CONNECT WITH US  

F&O ಮುನ್ನಾ ದಿನ 100 ಅಂಕ ಮುಗ್ಗರಿಸಿದ ಮುಂಬಯಿ ಶೇರು

ಮುಂಬಯಿ : ಡಾಲರ್‌ ಎದುರು ರೂಪಾಯಿ ಕುಸಿತ ಮತ್ತು ಜಾಗತಿಕ ಶೇರು ಮಾರುಕಟ್ಟೆಗಳಲ್ಲಿ ತೋರಿ ಬಂದಿರುವ ದೌರ್ಬಲ್ಯವನ್ನು ಅನುಸರಿಸಿ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್‌ ಸೂಚ್ಯಂಕ ಇಂದು ಬುಧವಾರದ ಆರಂಭಿಕ ವಹಿವಾಟಿನಲ್ಲಿ 100 ಅಂಕಗಳ ಮುಗ್ಗರಿಕೆಯನ್ನು ಕಂಡಿತು. 

ಎಪ್ರಿಲ್‌ ತಿಂಗಳ ವಾಯಿದೆ ವಹಿವಾಟು ಚುಕ್ತಾ ನಡೆಯುವ ನಾಳೆ ಗುರುವಾರಕ್ಕೆ ಮುನ್ನ ಹೂಡಿಕೆದಾರರು ಮತ್ತು ವಹಿವಟುದಾರರು ಎಚ್ಚರಿಕೆಯ ನಡೆ ತೋರಿದ ಕಾರಣ ಮುಂಚೂಣಿ ಶೇರುಗಳಾದ ಎನ್‌ಟಿಪಿಸಿ, ಡಾ. ರೆಡ್ಡಿ, ಒಎನ್‌ಜಿಸಿ, ಟಾಟಾ ಸ್ಟೀಲ್‌, ಏಶ್ಯನ್‌ ಪೇಂಟ್‌, ಸನ್‌ ಫಾರ್ಮಾ ಶೇ.1.29ರಷ್ಟು ಕುಸಿದವು. 

ಕಳೆದ ಎರಡು ದಿನಗಳ ಕಾಲ ನಿರಂತರ ಏರಿಕೆಯನ್ನು ಕಂಡಿದ್ದ ಸೆನ್ಸೆಕ್ಸ್‌ ಒಟ್ಟು 201.06 ಅಂಕಗಳನ್ನು ಸಂಪಾದಿಸಿತ್ತು.

ಬೆಳಗ್ಗೆ 11.15ರ ಹೊತ್ತಿಗೆ ಸೆನ್ಸೆಕ್ಸ್‌ 74.78 ಅಂಕಗಳ ನಷ್ಟದೊಂದಿಗೆ 34,541.86 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 28.20 ಅಂಕಗಳ ನಷ್ಟದೊಂದಿಗೆ10,586.20 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು. 

ಟಿಸಿಎಸ್‌, ಭಾರ್ತಿ ಏರ್‌ಟೆಲ್‌, ರಿಲಯನ್ಸ್‌, ಇನ್‌ಫೋಸಿಸ್‌, ಎಸ್‌ ಬ್ಯಾಂಕ್‌ ಶೇರುಗಳು ಅತ್ಯಂತ ಸಕ್ರಿಯವಾಗಿದ್ದವು.  

Trending videos

Back to Top