CONNECT WITH US  

ಸಮಾಜದಲ್ಲಿ ಮಾಧ್ಯಮ ಪಾತ್ರ ಪ್ರಮುಖ

ಚಾಮರಾಜನಗರ: ಮಾಧ್ಯಮಗಳು ಸಮಾಜವನ್ನು ತಪ್ಪು ದಾರಿಗೆ ಹೋಗದಂತೆ ಎಚ್ಚರ ವಹಿಸಿ ಉತ್ತಮ ಸಮಾಜವನ್ನು ನಿರ್ಮಾಣ ಮಾಡುವುದರಲ್ಲಿ ಬಹುದೊಡ್ಡ ಪಾತ್ರ ವಹಿಸುತ್ತಿವೆ ಎಂದು ವಿಧಾನ ಪರಿಷತ್‌ ಮಾಜಿ ಸದಸ್ಯ, ಬಿಜೆಪಿ ಜಿಲ್ಲಾಧ್ಯಕ್ಷ ಪ್ರೊ.ಕೆ.ಆರ್‌. ಮಲ್ಲಿಕಾರ್ಜುನಪ್ಪ ಹೇಳಿದರು.

ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ಪತ್ರಿಕಾ ಭವನದ ಮುಂಭಾಗ ಭಾನುವಾರ ನಡೆದ ಪತ್ರಿಕಾ ದಿನಾಚರಣೆ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿ, ಶಿಕ್ಷಕರು ವಿದ್ಯಾರ್ಥಿಗಳ ತಪ್ಪುಗಳನ್ನು ತಿದ್ದಿ ಉತ್ತಮ ಮನುಷ್ಯನ್ನಾಗಿ ಮಾಡಲು ಶ್ರಮಿಸುತ್ತಾರೆ. ಅದೇ ರೀತಿ ಪತ್ರಕರ್ತರು ಸಹ ಶಿಕ್ಷಕರಂತೆ ಸಮಾಜವನ್ನು
ಸರಿದಾರಿಗೆ ಹೋಗುವಂತೆ ಎಚ್ಚರ ವಹಿಸುತ್ತಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪತ್ರಿಕಾ ರಂಗಕ್ಕೆ ಹೆಚ್ಚಿನ ಗೌರವವಿದೆ. ಇದನ್ನು ನಾಲ್ಕನೇ ಅಂಗ ಎಂದು ಬಣ್ಣಿಸಲಾಗಿದೆ ಎಂದರು.

ಸಮಾಜ, ವ್ಯವಸ್ಥೆ ಸರಿಪಡಿಸಲು ಮಾಧ್ಯಮ ಶ್ರಮಿಸಲಿ: ಸಮಾಜ ಮತ್ತು ವ್ಯವಸ್ಥೆಯನ್ನು ಸರಿಪಡಿಸುವ ನಿಟ್ಟಿನಲ್ಲಿ ಮಾಧ್ಯಮಗಳು ಶ್ರಮಿಸಬೇಕು. ದೃಶ್ಯ ಹಾಗೂ ಮುದ್ರಣ ಮಾಧ್ಯಮಗಳು ನೈಜ ವರದಿಯನ್ನು ಮಾಡುವ
ಮೂಲಕ ವಾಸ್ತವಾಂಶವನ್ನು ಜನರಿಗೆ ತಿಳಿಸ ಬೇಕು. ಹಾಗೂ ನಂಬಿಕೆ ಬರುವ ರೀತಿ ಯಲ್ಲಿ ತಮ್ಮ ವರದಿಗಾರಿಕೆ ಮತ್ತು ಸಂಪಾದಕೀಯಗಳು ಮೂಡಿ ಬರಬೇಕು. ವಸ್ತುನಿಷ್ಠ ವರದಿಗಳಿಂದ ಸಮಾಜದ ಸ್ವಾಸ್ಥ್ಯ ಕಾಪಾಡಲು ಸಾಧ್ಯ.
ಕಾರ್ಲ್ಮಾರ್ಕ್ಸ್ ಸಹ ಪ್ರತಕರ್ತರಾಗಿ ಸೇವೆ ಸಲ್ಲಿಸಿದವರು. ಬಂಡಾವಾಳ ಶಾಹಿಗಳ ವಿರುದ್ಧ ಕಾರ್ಮಿಕರಿಗೆ ಆಗುತ್ತಿದ್ದ ಶೋಷಣೆಯನ್ನು ತಮ್ಮ ಮಾಧ್ಯಮಗಳಲ್ಲಿ ಪ್ರಕಟಿಸುವ ಮೂಲಕ ರಷ್ಯಾ ಕ್ರಾಂತಿಗೆ ನಾಂದಿ ಹಾಡಿದರು. ಸ್ವಾತಂ
ತ್ರ ಪೂರ್ವದಲ್ಲಿ ಪತ್ರಿಕೆಗಳು ಗಮರ್ನಾಹವಾದ ಸಾಧನೆ ಮಾಡಿವೆ. ಗಾಂಧೀಜಿ ಅವರು ಪತ್ರಿಕೆಗಳ ಮೂಲಕವೇ ಹೆಚ್ಚು ಪ್ರಚಲಿ ತರಾದವರು. ಅವರು ಬ್ರಿಟಿಷರ ವಿರುದ್ಧ ಹೋರಾಟಕ್ಕೆ ಕರೆ ನೀಡಿದರೆ ಲಕ್ಷಾಂತರ ಮಂದಿ ಭಾಗಹಿಸುತ್ತಿದ್ದರು ಎಂದು ಬಣ್ಣಿಸಿದರು.

