CONNECT WITH US  

ಭರ್ಜರಿ ಜಿಗಿತ ಕಂಡ ಮುಂಬೈ ಶೇರು ಮಾರುಕಟ್ಟೆ ಸೆನ್ಸೆಕ್ಸ್ & ನಿಫ್ಟಿ

ಮುಂಬೈ: ಮುಂಬೈ ಶೇರುಪೇಟೆಯ ವಹಿವಾಟು ಗುರುವಾರ ದಾಖಲೆ ಮಟ್ಟಕ್ಕೆ ತಲುಪುವ ಮೂಲಕ ವಹಿವಾಟು ಅಂತ್ಯಗೊಂಡಿದೆ. ಮೊದಲ ಬಾರಿಗೆ ರಾಷ್ಟ್ರೀಯ ಶೇರುಪೇಟೆ ಸೂಚ್ಯಂಕ (ಎನ್ ಎಸ್ ಇ) ನಿಫ್ಟಿ ಕೂಡಾ ಭಾರೀ ಏರಿಕೆ ಕಂಡಿದೆ.

ಬಿಎಸ್ ಇ(ಮುಂಬೈ ಶೇರುಪೇಟೆ ಸಂವೇದಿ ಸೂಚ್ಯಂಕ) ಸೆನ್ಸೆಕ್ಸ್ ದಿನಾಂತ್ಯದಲ್ಲಿ 51.01 ಅಂಕಗಳಷ್ಟು ಏರಿಕೆಯಾಗಿ ವಹಿವಾಟು 38,336.76 ಅಂಶಗಳೊಂದಿಗೆ ಮುಕ್ತಾಯಗೊಂಡಿದೆ.

ಇಂದು ಬೆಳಗ್ಗಿನ ವಹಿವಾಟಿನಲ್ಲಿ ನಿಫ್ಟಿ ದಾಖಲೆಯ 11,600 ಮಟ್ಟ ದಾಟಿ, 11.85 ಅಂಕಗಳ ಏರಿಕೆಯೊಂದಿಗೆ 11,582.75 ಅಂಶಗಳೊಂದಿಗೆ ವಹಿವಾಟು ಅಂತ್ಯಗೊಂಡಿದೆ.

ದೇಶಿ ಸಾಂಸ್ಥಿಕ ಹೂಡಿಕೆದಾರರ ನಿರಂತರವಾದ ಪ್ರಕ್ರಿಯೆ ಮುಂದುವರಿದ ಮತ್ತು ಜಾಗತಿಕ ಮಾರುಕಟ್ಟೆಗಳಲ್ಲಿನ ಸಕಾರಾತ್ಮಕ ಬೆಳವಣಿಗೆಯು ಶೇರುಪೇಟೆ ಸೂಚ್ಯಂಕ ದಾಖಲೆ ಮಟ್ಟಕ್ಕೆ ತಲುಪುವಂತೆ ಮಾಡಿದೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.

ಟಾಪ್ ಗೇಯ್ನ್: ಐಟಿ, ಫಾರ್ಮಾ ಮತ್ತು ಎನರ್ಜಿ ಸ್ಟಾಕ್ಸ್. ಎಲ್ ಅಂಡ್ ಟಿ. ರಿಲಯನ್ಸ್ ಇಂಡಸ್ಟ್ರೀಸ್, ಎನ್ ಟಿಪಿಸಿ ಹಾಗೂ ಅದಾನಿ ಪೋರ್ಟ್ಸ್. ಟೆಕ್ ಮಹೀಂದ್ರ, ಡಾ.ರೆಡ್ಡಿ, ಎಚ್ ಸಿಎಲ್ ಮತ್ತು ಲೂಪಿನ್ ನಿಫ್ಟಿಯ ಟಾಪ್ ಗೇಯ್ನನರ್ ಗಳಾಗಿದ್ದಾರೆ.

Trending videos

Back to Top