CONNECT WITH US  

US Fed ಮುಖ್ಯಸ್ಥರಾಗಲು ರಾಜನ್‌ ಸೂಕ್ತ ಅಭ್ಯರ್ಥಿ: ಬ್ಯಾರನ್ಸ್‌

ಹೊಸದಿಲ್ಲಿ : ಆರ್‌ಬಿಐ ಮಾಜಿ ಗವರ್ನರ್‌ ರಘುರಾಮ ರಾಜನ್‌ ಅವರು ಅಮೆರಿಕದ ಫೆಡರಲ್‌ ರಿಸರ್ವ್‌ ಬ್ಯಾಂಕ್‌ ಅಧ್ಯಕ್ಷರಾಗಬಹುದೇ ?

ರಘುರಾಮ ರಾಜನ್‌ ಅವರು ಅಮೆರಿಕದ ಫೆಡರಲ್‌ ರಿಸರ್ವ್‌ ಬ್ಯಾಂಕ್‌ ಮುಖ್ಯಸ್ಥರಾಗುವುದಕ್ಕೆ ಸೂಕ್ತ ಆಯ್ಕೆ ಎಂದು ಜಾಗತಿಕ ಹಣಕಾಸು ನಿಯತಕಾಲಿಕ ಬ್ಯಾರನ್ಸ್‌ ಹೇಳಿದೆ.

ಅಮೆರಿಕದ ಫೆಡರಲ್‌ ರಿಸರ್ವ್‌ ಬ್ಯಾಂಕಿನ ಹಾಲಿ ಅಧ್ಯಕ್ಷೆ ಜನೆಟ್‌ ಎಲೆನ್‌ ಅವರ ಅಧಿಕಾರಾವಧಿ ಮುಂದಿನ ವರ್ಷದ ಆದಿಯಲ್ಲಿ ಮುಗಿಯಲಿದೆ. ಅಂತೆಯೇ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಎಲೆನ್‌ ಅವರ ಉತ್ತರಾಧಿಕಾರಿಯನ್ನು ಶೀಘ್ರವೇ ಪ್ರಕಟಿಸಲಿದ್ದಾರೆ.

''ಕ್ರೀಡಾ ತಂಡಗಳು ವಿಶ್ವಾದ್ಯಂತದ ಶ್ರೇಷ್ಠ ಪತ್ರಿಭೆಗಳನ್ನು ನೇಮಕ ಮಾಡಿಕೊಳ್ಳುತ್ತವೆ; ಹಾಗಿರುವಾಗ ಸೆಂಟ್ರಲ್‌ ಬ್ಯಾಂಕ್‌ ಯಾಕೆ ಹಾಗೆ ಮಾಡಬಾರದು'' ಎಂದು ಬ್ಯಾರನ್ಸ್‌ ನಿಯತಕಾಲಿಕದಲ್ಲಿ ಪ್ರಕಟಗೊಂಡಿರುವ ಲೇಖನವು ಪ್ರಶ್ನಿಸಿದೆ.

''ಅಂತೆಯೇ ಅಮೆರಿಕದ ಫೆಡರಲ್‌ರಿಸರ್ವ್‌ ಬ್ಯಾಂಕ್‌ನ ಮುಂದಿನ  ಮುಖ್ಯಸ್ಥರಾಗಲು ರಘುರಾಮ ರಾಜನ್‌ ಸೂಕ್ತ ಆಯ್ಕೆಯಾದೀತು'' ಎಂದು ಹೇಳಿದೆ. 


Trending videos

Back to Top