ಪತ್ರಿಕೆಗಳಲ್ಲಿ ವರದಿ ಮಾಡುವುದು ಸವಾಲಿನ ಕೆಲಸ: ಸುದ್ದಿಯನ್ನು ಪ್ರಕಟಿಸುವ ಮುನ್ನ ಅದರ ನೈಜತೆ ಅರಿತುಕೊಳ್ಳುವುದು ಒಳಿತು. ಇದರಿಂದ ಮಾಧ್ಯಮಗಳ ಬಗ್ಗೆ ಜನರ ಮನಸ್ಸಿನಲ್ಲಿ ಒಳ್ಳೆಯ ಭಾವನೆ ಮೂಡುತ್ತದೆ.
ಇಂದು ದೃಶ್ಯ ಮಾಧ್ಯಮಗಳು ಮೂಢನಂಬಿಕೆ ಬಿತ್ತುವ ಸುದ್ದಿಗಳನ್ನು ಪ್ರಕಟಿಸುತ್ತಿವೆ. ಬೇವಿನ ಮರದಲ್ಲಿ ಹಾಲು ಸುರಿಯುವುದನ್ನೆಲ್ಲ ವರದಿ ಮಾಡುತ್ತಿವೆ. ಇಂಥ ಪ್ರವೃತ್ತಿ ಬಿಟ್ಟು ವಿಚಾರ ಪ್ರಚೋದಕ ಸುದ್ದಿಗಳನ್ನು ಬಿತ್ತರಿಸಬೇಕು
ಎಂದು ಸಲಹೆ ನೀಡಿದರು. 

ಪ್ರಶಸ್ತಿ ಪ್ರದಾನ: ಪತ್ರಕರ್ತ ದಿ.ಸತ್ಯನಾರಾ ಯಣ ಪ್ರಶಸ್ತಿಯನ್ನು ಪತ್ರಕರ್ತ ನಾಗೇಶ್‌ ಸೋಸ್ಲೆ ಅವರಿಗೆ ಹಾಗೂ ಸಿ.ಸಿದ್ದೇಗೌಡ ಸ್ಮಾರಕ ಪ್ರಶಸ್ತಿಯನ್ನು ಪತ್ರಕರ್ತ ರಾಜೇಶ್‌ ಬೆಂಡರ ವಾಡಿ ಅವರಿಗೆ ಪ್ರದಾನ ಮಾಡಲಾಯಿತು.
ಕಸಾಪ ಜಿಲ್ಲಾಧ್ಯಕ್ಷ ಬಿ.ಎಸ್‌.ವಿನಯ್‌ ಡಿವಿಜಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ದರು. ಸಾಹಿತಿ ಕೆ.ವೆಂಕಟರಾಜು ಮಾತನಾಡಿ ದರು. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಸ್‌.ಎಂ.ನಂದೀಶ್‌ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ದೇವ ರಾಜು ಕಪ್ಪಸೋಗೆ, ರಾಜ್ಯ ಕಾರ್ಯಕಾರಿಣಿ ಸದಸ್ಯ ಅಬ್ರಹಾಂ ಡಿಸಿಲ್ವಾ ಉಪಸ್ಥಿತರಿದ್ದರು.


Trending videos

Back to Top