ಆದಾಯ, ಗುರಿ ವಿವರ ಮಂಡಿಸಿ


Team Udayavani, Jan 20, 2017, 3:02 PM IST

16_12.jpg

ಹನೂರು: ಆಯುಧಪೂಜೆಯ ಖರ್ಚಿಗೆಂದು 5,000 ರೂ. ಡ್ರಾ ಮಾಡಿರುವುದು ಸರಿಯಲ್ಲ. ಆ ಖರ್ಚಿಗೆ ಪ್ರತ್ಯೇಕ ವೋಚರ್‌ಗಳನ್ನಿಟ್ಟು ಹಣ ಪಾವತಿಸಿದ ಬಳಿಕ ಸ್ವೀಕೃತಿ ಪತ್ರಗಳನ್ನು ಕಡ್ಡಾಯವಾಗಿ ಪಡೆಯಬೇಕೆಂದು ಶಾಸಕ ಆರ್‌.ನರೇಂದ್ರ ಪಪಂ ಅಧಿಕಾರಿಗಳಿಗೆ ಸೂಚಿಸಿದರು. ಹನೂರು ಪಟ್ಟಣ ಪಂಚಾಯಿತಿ ಕಚೇರಿಯಲ್ಲಿ ಕರೆದಿದ್ದ ಸರ್ವ ಸದಸ್ಯರ ಸಭೆಯಲ್ಲಿ ಮಾತನಾಡಿದರು. ಆಯವ್ಯಯಗಳನ್ನು ಪರಿಶೀಲಿಸಿ ಕೆಲವು ಲೋಪದೋಷಗಳನ್ನು ಗುರುತಿಸಿ ಸರಿಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಸ್ವಯಂ ಘೋಷಿತ ಆಸ್ತಿ ತೆರಿಗೆ, ನೀರಿನ ತೆರಿಗೆ, ಸಾಮಾನ್ಯ ನಿಧಿ ಮತ್ತು ಬಾಡಿಗೆ ರೂಪದಲ್ಲಿ ಬಂದಿರುವ ಆದಾಯದ ವಿವರಗಳನ್ನು ಸಭೆಯಲ್ಲಿ ಮಂಡಿಸಲಾಯಿತು. ಸಂಗ್ರಹವಾದ ಮೊತ್ತದ ಜೊತೆಗೆ ಆಯಾ ಮಾಸಿಕ ಗುರಿ, ಸಂಗ್ರಹಣೆ ಎಲ್ಲವನ್ನೂ ಮಂಡಿಸಬೇಕು. ಗುರಿ ತಲುಪದಿದ್ದಲ್ಲಿ ಕಾರಣ ಅರಿತು ಕ್ರಮಕ್ಕೆ ಸೂಚಿಸಬೇಕೆಂದು ತಿಳಿಸಿದರು.

ಮರು ಕ್ರಿಯಾಯೋಜನೆ ಬೇಡ: ಪಟ್ಟಣ ಪಂಚಾಯಿತಿಯ ಶೇ.24.10 ಯೋಜನೆಯಡಿ 2010-11 ರಿಂದ 2015-16ನೇ ಸಾಲಿನವರೆಗೆ 3.06 ಲಕ್ಷ ರೂ. ಅನುದಾನ ಖರ್ಚಾಗದೆ ಉಳಿದಿದೆ. ಆ ಅನುದಾನದಲ್ಲಿ ಪಟ್ಟಣದ ಬಾಬು ಜಗಜೀವನ ರಾಂ ಸಮುದಾಯ ಭವನಕ್ಕೆ 1.86 ಲಕ್ಷ ಮತ್ತು ಅಂಬೇಡ್ಕರ್‌ ಸಮುದಾಯ ಭ‌ನಕ್ಕೆ 1.20 ಲಕ್ಷ ರೂ. ವೆಚ್ಚದಲ್ಲಿ ಪಾತ್ರೆ ಸಾಮಗ್ರಿ ಖರೀದಿಸುವ ಕ್ರಿಯಾಯೋಜನೆ ತಯಾರಿಸಿ ಜಿಲ್ಲಾಧಿಕಾರಿ ಅನುಮೋದನೆಗೆ ಸಲ್ಲಿಸಲಾಗಿತ್ತು. ಆದರೆ ಜಿಲ್ಲಾಧಿಕಾರಿ ಇದಕ್ಕೆ ಅನುಮೋದನೆ ನೀಡದೆ ವಾಪಸ್‌ ಕಳುಹಿಸಿದ್ದಾರೆ. 

