CONNECT WITH US  

ಅರೇಬಿಕ್‌ ಜತೆ ಸಾಮಾನ್ಯ ಶಿಕ್ಷಣವನ್ನೂ ನೀಡಿ

ಕೊಳ್ಳೇಗಾಲ: ಮುಸ್ಮಿಮರು ತಮ್ಮ ಮಕ್ಕಳಿಗೆ ಉರ್ದು ಮತ್ತು ಅರೇಬಿಕ್‌ ಶಿಕ್ಷಣದ ಜೊತೆಗೆ ಕನ್ನಡ ಮತ್ತು ಇಂಗ್ಲಿಷ್‌ ಮಾಧ್ಯಮದಲ್ಲಿ ಶಿಕ್ಷಣ ಕೊಡಿಸಲು ಮುಂದಾಗಬೇಕು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎನ್‌.ಮಹೇಶ್‌ ಭಾನುವಾರ ಹೇಳಿದರು.

ನಗರದ ಗುರುಭವನದಲ್ಲಿ ತಾಲೂಕಿನ ಬಂಡಳ್ಳಿ ಮದರ್‌ ಮುಜೀದ ಅಲ್ಪಸಂಖ್ಯಾತರ ವಿದ್ಯಾಸಂಸ್ಥೆ ವತಿಯಿಂದ ವಿದ್ಯಾರ್ಥಿಗಳಿಗೆ ಆರ್‌ಎಂ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಉದ್ಘಾಟಿಸಿ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಿ ಗೌರವಿಸಿದ ಬಳಿಕ ಹೇಳಿದರು.

ವಿದ್ಯಾರ್ಥಿಗಳಿಗೆ ಉರ್ದು ಶಾಲೆಗಳಲ್ಲಿ ಪ್ರಾಥಮಿಕ ಶಿಕ್ಷಣ ನೀಡಿದ ಬಳಿಕ ಮುಂದಿನ ವಿದ್ಯಾಭ್ಯಾಸ ಮಾಡಲು ಉರ್ದು ಐಚ್ಚಿಕ ವಿಷಯವಿಲ್ಲದೆ ವಿದ್ಯಾರ್ಥಿಗಳು ಶಿಕ್ಷಣದಿಂದ ವಚಿಂತರಾಗುತ್ತಿದ್ದು ವಿದ್ಯಾರ್ಥಿಗಳ ಮುಂದಿನ ವಿದ್ಯಾಭ್ಯಾಸಕ್ಕಾಗಿ ಕನ್ನಡ ಅಥವಾ ಇಂಗ್ಲಿಷ್‌ ಮಾಧ್ಯಮದಲ್ಲಿ ಶಿಕ್ಷಣ ಕೊಟ್ಟ ಪಕ್ಷದಲ್ಲಿ ವಿದ್ಯಾರ್ಥಿಗಳು ಉನ್ನತ ಶಿಕ್ಷಣವನ್ನು ಹೊಂದಿ ಉತ್ತಮ ಇಲಾಖೆಗಳಲ್ಲಿ ಉದ್ಯೋಗ ಅಲಂಕರಿಸುವ ಅವಕಾಶಗಳು ಇರುತ್ತದೆ ಎಂದರು.

ತಾಲೂಕಿನ ಬಂಡಳ್ಳಿ ಮದರ್‌ ಮುಜೀದ ಅಲ್ಪಸಂಖ್ಯಾತರ ವಿದ್ಯಾಸಂಸ್ಥೆಗೆ ಶಿಕ್ಷಕರ ಕೊರತೆಯನ್ನು ನಿಗಿಸುವ ಬಗ್ಗೆ ಮನವಿ ಪತ್ರವನ್ನು ನೀಡಿದ ಪಕ್ಷದಲ್ಲಿ ಸಂಸ್ಥೆಯ ಶಿಕ್ಷಕರ ಕೊರತೆ ನಿವಾರಣೆ ಮಾಡಿಕೊಡುವ ಭರವಸೆಯನ್ನು ನೀಡಿದರು.

ಹನೂರು ಶಾಸಕ ಆರ್‌ ನರೇಂದ್ರ ಮಾತನಾಡಿ, ತಾಲೂಕಿನ ಬಂಡಳ್ಳಿಯಂತಹ ಕುಗ್ರಾಮದಲ್ಲಿ ಪದವಿ ಪೂರ್ವ ಕಾಲೇಜು ತೆರೆಯಲು ಸರ್ಕಾರದಿಂದ 2.5 ಕೋಟಿ ಅನುದಾನ ಮಂಜೂರು ಆಗಿತ್ತು.

ಸ್ಥಲದ ಕೊರೆತೆಯಿಂದಾಗಿ ತಟಸ್ಥಗೊಂಡಿತ್ತು ನಂತರ ಮದರ್‌ ಮುಜೀದ ರವರು 1 ಎಕರೆ ಜಮೀನನ್ನು ಉಚಿತವಾಗಿ ನೀಡಿದ ಬಳಿಕ ಉತ್ತಮ ಕಟ್ಟಡ ನಿರ್ಮಾಣವಾಗುತ್ತಿದ್ದು ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಜಿಲ್ಲೆಯಲ್ಲಿ ನೂರಕ್ಕೆ ನೂರಷ್ಟು ಫ‌ಲಿತಾಂಶ ತಂದುಕೊಟ್ಟಿದ್ದಾರೆಂದು ಕಾಲೇಜಿನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ರಾಜ್ಯ ಶಿಕ್ಷಣ ಇಲಾಖೆಯ ವಿಶೇಷ ಕರ್ತವ್ಯಾಧಿಕಾರಿ ಮಹಮದ್‌ ತಯೀಮ್‌ ಪಾಷ ಮಾತನಾಡಿದರು. ಜಾಮಿಯ ಮಸೀದಿ ಧರ್ಮಗುರು ಮೌಲಾನ ಮಕ್ಸೂದ್‌ ಇಮ್ರಾನ್‌ ರಷಾದಿ, ಜಿಪಂ ಸದಸ್ಯೆ ಲೇಖಾ,

ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕಿ ಶ್ಯಾಮಲ, ಬಂಡಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ಮಹಮ್ಮದ್‌ ಜಸೀಮ್‌ ಪಾಷ, ಪ್ರಾಂಶುಪಾಲರಾದ ಡಾ. ಇಮಿ¤ಯಾಜ್‌ ಅಹಮ್ಮದ್‌ ಪರ್ವೀಜ್‌, ಮುಜೀದ್‌ ಬೇಗಂ ಇತರರು ಇದ್ದರು.


Trending videos

Back to Top