CONNECT WITH US  

241 ಅಂಕ ನಷ್ಟಕ್ಕೆ ಗುರಿಯಾದ ಸೆನ್ಸೆಕ್ಸ್‌,ನಿಫ್ಟಿ 10,831ರ ಮಟ್ಟಕ್ಕೆ

ಮುಂಬಯಿ : ಹಣದುಬ್ಬರ, ಕೈಗಾರಿಕಾ ಉತ್ಪಾದನೆಯೇ ಮೊದಲಾದ ಪ್ರಮುಖ ಆರ್ಥಿಕ ಅಂಕಿ ಅಂಶಗಳನ್ನು ಸರಕಾರ ಇಂದು ಬಿಡುಗಡೆ ಮಾಡುವ ಮುನ್ನವೇ ನಿರಾಶೆ ಕವಿದಂತೆ ಕಂಡು ಬಂದ ಮುಂಬಯಿ ಶೇರು ಪೇಟೆ ಇಂದು ಮಂಗಳವಾರದ ವಹಿವಾಟನ್ನು  241.41 ಅಂಕಗಳ ನಷ್ಟದೊಂದಿಗೆ 36,153.62 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು. 

ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 57.40 ಅಂಕಗಳ ನಷ್ಟದೊಂದಿಗೆ ದಿನದ ವಹಿವಾಟನ್ನು 10,831.40 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು. ಕಳೆದ ಮೂರು ದಿನಗಳ ವಹಿವಾಟಿನಲ್ಲಿ ಸೆನ್ಸೆಕ್ಸ್‌ ಒಟ್ಟು 580 ಅಂಕಗಳನ್ನು ಕಳೆದುಕೊಂಡಿದೆ.

ಇಂದು ಟಾಪ್‌ ಲೂಸರ್‌ಗಳಾಗಿ ಮೂಡಿ ಬಂದ ಹೀರೋ ಮೋಟೋ ಕಾರ್ಪ್‌, ಎಚ್‌ ಡಿ ಎಫ್ ಸಿ, ಎಸ್‌ಬಿಐ, ಇನ್‌ಫೋಸಿಸ್‌, ಎಚ್‌ ಸಿ ಎಲ್‌ ಟೆಕ್‌ , ಐಸಿಐಸಿಐ ಬ್ಯಾಂಕ್‌, ಬಜಾಜ್‌ ಫಿನಾನ್ಸ್‌ , ಒಎನ್‌ಜಿಸಿ, ಬಜಾಜ್‌ ಆಟೋ ಮತ್ತು ಇಂಡಸ್‌ ಇಂಡ್‌ ಬ್ಯಾಂಕ್‌ ಶೇರುಗಳು ಶೇ.2.63 ರ ನಷ್ಟವನ್ನು ಅನುಭವಿಸಿದವು. 

ಮುಂಬಯಿ ಶೇರು ಪೇಟೆಯಲ್ಲಿಂದು ಒಟ್ಟು  2,670 ಕಂಪೆನಿಗಳ ಶೇರುಗಳು ವಹಿವಾಟಿಗೆ ಒಳಪಟ್ಟವು; ಈ ಪೈಕಿ 1,023 ಶೇರುಗಳು ಮುನ್ನಡೆ ಸಾಧಿಸಿದವು; 1,516 ಶೇರುಗಳು ಹಿನ್ನಡೆಗೆ ಗುರಿಯಾದವು; 131 ಶೇರುಗಳ ಧಾರಣೆ ಯಾವುದೇ ಬದಲಾವಣೆ ಕಾಣಲಿಲ್ಲ. 


Trending videos

Back to Top