CONNECT WITH US  

ಫೆಡ್‌ ರೇಟ್‌ ಏರಿಕೆ ಸುಳಿವು: ಸೆನ್ಸೆಕ್ಸ್‌ ನೂರಕ್ಕೂ ಅಧಿಕ ಅಂಕ ನಷ್ಟ

ಮುಂಬಯಿ : ಅಮೆರಿಕದ ಫೆಡರಲ್‌ ರಿಸರ್ವ್‌ ಬ್ಯಾಂಕ್‌ ನಿನ್ನೆ ಗುರುವಾರ ರಾತ್ರಿ ತನ್ನ ಬಡ್ಡಿ ದರವನ್ನು ಯಥಾವತ್‌ ಉಳಿಸಿಕೊಳ್ಳಲು ನಿರ್ಧರಿಸಿದ ಹೊರತಾಗಿಯೂ ಮುಂದಿನ ತಿಂಗಳಲ್ಲಿ ಬಡ್ಡಿ ದರ ಏರಿಸುವ ಸುಳಿವು ನೀಡಿರುವ ಹಿನ್ನೆಲೆಯಲ್ಲಿ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್‌ ಸೂಚ್ಯಂಕ ಇಂದು ಶುಕ್ರವಾರದ ಆರಂಭಿಕ ವಹಿವಾಟಿನಲ್ಲಿ ನೂರಕ್ಕೂ ಅಧಿಕ ಅಂಕಗಳ ನಷ್ಟಕ್ಕೆ ಗುರಿಯಾಯಿತು.

ಬುಧವಾರದಂದು ನಡೆದಿದ್ದ  ವಿಶೇಷ ಮುಹೂರತ್‌ ಟ್ರೇಡಿಂಗ್‌ ನಲ್ಲಿ 246 ಅತ್ಯುತ್ತಮ ಏರಿಕೆಯನ್ನು ದಾಖಲಿಸಿದ್ದ ಸೆನ್ಸೆಕ್ಸ್‌ ಇಂದು ಶುಕ್ರವಾರ ಬೆಳಗ್ಗೆ 10.30ರ ಹೊತ್ತಿಗೆ 48.29 ಅಂಕಗಳ ನಷ್ಟಕ್ಕೆ ಗುರಿಯಾಗಿ 35,189.39 ಅಂಕಗಳ ಮಟ್ಟದಲ್ಲೂ, ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 10.50 ಅಂಕಗಳ ನಷ್ಟದೊಂದಿಗೆ 10,587.90 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.

ಇಂದು ಬೆಳಗ್ಗಿನ ವಹಿವಾಟಿನಲ್ಲಿ ಡಾಲರ್‌ ಎದುರು ರೂಪಾಯಿ 35 ಪೈಸೆಯ ಚೇತರಿಕೆಯನ್ನು ಕಂಡು 72.65 ರೂ. ಮಟ್ಟದಲ್ಲಿ ವ್ಯವಹಾರ ನಿರತವಾಗಿತ್ತು. 

ಇಂದು ಬೆಳಗ್ಗಿನ ವಹಿವಾಟಿನಲ್ಲಿ ಎಸ್‌ ಬ್ಯಾಂಕ್‌, ರಿಲಯನ್ಸ್‌, ಎಕ್ಸಿಸ್‌ ಬ್ಯಾಂಕ್‌, ಎಚ್‌ ಡಿ ಎಫ್ ಸಿ, ಎಸ್‌ಬಿಐ ಶೇರುಗಳು ಅತೀ ಹೆಚ್ಚು ಕ್ರಿಯಾಶೀಲವಾಗಿದ್ದವು.

ಬೆಳಗ್ಗಿನ ಟಾಪ್‌ ಗೇನರ್‌ಗಳು : ಎಸ್‌ ಬ್ಯಾಂಕ್‌, ಎಚ್‌ಪಿಸಿಎಲ್‌, ಅದಾನಿ ಪೋರ್ಟ್‌, ಏಶ್ಯನ್‌ ಪೇಂಟ್‌, ಸನ್‌ ಫಾರ್ಮಾ; ಟಾಪ್‌ ಲೂಸರ್‌ಗಳು : ಭಾರ್ತಿ ಏರ್‌ಟೆಲ್‌, ವಿಪ್ರೋ, ಜೆಎಸ್‌ಡಬ್ಲ್ಯು, ಟಾಟಾ ಸ್ಟೀಲ್‌, ಇನ್‌ಫೋಸಿಸ್‌. 

Trending videos

Back to Top