ನಿರಂತರ 4ನೇ ಬಾರಿಗೆ ಆರ್‌ಬಿಐ ಬಡ್ಡಿದರ ಬದಲಾವಣೆ ಇಲ್ಲ

Team Udayavani, Apr 5, 2018, 3:26 PM IST

RBI-700.jpg

ಹೊಸದಿಲ್ಲಿ : 2019ರ ಹಣಕಾಸು ವರ್ಷದ ಮೊದಲ ದ್ವೆ„ಮಾಸಿಕ ಹಣಕಾಸು ನೀತಿಯನ್ನು ಇಂದು ಪ್ರಕಟಿಸಿರುವ ಆರ್‌ಬಿಐ ನಿರಂತರ ನಾಲ್ಕನೇ ಬಾರಿಗೆ ತನ್ನ ಬಡ್ಡಿದರಗಳನ್ನು ಯಥಾವತ್ತಾಗಿ ಉಳಿಸಿಕೊಂಡಿದೆ. ಹಾಗಾಗಿ ಬ್ಯಾಂಕ್‌ ಸಾಲಗಾರರಿಗೆ ಯಾವುದೇ ರಿಲೀಫ್ ಸಿಕ್ಕಿಲ್ಲ.

ಆರ್‌ಬಿಐ ಗವರ್ನರ್‌ ಊರ್ಜಿತ್‌ ಪಟೇಲ್‌ ನೇತೃತ್ವದ ಆರು ಸದಸ್ಯರ ಹಣಕಾಸು ನೀತಿ ಸಮಿತಿಯು ರಿಪೋ ದರವನ್ನು ಈಗಿನ ಶೇ.6ರಲ್ಲೂ, ರಿವರ್ಸ್‌ ರಿಪೋ ದರವನ್ನು  ಈಗಿನ ಶೇ.5.75ರಲ್ಲೂ  ಯಥಾವತ್‌ ಉಳಿಸಿಕೊಳ್ಳಲು ನಿರ್ಧರಿಸಿತು. 

ಈ ಬಡ್ಡಿ ದರಗಳನ್ನು ಯಥಾವತ್‌ ಉಳಿಸಿಕೊಳ್ಳಲು 5-1 ಮತಗಳಲ್ಲಿ ತೀರ್ಮಾನಿಸಲಾಯಿತು. ದೇಶದ ಆರ್ಥಿಕತೆಯು ನಿಧಾನಗತಿಯಲ್ಲಿ ಸಾಗುತ್ತಿರುವುದನ್ನು ಪರಿಗಣಿಸಿ ಅಗತ್ಯ ಬೆಂಬಲ ನೀಡುವ ನಿಟ್ಟಿನಲ್ಲಿ ಬಡ್ಡಿ ದರಗಳನ್ನು ಯಥಾವತ್‌ ಉಳಿಸಿಕೊಳ್ಳಲು ನಿರ್ಧರಿಸಲಾಯಿತು ಎಂದು ಸಮಿತಿ ಹೇಳಿದೆ. 

ಆರ್‌ಬಿಐ ಕಳೆದ ವರ್ಷ ಆಗಸ್ಟ್‌ನಲ್ಲಿ ಶೇ.0.25ರಷ್ಟು ಕಡಿತ ಮಾಡುವ ಮೂಲಕ ರಿಪೋ ದರವನ್ನು ಶೇ.6ಕ್ಕೆ ಇಳಿಸಿತ್ತು. 2015ರಲ್ಲಿ ಅಸಾಮಾನ್ಯ ಕಡಿಮೆ ಹಣದುಬ್ಬರದ ಲಾಭವನ್ನು ಎತ್ತಿಕೊಂಡು ಆರ್‌ಬಿಐ ಒಟ್ಟಾರೆಯಾಗಿ 200 ಮೂಲಾಂಕದಷ್ಟು ಬಡ್ಡಿ ದರ ಕಡಿತ ಮಾಡಿತ್ತು. 