ಸಿಸಿ ರಸ್ತೆ ಅಥವಾ ಚರಂಡಿಗೆ ಕ್ರಿಯಾಯೋಜನೆ ತಯಾರಿಸಲು ಸೂಚಿಸಿದ್ದಾರೆಂದು ಸಭೆಯಲ್ಲಿ ಮಂಡಿಸಲಾಯಿತು. ಆದರೆ ಇದಕ್ಕೆ ಒಪ್ಪದ ಶಾಸಕರು ರಸ್ತೆ ಚರಂಡಿ ಕಾಮಗಾರಿಯನ್ನು ಶಾಸಕರ ನಿಧಿ, ಎಸ್‌ಸಿಪಿ, ಟಿಎಸ್‌ಪಿ ಇನ್ನಿತರ ಯೋಜನೆಗಳಿಂದ ಮಾಡಲಾಗುವುದು. ಆದ್ದರಿಂದ ಮರುಕ್ರಿಯಾಯೋಜನೆ ಮಾಡದೆ ಸಮುದಾಯ ಭವನಗಳಿಗೆ ಪಾತ್ರೆಗಳನ್ನೇ ವಿತರಿಸಲು ಕ್ರಮವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

3 ಕೋಟಿ ರೂ.ಗೆ ಡಿಪಿಆರ್‌: ಸ್ವತ್ಛ ಭಾರತ್‌ ಮಿಷನ್‌ ಯೋಜನೆಯಡಿ ಘನತ್ಯಾಜ್ಯ ವಿಲೇವಾರಿ ಯೋಜನೆಗೆ ಮೂರು ಕೋಟಿ ರೂ. ವೆಚ್ಚದಲ್ಲಿ ಡಿಪಿಆರ್‌ ತಯಾರಿಸಿ ಸಲ್ಲಿಸಲಾಗಿದೆ. ಅದರಲ್ಲಿ ಶೇ.50 ಅನುದಾನವನ್ನು ಪಟ್ಟಣ ಪಂಚಾಯಿತಿ ಅನುದಾನದಿಂದ ಭರಿಸಲು ಕೋರಲಾಗಿದೆ ಎಂದು ಕಿರಿಯ ಅಭಿಯಂತರ ಮಿಥುನಾ ಸಭೆಯಲ್ಲಿ ಮಂಡಿಸಿದರು. ಆಗ ಪಟ್ಟಣ ಪಂಚಾಯಿತಿಯ ಶೇ.50ರ 1.5 ಕೋಟಿ ರೂ. ಅನುದಾನವನ್ನು ಯೋಜನೆ ಪ್ರಾರಂಭವಾದ ಬಳಿಕ ಹಂತಹಂತವಾಗಿ ನೀಡಲು ಕ್ರಮ ವಹಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.

ಮಳಿಗೆ ಮರುಹರಾಜಿಗೆ ಸೂಚನೆ: ಖಾಸಗಿ ಬಸ್‌ ನಿಲ್ದಾಣದಲ್ಲಿ ನಿರ್ಮಿಸಿರುವ ಅಂಗಡಿ ಮಳಿಗೆಗಳನ್ನು ಹರಾಜು ಪ್ರಕ್ರಿಯೆಯಲ್ಲಿ ಪಡೆದು ಇನ್ನೂ ಮುಂಗಡ ಹಣ ಪಾವತಿಸದವರಿಗೆ ನೋಟಿಸ್‌ ನೀಡಬೇಕು. ಬಳಿಕ ಮರು ಹರಾಜು ನಡೆಸಲು ಕ್ರಮ ಕೈಗೊಳ್ಳುವಂತೆ ಶಾಸಕ ನರೇಂದ್ರ ಅಧಿಕಾರಿಗಳಿಗೆ ಸೂಚಿಸಿದರು. ಪಟ್ಟಣದ ಖಾಸಗಿ ಬಸ್‌ ನಿಲ್ದಾಣದಲ್ಲಿ ಕುಡಿಯುವ ನೀರಿನ ಘಟಕ ಆರಂಭಿಸಲು ಅನುದಾನ ನೀಡಲಾಗಿದೆ. ಇನ್ನೂ ಅದರ ಟೆಂಡರ್‌ ಪ್ರಕ್ರಿಯೆಗೆ ಚಾಲನೆ ನೀಡಿಲ್ಲ. ಇದರ ಬಗ್ಗೆ ಆರು ಬಾರಿ ತಮ್ಮ ಬಳಿ ವಿಚಾರಿಸಿದ್ದರೂ ಇನ್ನೂ ಯಾವುದೇ ಬೆಳವಣಿಗೆ ಕಂಡುಬಂದಿಲ್ಲ ಎಂದು ಎಂಜಿನಿಯರ್‌ ವಿರುದ್ಧ ಶಾಸಕರು ಕಿಡಿಕಾರಿದರು.

