CONNECT WITH US  

ಮಂಕಾದ ವಿಶ್ವ ಶೇರು ಪೇಟೆ,ರೂಪಾಯಿ ಕುಸಿತ : ಸೆನ್ಸೆಕ್ಸ್‌ 61 ಅಂಕ ನಷ್ಟ

ಮುಂಬಯಿ : ಅಮೆರಿಕ - ಚೀನ ನಡುವಿನ ವಾಣಿಜ್ಯ ಸಮರದಿಂದಾಗಿ ಏರ್ಪಟ್ಟಿರುವ ಅನಿಶ್ಚಿತತೆ, ಏಶ್ಯನ್‌ ಶೇರು ಪೇಟೆಗಳಲ್ಲಿ ತೋರಿ ಬಂದಿರುವ ನೇತ್ಯಾತ್ಮಕತೆ, ದುರ್ಬಲ ರೂಪಾಯಿ, ವಿದೇಶಿ ಬಂಡವಾಳದ ಹೊರ ಹರಿವು - ಇವೇ ಮೊದಲಾದ ಕಾರಣಗಳಿಂದಾಗಿ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್‌ ಸೂಚ್ಯಂಕ ಇಂದು 61 ಅಂಕಗಳ ನಷ್ಟಕ್ಕೆ ಗುರಿಯಾಗಿ ದಿನದ ವಹಿವಾಟನ್ನು 34,811.60 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.

ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 29 ಅಂಕಗಳ ನಷ್ಟಕ್ಕೆ ಗುರಿಯಾಗಿ ದಿನದ ವಹಿವಾಟನ್ನು 10,477ರ ಮಟ್ಟದಲ್ಲಿ ಕೊನೆಗೊಳಿಸಿತು. 

ಡಾಲರ್‌ ಎದುರು ರೂಪಾಯಿ ಇಂದು ವಹಿವಾಟಿನ ನಡುವೆ 67 ಪೈಸೆಯ ಕುಸಿತವನ್ನು ಕಂಡು 73.12 ರೂ. ಮಟ್ಟಕ್ಕೆ ತಳ್ಳಲ್ಪಟ್ಟದ್ದು ಶೇರು ಮಾರುಕಟ್ಟೆಗೆ ಅಪಥ್ಯವೆನಿಸಿತು. 

ಕಳೆದ ಶುಕ್ರವಾರ ಸೆನ್ಸೆಕ್ಸ್‌  580 ಅಂಕಗಳ ಜಿಗಿತವನ್ನು ದಾಖಲಿಸಿತ್ತು. 

ಮುಂಬಯಿ ಶೇರು ಪೇಟೆಯಲ್ಲಿಂದು ಒಟ್ಟು 2,792 ಕಂಪೆನಿಗಳ ಶೇರುಗಳು ವಹಿವಾಟಿಗೆ ಒಳಪಟ್ಟವು; 1,290 ಶೇರುಗಳು ಮುನ್ನಡೆ ಸಾಧಿಸಿದವು; 1,308 ಶೇರುಗಳು ಹಿನ್ನಡೆಗೆ ಗುರಿಯಾದವು; 194 ಶೇರುಗಳು ಯಾವುದೇ ಬದಲಾವಣೆ ಕಾಣಲಿಲ್ಲ. 

Trending videos

Back to Top