CONNECT WITH US  

ಜಾಗ್ವಾರ್‌ ರೋವರ್‌ : ವಿಶ್ವಾದ್ಯಂತದ 4,500 ಉದ್ಯೋಗಿಗಳು ಮನೆಗೆ

ಲಂಡನ್‌ : ಭಾರತೀಯ ಮಾಲಕತ್ವದ ಕಾರು ಉತ್ಪಾದನೆಯ  ಜಾಗ್ವಾರ್‌ ಲ್ಯಾಂಡ್‌ ರೋವರ್‌ ಸಂಸ್ಥೆ ವಿಶ್ವಾದ್ಯಂತದ ತನ್ನ ಸುಮಾರು 4,500 ಉದ್ಯೋಗಿಗಳನ್ನು ಮನೆಗೆ ಕಳುಹಿಸಲಿದೆ.

ಚೀನದಲ್ಲಿನ ಆರ್ಥಿಕ ಹಿನ್ನಡೆಯ ಫ‌ಲವಾಗಿ ಕಾರು ಮಾರಾಟ ಕುಸಿದಿರುವುದು ಮತ್ತು ಬ್ರೆಕ್ಸಿಟ್‌ ಅನಂತರದಲ್ಲಿ  ಬ್ರಿಟನ್‌ ವಾಣಿಜ್ಯ  ಸ್ಪರ್ಧಾತ್ಮಕತೆ ಶಂಕಾಸ್ಪದ ವಾಗಿರುವುದೇ ತನ್ನ ಈ ನಿರ್ಧಾರಕ್ಕೆ ಕಾರಣವೆಂದು ಸಂಸ್ಥೆಯು ಹೇಳಿಕೊಂಡಿದೆ.

ಜಾಗ್ವಾರ್‌ ಲ್ಯಾಂಡ್‌ ರೋವರ್‌ ಸಂಸ್ಥೆಯು ತನ್ನ ಉದ್ಯಮವನ್ನು ಜಗದಗಲ ವ್ಯಾಪಿಸುತ್ತಿರುವ ಹೊರತಾಗಿಯೂ ವಿಶ್ವಾದ್ಯಂತದ ತನ್ನ ಸುಮಾರು 4,500 ಉದ್ಯೋಗಿಗಳನ್ನು ಕೈಬಿಡಲು ನಿರ್ಧರಿಸಿದೆ ಎಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ. 

2018ರಲ್ಲಿ ಸುಮಾರು 1,500 ಮಂದಿ ಉದ್ಯೋಗಿಗಳು ಸಂಸ್ಥೆಯನ್ನು ತೊರೆದಿದ್ದಾರೆ. ಅದಲ್ಲದೆ ಇನ್ನೂ 4,500 ಉದ್ಯೋಗಿಗಳನ್ನು ಕೈಬಿಡಲು ಸಂಸ್ಥೆ ತೀರ್ಮಾನಿಸಿದೆ ಎಂದು ಪ್ರಕಟನೆ ತಿಳಿಸಿದೆ. 

Trending videos

Back to Top