2018-19ರ ಸಾಲಿನ ಮೊದಲ ಅರೆ ವರ್ಷದಲ್ಲಿ ಹಣದುಬ್ಬರವು ಶೇ.4.7 – ಶೇ.5.1ರ ಒಳಗೆ ಮತ್ತು ಎರಡನೇ ಅರೆ ವರ್ಷದಲ್ಲಿ ಶೇ.4.4ರ ಹಣದುಬ್ಬರ ಇರುವುದೆಂದು ಆರ್‌ಬಿಐ ತನ್ನ ತಾಜಾ ಹಣಕಾಸು ನೀತಿಯಲ್ಲಿ ಅಂದಾಜಿಸಿದೆ. 

ಅಂತೆಯೇ ಜಿಡಿಪಿ 2019ರ ಹಣಕಾಸು ವರ್ಷದಲ್ಲಿ ಶೇ.7.4ಕ್ಕೆ ಹಿಗ್ಗುವುದೆಂದು ಅಂದಾಜಿಸಿದೆ. 2017-18ರಲ್ಲಿ ಜಿಡಿಪಿ ಶೇ.6.6 ರಲ್ಲಿ ದಾಖಲಾಗಿದೆ. ಹಾಲಿ ಹಣಕಾಸು ಸಾಲಿನ ಮೊದಲ ಅರೆ ವರ್ಷದಲ್ಲಿ ಜಿಡಿಪಿ ಶೇ.7.3 -ಶೇ. 7.4ರಲ್ಲೂ ಎರಡನೇ ಅರೆ ವರ್ಷದಲ್ಲಿ ಶೇ.7.3 – ಶೇ.7.6ರಲ್ಲೂ ದಾಖಲಾಗುವ ನಿರೀಕ್ಷೆಯನ್ನು ಆರ್‌ಬಿಐ ಹೊಂದಿರುವುದಾಗಿ ಹಣಕಾಸು ನೀತಿ ಹೇಳಿದೆ.  

ಟಾಪ್ ನ್ಯೂಸ್

4-naxal-

Mangaluru: ಶರಣಾಗುವ ನಕ್ಸಲರಿಗೆ ಸಿಗಲಿದೆ 7.50 ಲ.ರೂ. ಪ್ರೋತ್ಸಾಹಧನ

3-blthgdy

Belthangady: ತುಮಕೂರು ತ್ರಿಬ್ಬಲ್ ಮರ್ಡರ್ ಪ್ರಕರಣ;ಮನೆಮಂದಿಗೆ ಇಂದು ತಲುಪಿದ ಮೃತದೇಹ

2-mukthar-ansari

Mukhtar Ansari: ಕುಖ್ಯಾತ ಗ್ಯಾಂಗ್‌ಸ್ಟರ್‌, 5 ಬಾರಿ ಶಾಸಕ ಅನ್ಸಾರಿ ಸಾವು

1-24-friday

Horoscope: ಉದ್ಯೋಗ ಸ್ಥಾನದಲ್ಲಿ ಮೇಲಿನವರಿಂದ ಶ್ಲಾಘನೆ, ಮಹಿಳಾ ಉದ್ಯಮಿಗಳಿಗೆ ಯಶಸ್ಸು

dk-suresh

ಸಂಸದ ಡಿ.ಕೆ.ಸುರೇಶ್‌ ಆಸ್ತಿ ಮೌಲ್ಯ 593 ಕೋಟಿ ರೂ.!

Kohli IPL 2024

IPL; ಇಂದು ಚಿನ್ನಸ್ವಾಮಿಯಲ್ಲಿ ಆರ್‌ಸಿಬಿ ಬಲೆಗೆ ಬೀಳುತ್ತಾ ಕೋಲ್ಕತಾ?

