CONNECT WITH US  

ಎಪಿಎಂಸಿ ಮಾರುಕಟ್ಟೆಯಲ್ಲಿ ರೈತರಿಗೆ ಅನ್ಯಾಯ

ಗುಂಡ್ಲುಪೇಟೆ: ಮಾರುಕಟ್ಟೆಯಲ್ಲಿ ಎಂದಿನಂತೆ ನಡೆಯುವ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸದ ದಲ್ಲಾಳಿಯೊಬ್ಬರು ಪ್ರತ್ಯೇಕವಾಗಿ ಹರಾಜು ಕೂಗುವ ಮೂಲಕ ಮಾರುಕಟ್ಟೆ ನಿಯಮವನ್ನು ಉಲ್ಲಂ ಸುತ್ತಿದ್ದರೂ ಕೈಕಟ್ಟಿ ಕುಳಿತಿರುವ ಅಧಿಕಾರಿಗಳನ್ನು ಅಮಾನತುಗೊಳಿಸಬೇಕು ಎಂದು ಒತ್ತಾಯಿಸಿದ ರೈತರು ಪಟ್ಟಣದ ಎಪಿಎಂಸಿ ಆಡಳಿತ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

 ಮಾರುಕಟ್ಟೆಯಲ್ಲಿ ರೈತರಿಗೆ ಬೆಲೆ ನಿಗದಿಯಲ್ಲಿ ಅನ್ಯಾಯವಾಗುತ್ತಿರುವುದನ್ನು ನಿಲ್ಲಿಸಲು ಕಳೆದ ಹತ್ತು ತಿಂಗಳಿನಿಂದ ದಿನಕ್ಕೊಬ್ಬರಂತೆ ಹರಾಜು ಪ್ರಕ್ರಿಯೆ ನಡೆಸಿ ಬೆಲೆ ನಿಗದಿ ಮಾಡಲಾಗುತ್ತಿತ್ತು. ಇದರಿಂದ ಎಲ್ಲಾ ಬೆಳೆಗಳಿಗೂ ಸ್ಪರ್ಧಾತ್ಮಕ ಬೆಲೆ ದೊರಕುತ್ತಿತ್ತು.

ಆದರೆ ಲೈಸೆನ್ಸ್‌ ಪಡೆದ ಮಂಡಿ ಮಾಲೀಕರೊಬ್ಬರು ಈ ವ್ಯವಸ್ಥೆಯಲ್ಲಿ ಭಾಗವಹಿಸದೆ ಪ್ರತ್ಯೇಕವಾಗಿ ಹರಾಜು ನಡೆಸುವ ಮೂಲಕ ಬೆಲೆಕುಸಿತಕ್ಕೆ ಕಾರಣರಾಗುತ್ತಿದ್ದಾರೆ. ಆಡಳಿತಮಂಡಲಿ ಕರೆದ ದಲ್ಲಾಳಿಗಳ ಸಭೆಗೂ ಗೈರಾಗುವ ಮೂಲಕ ನಿಯಮ ಉಲ್ಲಂಘನೆ ಮಾಡುತ್ತಿದ್ದಾರೆ.

ಈ ಬಗ್ಗೆ ಹಲವಾರು ಬಾರಿ ದೂರು ನೀಡಿದರೂ ಮಾರುಕಟ್ಟೆ ಆಡಳಿತಮಂಡಲಿ ಯಾವುದೇ ಕ್ರಮಕೈಗೊಂಡಿಲ್ಲ. ನಿಯಮ ಉಲ್ಲಂ ಸಿದ ಕಾರಣದಿಂದ ಸಣ್ಣಪುಟ್ಟ ವ್ಯಾಪಾರಿಗಳ ಲೈಸೆನ್ಸ್‌ ರದ್ದುಗೊಳಿಸುವ ಮಂಡಲಿಯ ಅಧಿಕಾರಿಗಳು ಈ ಬಗ್ಗೆ ಚಕಾರವೆತ್ತದೆ ಸುಮ್ಮನಿರುವ ಮೂಲಕ ಪರೋಕ್ಷ ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

 ದಲ್ಲಾಳಿಗಳು ಹಾಗೂ ಅಧಿಕಾರಿಗಳು ಒಳ ಒಪ್ಪಂದ ಮಾಡಿಕೊಂಡು ಹರಾಜು ಪ್ರಕ್ರಿಯೆಯಲ್ಲಿ ರೈತರಿಗೆ ಅನ್ಯಾಯವೆಸಗುತ್ತಿದ್ದಾರೆ. ಆದ್ದರಿಂದ ಕೂಡಲೇ ಕಾರ್ಯದರ್ಶಿಯನ್ನು ಅಮಾನತುಗೊಳಿಸಿ ಎಂದಿನಂತೆ ಹರಾಜು ನಡೆಸಬೇಕು. ಇಲ್ಲದಿದ್ದರೆ ಬೇರೆ ದಲ್ಲಾಳಿಗಳು ಹರಾಜು ನಡೆಸದೆ ವ್ಯಾಪಾರವನ್ನು ಬಹಿಷ್ಕರಿಸಬೇಕಾಗುತ್ತದೆ ಎಂದು ಪ್ರತಿಭಟನೆ ನಡೆಸಿದರು.

ಮಂಡಲಿ ಅಧ್ಯಕ್ಷ ಗುರುಸ್ವಾಮಿ ಆಗಮಿಸಿ ಮಾತನಾಡಿ, ನಿಯಮ ಉಲ್ಲಂ ಸಿ ಪ್ರತ್ಯೇಕ ಹರಾಜು ನಡೆಸುತ್ತಿರುವ ದಲ್ಲಾಳಿಯ ಲೈಸೆನ್ಸ್‌ ರದ್ದುಗೊಳಿಸಲಾಗುವುದು. ಮಾರುಕಟ್ಟೆ ಆವರಣದಲ್ಲಿ ಗೂಂಡಾಗಿರಿ ನಡೆಸುವವರ ವಿರುದ್ದ ಪೊಲೀಸರಿಗೆ ದೂರು ನೀಡಲಾಗುವುದು ಎಂದು ಭರವಸೆ ನೀಡಿದ ನಂತರ ಪ್ರತಿಭಟನೆ ಕೈಬಿಡಲಾಯಿತು. 

ಈ ಸಂದರ್ಭದಲ್ಲಿ ರೈತ ಸಂಘದ ಮುಖಂಡ ಮಾಡ್ರಹಳ್ಳಿ ಮಹದೇವಪ್ಪ, ಬಿಜೆಪಿ ರೈತ ಮೊರ್ಚಾ ಅಧ್ಯಕ್ಷ ಮಾಡ್ರಹಳ್ಳಿ ನಾಗೇಂದ್ರ ಸೇರಿದಂತೆ ನೂರಾರು ರೈತರು ಭಾಗವಹಿಸಿದ್ದರು.

Trending videos

Back to Top