ಬೇಸಿಗೆ ಪ್ರಾರಂಭವಾಗುವ ಮುನ್ನ  ಬಸ್‌ ನಿಲ್ದಾಣದಲ್ಲಿ ಕುಡಿಯುವ ನೀರಿನ ಘಟಕ  ಕಾರ್ಯಾರಂಭಿಸಬೇಕು. ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ಪ್ರಾರಂಭಿಸುವ ಘಟಕಕ್ಕೂ ಕಾವೇರಿ ನೀರಿನ ಸಂಪರ್ಕ ಕಲ್ಪಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು. ಪಪಂ ಅಧ್ಯಕ್ಷೆ ಮಮತಾ ಮಹಾದೇವು, ಉಪಾಧ್ಯಕ್ಷ ಬಸವರಾಜು, ಮುಖ್ಯಾಧಿಕಾರಿ ಮೋಹನ್‌ಕೃಷ್ಣ, ಸದಸ್ಯರಾದ ಬಾಲರಾಜ್‌ ನಾಯ್ಡು, ರಾಜೂಗೌಡ, ಸುಮತಿ ಮಾದೇಶ್‌, ಶೋಭಾ, ಮಹದೇವಮ್ಮ, ಪ್ರತಿಮಾ ರವೀಂದ್ರ, ಯೋಗಶ್ರೀ, ನಾಗಣ್ಣ, ಜಯಪ್ರಕಾಶ್‌ ಗುಪ್ತ, ಅಕ್ರಂವುಲ್ಲಾ, ವೆಂಕಟೇಶ್‌, ಬಸವರಾಜು, ಸಮುದಾಯ ಸಂಘಟನಾಧಿಕಾರಿ ಭೈರಪ್ಪ, ರಮೇಶ್‌, ನಂಜುಂಡ ಶೆಟ್ಟಿ ಸಿಬ್ಬಂದಿ ಇದ್ದರು.

ಟಾಪ್ ನ್ಯೂಸ್

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Politics: ಅಮಿತ್‌ ಶಾ ಓರ್ವ ಗೂಂಡಾ, ರೌಡಿ: ಯತೀಂದ್ರ 

Politics: ಅಮಿತ್‌ ಶಾ ಓರ್ವ ಗೂಂಡಾ, ರೌಡಿ: ಯತೀಂದ್ರ 

1-wr3

Record; ಮಲೆ ಮಹದೇಶ್ವರ ಬೆಟ್ಟ ಹುಂಡಿ ಎಣಿಕೆ: 25 ದಿನಗಳಲ್ಲಿ 3.13 ಕೋಟಿ!

Chamarajanagar; ಆನೆ ದಾಳಿಗೆ ಬಲಿಯಾದ ಯುವಕ

Chamarajanagar; ಆನೆ ದಾಳಿಗೆ ಬಲಿಯಾದ ಯುವಕ

Election Boycott: ಮತದಾನ ಬಹಿಷ್ಕಾರದಿಂದ ಹಿಂದೆ ಸರಿಯಲ್ಲ; ಗ್ರಾಮಸ್ಥರು

Election Boycott: ಮತದಾನ ಬಹಿಷ್ಕಾರದಿಂದ ಹಿಂದೆ ಸರಿಯಲ್ಲ; ಗ್ರಾಮಸ್ಥರು

Lok Sabha Election: ಯಾರಿಗೆ ದೊರಕಲಿದೆ ಚಾ.ನಗರ ಲೋಕಸಭೆ ಕಾಂಗ್ರೆಸ್‌ ಟಿಕೆಟ್‌?

Lok Sabha Election: ಯಾರಿಗೆ ದೊರಕಲಿದೆ ಚಾ.ನಗರ ಲೋಕಸಭೆ ಕಾಂಗ್ರೆಸ್‌ ಟಿಕೆಟ್‌?

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-eewqeeeqwewqewq

Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್‌, ಸ್ಟೋಯಿನಿಸ್‌, ಅಗರ್‌ ಹೊರಕ್ಕೆ

1-hanuma

ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್‌

1-wewqqewqe

Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್‌

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.