CONNECT WITH US  

ಜಿಯೋ ಗ್ರಾಹಕರಿಗೆ ಮತ್ತಷ್ಟು ಸಿಹಿ ಸುದ್ದಿ; ಗ್ರಾಹಕರ ಸಂಖ್ಯೆ 10ಕೋಟಿ

ನವದೆಹಲಿ:ಕಳೆದ ವರ್ಷ ಸೆ. 5ರಂದು ಮಾರುಕಟ್ಟೆಗೆ ಲಗ್ಗೆ ಇಟ್ಟಿರುವ ರಿಲಯನ್ಸ್‌ ಜಿಯೋ ಗ್ರಾಹಕರ ಸಂಖ್ಯೆ 170 ದಿನಗಳಲ್ಲೇ 10 ಕೋಟಿಗೆ ತಲುಪಿದೆ, ಹೌದು ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಖೇಶ್ ಅಂಬಾನಿ ಮಂಗಳವಾರ ಅಧಿಕೃತ ಮಾಹಿತಿ ನೀಡಿದ್ದಾರೆ. ರಿಲಯನ್ಸ್‌ ಜಿಯೋ ಹ್ಯಾಪಿ ಆಫ‌ರನ್ನು ಪ್ರೈಮ್‌ ಸದಸ್ಯರಿಗಾಗಿ ಒಂದು ವರ್ಷದ ಮಟ್ಟಿಗೆ ಪುನಃ ವಿಸ್ತರಿಸಿದ್ದಾರೆ.

ಪ್ರತಿ ಸೆಕೆಂಡ್ ಗೆ ಏಳು ಮಂದಿ ಜಿಯೋ ಗ್ರಾಹಕರಾಗುತ್ತಿದ್ದಾರೆ ಎಂದು ಮಾಹಿತಿ ನೀಡಿರುವ ಅವರು, ಏಪ್ರಿಲ್ ನಿಂದ ಜಿಯೋ ಗ್ರಾಹಕರಿಗೆ ಉಚಿತ ಸೇವೆ ಇಲ್ಲ, ದರ ಪಟ್ಟಿ ಆರಂಭವಾಗಲಿದೆ. ಅಲ್ಲದೇ ಎಲ್ಲಾ ದೇಶಿಯ ವೈಸ್ ಕಾಲ್ಸ್ ಎಂದಿನಂತೆ ಉಚಿತ ಎಂದು ತಿಳಿಸಿದ್ದಾರೆ.

ಏನಿದು ಜಿಯೋ ಪ್ರೈಮ್?
ಜಿಯೋದ ಹೊಸ ಯೋಜನೆ ಇದು, ಮಾರ್ಚ್ 31ರ ನಂತರ ಗ್ರಾಹಕರಿಗೆ ಲಭ್ಯವಾಗಲಿದೆ.

ಪ್ರೈಮ್ ಯೋಜನೆ ಬೆಲೆ ಎಷ್ಟು?
ಬಹುತೇಕ ಗ್ರಾಹಕರು ಜಿಯೋ ಸಿಮ್ ಎರಡನೇ ಸಿಮ್ ಆಗಿ ಬಳಸುತ್ತಿದ್ದು ಜಿಯೋ ಸೇವೆಗಳನ್ನು ಬಳಕೆ ಮಾಡುತ್ತಿದ್ದಾರೆ. ಈ ಗ್ರಾಹಕರು ಮಾರ್ಚ್ 31ರ ನಂತರ ಜಿಯೋ ಸೇವೆಯಿಂದ ಹೊರ ಹೋಗದೇ ಇರಲು  ಈ ಆಫರ್ ತರಲಾಗಿದೆ. ಮಾರ್ಚ್ 31ರ ನಂತರ ಈ ಸೇವೆ ಆರಂಭವಾಗಲಿದ್ದು, ಪ್ರೈಮ್ ಆಫರ್ ಅನ್ನು ನೀವು ಪಡೆಯಬೇಕಾದರೆ ನೀವು 12 ತಿಂಗಳಿಗೆ 99 ರೂ. ನೀಡಿ ನೋಂದಣಿಯಾಗಬೇಕು.

ಮಾಧ್ಯಮ ಉದ್ದೇಶಿಸಿ ಮಾತನಾಡಿರುವ ಅಂಬಾನಿ ಭಾಷಣದ ಹೈಲೈಟ್ಸ್:
*ಜಿಯೋ ಆರಂಭವಾಗಿ 170 ದಿನಗಳಲ್ಲೇ 10 ಕೋಟಿ ಗ್ರಾಹಕರಾಗಿದ್ದಾರೆ
*ಇದು ಜಿಯೋ ಕಮ್ಯೂನಿಟಿಯ ಮೈಲಿಗಲ್ಲು
*ಪ್ರತಿ ಸೆಕೆಂಡ್ ಗೆ ಸರಾಸರಿ 7 ಮಂದಿ ಜಿಯೋ ಗ್ರಾಹಕರಾಗುತ್ತಿದ್ದಾರೆ
*ಇದು ಭಾರತ ಮತ್ತು ಭಾರತೀಯರ ಸಾಧನೆ
*ಕೆಲವೇ ತಿಂಗಳಲ್ಲಿ ಜಿಯೋ ಗ್ರಾಹಕರು ಹೊಸ ದಾಖಲೆಯನ್ನೇ ಸೃಷ್ಟಿಸಿದ್ದಾರೆ
*ಮೊಬೈಲ್ ಡಾಟಾ ಬಳಕೆಯಲ್ಲಿ ಭಾರತ ಇಂದು ವಿಶ್ವದ ನಂ 1 ಆಗಿದೆ
*ಜಿಯೋ ಗ್ರಾಹಕರು 100 ಕೋಟಿ ಜಿಬಿ ಡಾಟಾವನ್ನು ಬಳಸುತ್ತಿದ್ದಾರೆ
*ಜಿಯೋ ನೆಟ್ ವರ್ಕ್ ರೋಮಿಂಗ್ ಫ್ರೀ
*ಜಿಯೋ ಪ್ರೈಮ್ ಗ್ರಾಹಕರಿಗೆ 2018ರ ಮಾರ್ಚ್ ವರೆಗೂ ಅಲ್ ಲಿಮಿಟೆಡ್ ಆಫರ್ ಮುಂದುವರಿಯಲಿದೆ
*ಜಿಯೋ ಪ್ರೈಮ್ ಆಫರ್ 99 ರೂಪಾಯಿ  ಒನ್ ಟೈಮ್ ರಿಚಾರ್ಜ್ ಮಾಡಿಸಿದರೆ ಉಚಿತ ಕರೆ ಮುಂದುವರಿಕೆ
*ಮಾರ್ಚ್ 31ರೊಳಗೆ ಪ್ಲಾನ್ ರಿನಿವಲ್ ಮಾಡಿಸಿದರೆ ಉಚಿತ ಸೇವೆ ಸೌಲಭ್ಯ ಮುಂದುವರಿಕೆ


Trending videos

Back to Top