CONNECT WITH US  

ಲೋಕಸಭಾ ಚುನಾವಣೆಗೆ ಸಂಘಟಿತರಾಗಿ

ಕೊಳ್ಳೇಗಾಲ: ಮುಂಬರುವ ನಗರಸಭೆ ಮತ್ತು ಲೋಕಸಭಾ ಚುನಾವಣೆ ಎದುರಿಸಲು ಕಾರ್ಯಕರ್ತರು ಹೆಚ್ಚು ಸಂಘಟಿತರಾಗಬೇಕೆಂದು ಮಾಜಿ ಶಾಸಕ ಎ.ಆರ್‌.ಕೃಷ್ಣಮೂರ್ತಿ ಭಾನುವಾರ ಕರೆಕೊಟ್ಟರು.

ಖಾಸಗಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಆಗಮಿಸಿ ಬಳಿಕ ನಗರದ ಲೋಕೋಪಯೋಗಿ ಇಲಾಖೆಯ ವಸತಿ ಗೃಹದಲ್ಲಿ ಕಾಂಗ್ರೆಸ್‌ ಕಾರ್ಯಕರ್ತರ ಸಮಾಲೋಚನೆ ಸಭೆಯಲ್ಲಿ  ಮಾತನಾಡಿ, ಮಾಜಿ ಶಾಸಕರು ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಪ್ರತಿಯೊಬ್ಬರು ಹೆಚ್ಚು ಸಂಘಟಿತರಾಗಬೇಕು ಎಂದರು.

ಪ್ರದೇಶ ಕಾಂಗ್ರೆಸ್‌ ಅಧ್ಯಕ್ಷರನ್ನಾಗಿ ದಿನೇಶ್‌ ಗುಂಡೂರಾವ್‌, ಕಾರ್ಯಾಧ್ಯಕ್ಷರಾಗಿ ಈಶ್ವರ್‌ ಖಂಡ್ರೆಯವರನ್ನು ನೇಮಕ ಮಾಡಿರುವುದನ್ನು ಸ್ವಾಗತಿಸಿದ ಅವರು, ಪ್ರದೇಶ ಕಾಂಗ್ರೆಸ್‌ ಅಧ್ಯಕ್ಷರು ಮತ್ತು ಕಾರ್ಯಾಧ್ಯಕ್ಷರು ಪಕ್ಷವನ್ನು ಹೆಚ್ಚು ಸಂಘಟಿಸಿ ಮುಂಬರುವ ಎಲ್ಲಾ ಚುನಾವಣೆಗಳಲ್ಲಿ ಕಾಂಗ್ರೆಸ್‌ ಗೆಲುವಿಗೆ ಶ್ರಮಿಸುವ ಎಲ್ಲಾ ಶಕ್ತಿಗಳು ಅವರಲ್ಲಿದೆ ಎಂದರು.

ಸ್ಥಳೀಯ ನಗರಸಭೆಗೆ ಚುನಾವಣೆ ಸಮೀಪಿಸುತ್ತಿದ್ದು, ಸಂಸದರು ಮತ್ತು ಕ್ಷೇತ್ರದ ಮಾಜಿ ಶಾಸಕ ಎಸ್‌.ಜಯಣ್ಣರವರು ಕ್ಷೇತ್ರದಲ್ಲಿ ಲಭ್ಯವಿಲ್ಲದ ಕಾರಣಕ್ಕಾಗಿ ಕಾರ್ಯಕರ್ತರ ಸಮಾಲೋಚನೆಯಲ್ಲಿ ತೊಡಗಿದ್ದರು, ಮುಖಂಡರೊಂದಿಗೆ ಸಭೆ ಕರೆದು ಮತ್ತಷ್ಟು ಒತ್ತು ನೀಡುವುದಾಗಿ ಹೇಳಿದರು.

ಸಭೆಯಲ್ಲಿ ನಗರಸಭೆ ಅಧ್ಯಕ್ಷ ರಮೇಶ್‌, ನಗರಸಭಾ ಸದಸ್ಯರಾದ ರಾಘವೇಂದ್ರ, ಸೈಯದ್‌ ಕಲೀಮುಲ್ಲಾ, ನರಸಿಂಹನ್‌, ಕರವೇ ಗೌರವಾಧ್ಯಕ್ಷ ಪ್ರಭಾಕರ್‌, ಮುಖಂಡರಾದ ಶಿವಕುಮಾರ್‌, ಕೆ.ಕೆ.ಮೂರ್ತಿ, ಅಣಗಳ್ಳಿ ಬಸವರಾಜು, ಮೋಹನ್‌ ವಾಚ್‌ ಕುಮಾರ್‌ ಕುಂತೂರು ಗ್ರಾಪಂ ಉಪಾಧ್ಯಕ್ಷ ಕುಮಾರಸ್ವಾಮಿ ಇತರಿದ್ದರು.

Trending videos

Back to Top