ನೆಲಕಚ್ಚಿದ್ದ ಶೇರುಗಳ ಭರಾಟೆ ಖರೀದಿ: Sensex 352 ಅಂಕ ಜಂಪ್
Team Udayavani, Dec 7, 2017, 4:22 PM IST
ಮುಂಬಯಿ : ಕಳೆದ ಕೆಲವು ದಿನಗಳ ಏರಿಳಿತಗಳಲ್ಲಿ ತೀವ್ರವಾಗಿ ನೆಲಕಚ್ಚಿದ್ದ ಬ್ಯಾಂಕ್, ಆಟೋ ಮತ್ತು ಮೆಟಲ್ ಶೇರುಗಳನ್ನು ಇಂದು ವಹಿವಾಟುದಾರರು ಮತ್ತು ಹೂಡಿಕೆದಾರರು ಮುಗಿಬಿದ್ದು ಖರೀದಿಸಲು ಮುಂದಾದ ಕಾರಣ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ 352 ಅಂಕಗಳ ಭರ್ಜರಿ ಏರಿಕೆಯೊಂದಿಗೆ 32,949.21 ಅಂಕಗಳ ಮಟ್ಟಕೇರಿ ಹೊಸ ವಿಶ್ವಾಸ ಮತ್ತು ಭರವಸೆಯೊಂದಿಗೆ ಇಂದು ಗುರುವಾರದ ವಹಿವಾಟನ್ನು ಕೊನೆಗೊಳಿಸಿತು.
ನಿನ್ನೆ ಬುಧವಾರದ ವಹಿವಾಟನ್ನು ಸೆನ್ಸೆಕ್ಸ್ 205 ಅಂಕಗಳ ನಷ್ಟದೊಂದಿಗೆ ನಿರಾಶಾದಾಯಕವಾಗಿ ಕೊನೆಗೊಳಿಸಿತ್ತು. ಇಂದಿನ 352 ಅಂಕಗಳ ಜಿಗಿತವು ಸೆನ್ಸೆಕ್ಸ್ ಕಳೆದ ನ.30ರ ಬಳಿಕ ದಾಖಲಿಸಿರುವ ಅತೀ ದೊಡ್ಡ ಜಂಪ್ ಆಗಿದೆ.
ಇದೇ ರೀತಿ ಇಂದಿನ ವಹಿವಾಟಿನಲ್ಲಿ 10,100 ಮನೋ ಪ್ರಾಬಲ್ಯದ ಮಟ್ಟವನ್ನು ಪುನರ್ ಸಂಪಾದಿಸಿದ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ ದಿನದ ವಹಿವಾಟನ್ನು 122.60 ಅಂಕಗಳ ಜಿಗಿತದೊಂದಿಗೆ 10,166.70 ಅಂಕಗಳ ಮಟ್ಟಕ್ಕೆ ನೆಗೆಯುವ ಮೂಲಕ ಆಶಾದಾಯಕವಾಗಿ ಕೊನೆಗೊಳಿಸಿತು.
ಈ ವರ್ಷ ಮೇ 25ರಂದು ನಿಫ್ಟಿ 149.20 ಅಂಕಗಳ ಅತೀ ದೊಡ್ಡ ಜಂಪ್ ದಾಖಲಿಸಿದ ಬಳಿಕ ಇಂದು ಸಾಧಿಸಿರುವ 122.60 ಅಂಕಗಳ ಜಿಗಿತ ಅತೀ ದೊಡ್ಡ ಏರಿಕೆ ಎಂದು ಪರಿಗಣಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ
Kumta: ಮಾಜಿ ಶಾಸಕಿ ಶಾರದಾ ಮೋಹನ್ ಶೆಟ್ಟಿ ಮರಳಿ ಕಾಂಗ್ರೆಸ್ ಸೇರ್ಪಡೆ
Udupi: ರಮಾಬಾಯಿ ಕೊಚ್ಚಿಕಾರ್ ಪೈ ನಿಧನ
Bajpe: ಹೆದ್ದಾರಿಯಲ್ಲಿ ಬ್ರೇಕ್ ಫೇಲ್ ಆಗಿ ಅಂಗಡಿಗಳು, ಹಲವು ವಾಹನಗಳಿಗೆ ಗುದ್ದಿದ ಲಾರಿ!
ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