CONNECT WITH US  

ಡಾಲರ್‌ ಎದುರು ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ಕುಸಿದ ರೂಪಾಯಿ

ಮುಂಬಯಿ : ಡಾಲರ್‌ ಎದುರು ರೂಪಾಯಿ ಇಂದು ಬುಧವಾರ ಬೆಳಗ್ಗೆ 42 ಪೈಸೆಯಷ್ಟು ಕುಸಿದು ಸಾರ್ವಕಾಲಿಕ ಕನಿಷ್ಠ ಮಟ್ಟವಾಗಿ 70.52 ರೂ. ಮಟ್ಟಕ್ಕೆ ಜಾರಿತು.

ವಿದೇಶಿ ಬಂಡವಾಳದ ನಿರಂತರ ಹೊರ ಹರಿವು ಮತ್ತು ತೈಲ ಸಂಸ್ಕರಣದಾರರಿಂದ ಡಾಲರ್‌ಗಾಗಿ ಹೆಚ್ಚಿದ ಬೇಡಿಕೆ ಪರಿಣಾಮವಾಗಿ ರೂಪಾಯಿ ನಿರಂತರವಾಗಿ ತನ್ನ ಡಾಲರ್‌ ಎದುರು ತನ್ನ ದೌರ್ಬಲ್ಯವನ್ನು ತೋರುತ್ತಿದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ಇತರ ಕೆಲವು ಕರೆನ್ಸಿಗಳ ಎದುರು ಡಾಲರ್‌ ಶಕ್ತಿಶಾಲಿಯಾಗುತ್ತಿರುವುದರಿಂದಲೂ ರೂಪಾಯಿ ಯ ಮೇಲೆ ಒತ್ತಡ ಹೆಚ್ಚುತ್ತಿರುವುದರ ಅದರ ಕುಸಿತಕ್ಕೆ ಕಾರಣವಾಗಿದೆ.

Trending videos

Back to Top