CONNECT WITH US  

ನಿರಂತರ ಎರಡನೇ ದಿನವೂ ಸೆನ್ಸೆಕ್ಸ್‌, ನಿಫ್ಟಿ ಹೊಸ ಸಾರ್ವಕಾಲಿಕ ಎತ್ತರ

ಮುಂಬಯಿ : ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್‌ ಸೂಚ್ಯಂಕ ಇಂದು ಮಂಗಳವಾರ, ನಿರಂತರ ಎರಡನೇ ದಿನವೂ, ಹೊಸ ಸಾರ್ವಕಾಲಿಕ ದಾಖಲೆಯನ್ನು ನಿರ್ಮಿಸಿದೆ. 

ಇಂದಿನ ಬೆಳಗ್ಗಿನ ಆರಂಭಿಕ ವಹಿವಾಟಿನಲ್ಲಿ 182 ಅಂಕಗಳ ಜಿಗಿತವನ್ನು ಕಂಡ ಸೆನ್ಸೆಕ್ಸ್‌ 38,875.86 ಅಂಕಗಳ ಹೊಸ ಸಾರ್ವಕಾಲಿಕ ದಾಖಲೆಯ ಮಟ್ಟಕ್ಕೇರುವ ಸಾಧನೆ ಮಾಡಿತು.

ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 11,751.20 ಅಂಕಗಳ ಹೊಸ ಸಾರ್ವಕಾಲಿಕ ದಾಖಲೆಯ ಎತ್ತರಕ್ಕೇರಿ ದಿನದ ವಹಿವಾಟಿಗೆ ಶುಭಾರಂಭ ನೀಡಿತು. 

ಜಾಗತಿಕ ಶೇರು ಮಾರುಕಟ್ಟೆಗಳಲ್ಲಿ  ಸ್ಥಿರತೆ ಮತ್ತು ತೇಜಿ ಕಂಡುಬಂದಿರುವುದನ್ನು ಅನುಸರಿಸಿ ಮುಂಬಯಿ ಶೇರು ಪೇಟೆಯಲ್ಲಿಂದು ವಿದೇಶಿ ಮತ್ತು ದೇಶೀ ಹೂಡಿಕೆದಾರ ಸಂಸ್ಥೆಗಳು ಮುಂಚೂಣಿ ಶೇರುಗಳ ಭರಾಟ ಖರೀದಿಯಲ್ಲಿ ನಿರತವಾದವು. 

ಬೆಳಗ್ಗೆ 10.30ರ ಹೊತ್ತಿಗೆ ಸೆನ್ಸೆಕ್ಸ್‌ 156.66 ಅಂಕಗಳ ಮುನ್ನಡೆಯನ್ನು ಕಾಯ್ದುಕೊಂಡು 38,850.77 ಅಂಕಗಳ ಮಟ್ಟದಲ್ಲೂ ನಿಫ್ಟಿ 45.50 ಅಂಕಗಳ ಏರಿಕೆಯೊಂದಿಗೆ 11,737.50 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು. 

ಭಾರ್ತಿ ಇನ್‌ಫ್ರಾಟೆಲ್‌, ರಿಲಯನ್ಸ್‌, ಎಸ್‌ ಬ್ಯಾಂಕ್‌, ಐಸಿಐಸಿಐ ಬ್ಯಾಂಕ್‌, ಮಾರುತಿ ಸುಜುಕಿ ಶೇರುಗಳು ಇಂದು ಅತ್ಯಂತ ಸಕ್ರಿಯವಾಗಿದ್ದವು. 

ಟಾಪ್‌ ಗೇನರ್‌ಗಳು : ಎನ್‌ಟಿಪಿಸಿ, ಸಿಪ್ಲಾ, ಹಿಂಡಾಲ್ಕೋ, ಕೋಲ್‌ ಇಂಡಿಯಾ, ಮಾರುತಿ ಸುಜುಕಿ; ಟಾಪ್‌ ಲೂಸರ್‌ಗಲು : ಎಸ್‌ ಬ್ಯಾಂಕ್‌, ಟೈಟಾನ್‌ ಕಂಪೆನಿ, ಗ್ರಾಸಿಂ, ಎಸ್‌ಬಿಐ, ಐಡಿಯಾ ಸೆಲ್ಯುಲರ್‌. 

ಇಂದಿನ ಬೆಳಗ್ಗಿನ ಆರಂಭಿಕ ವಹಿವಾಟಿನಲ್ಲಿ  ಡಾಲರ್‌ ಎದುರು ರೂಪಾಯಿ ಇಂದು 10 ಪೈಸೆಯಷ್ಟು ಸುಧಾರಿಸಿ 70.06 ರೂ ಮಟ್ಟದಲ್ಲಿ ವ್ಯವಹಾರ ನಿರತವಾಗಿತ್ತು. 

Trending videos

Back to Top