CONNECT WITH US  

ಶೇರುಪೇಟೆ ಸೆನ್ಸೆಕ್ಸ್ 38,200ಕ್ಕೆ ಜಿಗಿತ,11,500 ಅಂಕ ದಾಟಿದ ನಿಫ್ಟಿ

ನವದೆಹಲಿ: ಶೇರುಗಳ ಉತ್ತಮ ಖರೀದಿ ಹಿನ್ನೆಲೆಯಲ್ಲಿ ಮುಂಬೈ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಹಾಗೂ ನಿಫ್ಟಿ ಸೋಮವಾರ ಆರಂಭದ ವಹಿವಾಟಿನಲ್ಲಿ ಜಿಗಿತ ಕಂಡಿದೆ.

ಇಂದಿನ ಆರಂಭಿಕ ವಹಿವಾಟಿನಲ್ಲಿ ಸೆನ್ಸೆಕ್ಸ್ 273.59 ಅಂಕಗಳ ಜಿಗಿತದೊಂದಿಗೆ ಶೇರುಪೇಟೆ 38,266.51 ಅಂಕಗಳ ಮಟ್ಟ ತಲುಪಿದೆ. ಬೆಳಗ್ಗಿನ 10.18ರ ವಹಿವಾಟಿನಲ್ಲಿ ಇಂಡೆಕ್ಸ್ 300ಕ್ಕೂ ಅಧಿಕ ಅಂಕಗಳ ಏರಿಕೆ ಕಂಡಿತ್ತು. ಅದೇ ರೀತಿ ರಾಷ್ಟ್ರೀಯ ಶೇರುಮಾರುಕಟ್ಟೆ ನಿಫ್ಟಿ ಸೂಚ್ಯಂಕ ಮೊದಲ ಬಾರಿಗೆ ಎಂಬಂತೆ 68.20 ಅಂಕಗಳ ಏರಿಕೆಯೊಂದಿಗೆ 11,538.95ರ ಮಟ್ಟ ತಲುಪಿದೆ.

ಇಂದಿನ ಟಾಪ್‌ ಗೇನರ್‌ಗಳು: ಸನ್‌ ಫಾರ್ಮಾ, ಎಸ್‌ ಬ್ಯಾಂಕ್‌, ಲೂಪಿನ್‌, ಬಜಾಜ್‌ ಫಿನಾನ್ಸ್‌,ಅಲ್‌ಟ್ರಾ ಟೆಕ್‌ ಸಿಮೆಂಟ್‌; ಟಾಪ್‌

ಲೂಸರ್‌ಗಳು : ಯುಪಿಎಲ್‌, ಹೀರೋ ಮೋಟೋ ಕಾರ್ಪ್‌, ಲಾರ್ಸನ್‌, ಎಚ್‌ ಪಿ ಸಿ ಎಲ್‌,ಅದಾನಿ ಪೋರ್ಟ್‌.

Trending videos

Back to Top