗೆ 3 ತಿಂಗಳಲ್ಲಿ 5 ಕೋಟಿ ಗ್ರಾಹಕರಾಗಿದ್ದಾರೆ.

Trending videos

Back to Top