Raichur Lok Sabha Constituency: ಎಸ್ಟಿ ಮೀಸಲು ಕ್ಷೇತ್ರದಲ್ಲಿ 14 ಸಲ ಗೆದ್ದ ಕಾಂಗ್ರೆಸ್‌

Raichur Lok Sabha Constituency: ಎಸ್ಟಿ ಮೀಸಲು ಕ್ಷೇತ್ರದಲ್ಲಿ 14 ಸಲ ಗೆದ್ದ ಕಾಂಗ್ರೆಸ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Stock Market: ಬಾಂಬೆ ಷೇರುಪೇಟೆ ಸೂಚ್ಯಂಕ ಸಾರ್ವಕಾಲಿಕ ದಾಖಲೆ ಮಟ್ಟದ ಏರಿಕೆ

Stock Market: ಬಾಂಬೆ ಷೇರುಪೇಟೆ ಸೂಚ್ಯಂಕ ಸಾರ್ವಕಾಲಿಕ ದಾಖಲೆ ಮಟ್ಟದ ಏರಿಕೆ

Stock Market:ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 495 ಅಂಕ ಏರಿಕೆ;ಲಾಭಗಳಿಸಿದ ಷೇರು ಯಾವುದು?

Stock Market:ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 495 ಅಂಕ ಏರಿಕೆ;ಲಾಭಗಳಿಸಿದ ಷೇರು ಯಾವುದು?

Odisha: ಗೋಪಾಲ್‌ ಪುರ್‌ ಬಂದರು ಅದಾನಿ ಕಂಪನಿ ತೆಕ್ಕೆಗೆ: 3,080 ಕೋಟಿ ರೂ.ಗೆ ಒಪ್ಪಂದ

Odisha: ಗೋಪಾಲ್‌ ಪುರ್‌ ಬಂದರು ಅದಾನಿ ಕಂಪನಿ ತೆಕ್ಕೆಗೆ: 3,080 ಕೋಟಿ ರೂ.ಗೆ ಒಪ್ಪಂದ

1-wqeqeqw

Married; ಮೆಕ್ಸಿಕೋದ ಉದ್ಯಮಿ ವರಿಸಿದ ಝೊಮ್ಯಾಟೊ ಸಿಇಒ?

Gold Price Soar: ಹಳದಿ ಲೋಹ ಚಿನ್ನದ ಬೆಲೆ ಸಾರ್ವಕಾಲಿಕ ದಾಖಲೆಯ ಏರಿಕೆ!

Gold Price Soar: ಹಳದಿ ಲೋಹ ಚಿನ್ನದ ಬೆಲೆ ಸಾರ್ವಕಾಲಿಕ ದಾಖಲೆಯ ಏರಿಕೆ!

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

4-naxal-

Mangaluru: ಶರಣಾಗುವ ನಕ್ಸಲರಿಗೆ ಸಿಗಲಿದೆ 7.50 ಲ.ರೂ. ಪ್ರೋತ್ಸಾಹಧನ

3-blthgdy

Belthangady: ತುಮಕೂರು ತ್ರಿಬ್ಬಲ್ ಮರ್ಡರ್ ಪ್ರಕರಣ;ಮನೆಮಂದಿಗೆ ಇಂದು ತಲುಪಿದ ಮೃತದೇಹ

2-mukthar-ansari

Mukhtar Ansari: ಕುಖ್ಯಾತ ಗ್ಯಾಂಗ್‌ಸ್ಟರ್‌, 5 ಬಾರಿ ಶಾಸಕ ಅನ್ಸಾರಿ ಸಾವು

1-24-friday

Horoscope: ಉದ್ಯೋಗ ಸ್ಥಾನದಲ್ಲಿ ಮೇಲಿನವರಿಂದ ಶ್ಲಾಘನೆ, ಮಹಿಳಾ ಉದ್ಯಮಿಗಳಿಗೆ ಯಶಸ್ಸು

dk-suresh

ಸಂಸದ ಡಿ.ಕೆ.ಸುರೇಶ್‌ ಆಸ್ತಿ ಮೌಲ್ಯ 593 ಕೋಟಿ ರೂ.!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.