ಜೆಟ್ ಏರ್ ವೇಸ್ ಆರ್ಥಿಕ ಬಿಕ್ಕಟ್ಟು; ಮತ್ತೆ 13 ವಿಮಾನಗಳ ಸೇವೆ ಸ್ಥಗಿತ
Team Udayavani, Mar 23, 2019, 4:39 AM IST
ನವದೆಹಲಿ: ಆರ್ಥಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಇದೀಗ ಜೆಟ್ ವೇರ್ ವೇಸ್ ಏಪ್ರಿಲ್ ಅಂತ್ಯದವರೆಗೆ 13 ಅಂತಾರಾಷ್ಟ್ರೀಯ ಮಾರ್ಗಗಳಲ್ಲಿ ಸೇವೆಯನ್ನು ಸ್ಥಗಿತಗೊಳಿಸಿದೆ ಎಂದು ಏರ್ ಲೈನ್ಸ್ ಮೂಲಗಳು ತಿಳಿಸಿವೆ.
ಪುಣೆ-ಸಿಂಗಾಪುರ, ಮುಂಬೈ, ಮ್ಯಾಂಚೆಸ್ಟರ್ ನಡುವಿನ ವಿಮಾನ ಹಾರಾಟ ಸೇವೆಯನ್ನು ಸ್ಥಗಿತಗೊಳಿಸಿದೆ. ಕಳೆದ ಡಿಸೆಂಬರ್ ನಲ್ಲಿಯೇ ಪುಣೆ ಅಬುಧಾಬಿ ವಿಮಾನ ಹಾರಾಟವನ್ನು ಸ್ಥಗಿತಗೊಳಿಸಿತ್ತು.
ದೆಹಲಿ ಟು ಅಬುಧಾಬಿ(9 ವಾರ), ದಾಮನ್(14 ವಾರ), ಢಾಕಾ(11ವಾರ), ಹಾಂಗಾಕಾಂಗ್ ಮತ್ತು ರಿಯಾದ್ ವಿಮಾನ ಹಾರಾಟವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ಬಾಡಿಗೆ ಹಣ ಪಾವತಿಸಲು ಸಾಧ್ಯವಾಗದ ಪರಿಣಾಮ ಮತ್ತೆ ಏಳು ವಿಮಾನಗಳ ಹಾರಾಟ ಸ್ಥಗಿತಗೊಳಿಸುವುದಾಗಿ ತಿಳಿಸಿದ್ದು, ಇದರೊಂದಿಗೆ ಸ್ಥಗಿತಗೊಳಿಸಿದ ವಿಮಾನಗಳ ಸಂಖ್ಯೆ 54ಕ್ಕೆ ಏರಿದಂತಾಗಿದೆ.