ನಾಲ್ಕು ದಿನಗಳ ಗೆಲುವಿನ ಬಳಿಕ ಸೋಲಿನ ಹಾದಿಗೆ ಮುಂಬಯಿ ಶೇರು
Team Udayavani, Mar 8, 2019, 5:45 AM IST
ಮುಂಬಯಿ : ನಾಲ್ಕು ದಿನಗಳ ನಿರಂತರ ಗೆಲುವಿನ ಹಾದಿಯಲ್ಲಿ ಸಾಗಿ ಬಂದ ಮುಂಬಯಿ ಶೇರು ಪೇಟೆ ಇಂದು ಸೋಲಿನ ಹಾದಿಗೆ ತೆವಳಿಕೊಂಡಿತು.
ಡಾಲರ್ ಎದುರು ರೂಪಾಯಿ ಹಿನ್ನಡೆ, ದೇಶೀಯ ಹೂಡಿಕೆ ಸಂಸ್ಥೆಗಳಿಂದ ಭಾರೀ ಶೇರು ಮಾರಾಟ, ಏಶ್ಯನ್ ಶೇರು ಪೇಟೆಗಳಲ್ಲಿ ಕಂಡು ಬಂದ ನಿರುತ್ಸಾಹ ಇವೇ ಮೊದಲಾದ ಕಾರಣಗಳಿಗೆ ಮುಂಬಯಿ ಶೇರು ಪೇಟೆಯಲ್ಲಿ ಹಿನ್ನಡೆ ಕಂಡು ಬಂತು.
ಬೆಳಗ್ಗೆ 11.15ರ ಸುಮಾರಿಗೆ ಸೆನ್ಸೆಕ್ಸ್ 59.64 ಅಂಕಗಳ ನಷ್ಟದೊಂದಿಗೆ 36,665.78 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 31.30 ಅಂಕಗಳ ನಷ್ಟದೊಂದಿಗೆ 11.026.90 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ಡಾಲರ್ ಎದುರು ರೂಪಾಯಿ ಇಂದಿನ ಆರಂಭಿಕ ವಹಿವಾಟಿನಲ್ಲಿ 18 ಪೈಸೆಗಳ ನಷ್ಟವನ್ನು ಅನುಭವಿಸಿ 70.18 ರೂ. ಮಟ್ಟದಲ್ಲಿ ವ್ಯವಹಾರ ನಿರತವಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gold Rate; ಚಿನ್ನದ ಬೆಲೆ ಒಂದೇ ದಿನ 1,530 ರೂ. ಇಳಿಕೆ: ಗ್ರಾಹಕರಿಗೆ ನಿರಾಳ
Share Market: ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 500ಕ್ಕೂ ಅಧಿಕ ಅಂಕ ಜಿಗಿತ
T20 ವಿಶ್ವಕಪ್ ನಲ್ಲಿ ಸ್ಕಾಟ್ಲೆಂಡ್- ಐರ್ಲೆಂಡ್ ಕ್ರಿಕೆಟ್ ತಂಡಗಳಿಗೆ ನಂದಿನಿ ಪ್ರಾಯೋಜಕತ್ವ
ಸೆನ್ಸೆಕ್ಸ್ 599 ಅಂಕ ಏರಿಕೆ; 4 ದಿನದ ಕುಸಿತಕ್ಕೆ ಬ್ರೇಕ್
Infosys; ಮೂರ್ತಿ ಮೊಮ್ಮಗನಿಗೆ ಸಿಕ್ತು 4.2 ಕೋಟಿ ಡಿವಿಡೆಂಡ್