CONNECT WITH US  

ದಾಖಲೆ ಬರೆದ ಮುಂಬೈ ಶೇರುಪೇಟೆ ನಿಫ್ಟಿ ಮತ್ತು ಸೆನ್ಸೆಕ್ಸ್

ಮುಂಬೈ: ಮುಂಬೈ ಶೇರುಪೇಟೆಯ ವಹಿವಾಟು ಗುರುವಾರವೂ ದಾಖಲೆ ತಲುಪಿದ್ದು, ಮೊದಲ ಬಾರಿಗೆ ರಾಷ್ಟ್ರೀಯ ಶೇರುಪೇಟೆ ಸೂಚ್ಯಂಕ (ಎನ್ ಎಸ್ ಇ) ನಿಫ್ಟಿ 11,600ಕ್ಕೆ ಏರಿಕೆಯಾಗಿದೆ.

ಹೊಸ ಎತ್ತರಕ್ಕೆ ತಲುಪಿದ್ದ ಶೇರುಪೇಟೆ ವಹಿವಾಟಿನಲ್ಲಿ ಇಂದು ಮತ್ತೊಂದು ದಾಖಲೆ ನಿರ್ಮಿಸಿದ್ದು, ಮುಂಬೈ ಶೇರುಪೇಟೆ ಸಂವೇದಿ ಸೂಚ್ಯಂಕ(ಬಿಎಸ್ ಇ) 201.88 ಅಂಕಗಳಷ್ಟು ಏರಿಕೆಯಾಗಿ ದಿನದ ವಹಿವಾಟು 38, 487.63 ಅಂಶಗಳ ಹೊಸ ಎತ್ತರಕ್ಕೆ ಏರಿದೆ.

ನಿಫ್ಟಿ 50 ಅಂಕಗಳು ಹೆಚ್ಚಾಗಿ ಹೊಸ ಎತ್ತರವಾದ 11,600ಕ್ಕೆ ತಲುಪಿದೆ. ಬಕ್ರೀದ್ ಹಬ್ಬದ ನಿಮಿತ್ತ ಬುಧವಾರ ಶೇರು ಮಾರುಕಟ್ಟೆ ವಹಿವಾಟು ಇಲ್ಲವಾಗಿತ್ತು.

ದೇಶಿ ಸಾಂಸ್ಥಿಕ ಹೂಡಿಕೆದಾರರ ನಿರಂತರವಾದ ಪ್ರಕ್ರಿಯೆ ಮುಂದುವರಿದ ಮತ್ತು ಜಾಗತಿಕ ಮಾರುಕಟ್ಟೆಗಳಲ್ಲಿನ ಸಕಾರಾತ್ಮಕ ಬೆಳವಣಿಗೆಯು ಶೇರುಪೇಟೆ ಸೂಚ್ಯಂಕ ದಾಖಲೆ ಮಟ್ಟಕ್ಕೆ ತಲುಪುವಂತೆ ಮಾಡಿದೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.

Trending videos

Back to Top