CONNECT WITH US  

21ಕ್ಕೆ ಬೆಂಗಳೂರಿನಲ್ಲಿ ಬೃಹತ್‌ ರೈತ ಸಮಾವೇಶ

ಚಿಕ್ಕಬಳ್ಳಾಪುರ: ಬಯಲು ಸೀಮೆ ಜಿಲ್ಲೆಗಳಿಗೆ ಶಾಶ್ವತ ನೀರಾವರಿ ಕಲ್ಪಿಸಲು ಡಾ.ಜಿ.ಎಸ್‌. ಪರಮಶಿವಯ್ಯ ವರದಿ ಅನುಷ್ಠಾನಗೊಳಿಸಬೇಕು. ವೈಜ್ಞಾನಿಕ ಕೃಷಿ ನೀತಿ ಜಾರಿಗೊಳಿಸಬೇಕು, ರೈತ ನಿಧಿ ಸ್ಥಾಪನೆ ಸೇರಿದಂತೆ ವಿವಿಧ ಬೇಡಿಕೆಗೆ ಒತ್ತಾಯಿಸಿ ಜು.21ರ ಶನಿವಾರ ಬೆಂಗಳೂರಿನ ಸ್ವಾತಂತ್ರ್ಯ ಪಾರ್ಕ್‌ನಲ್ಲಿ ಬೃಹತ್‌ ರೈತ ಸಮಾವೇಶ ನಡೆಯಲಿದೆ ಎಂದು ನಂಜುಂಡಸ್ವಾಮಿ ಸ್ಥಾಪಿತ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಬಿ.ನಾರಾಯಣಸ್ವಾಮಿ ತಿಳಿಸಿದರು.

ನಗರದ ಪತ್ರಕರ್ತರ ಭವನದ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿ, ಮೈತ್ರಿ ಸರ್ಕಾರ ರೈತರ ಸಂಪೂರ್ಣ ಸಾಲಮನ್ನಾ ಮಾಡುವ ವಿಚಾರದಲ್ಲಿ ವಿಫ‌ಲವಾಗಿದೆ. ರೈತ ಸಮಾವೇಶದಲ್ಲಿ ರೈತರ ಸಂಪೂರ್ಣ ಸಾಲಮನ್ನಾ ಮಾಡುವಂತೆ ಸಿಎಂಗೆ ಒತ್ತಾಯಿಸಲಾಗುವುದು. ಚುನಾವಣೆ ಮೊದಲು ರೈತರ ಪರವಾಗಿ ಮಾತನಾಡಿದ ಕುಮಾರಸ್ವಾಮಿ, ಮುಖ್ಯಮಂತ್ರಿಯಾದ ಬಳಿಕ ಮಾತು ತಪ್ಪಿ ನಡೆಯುತ್ತಿದ್ದಾರೆ. ಸದ್ಯ ಸರ್ಕಾರ ಘೋಷಣೆ ಮಾಡಿರುವ ಸಾಲಮನ್ನಾ ಯೋಜನೆಗೆ ಷರತ್ತು ವಿಧಿಸಿದ್ದು, ಬಯಲು ಸೀಮೆ ರೈತರಿಗೆ ಸಾಲಮನ್ನಾದ ಲಾಭ ಆಗುವುದಿಲ್ಲ ಎಂದರು.

ನೀರಾವರಿ ವಿಚಾರದಲ್ಲಿ ಬದ್ಧತೆ ಅಗತ್ಯ: ಜಿಲ್ಲೆಯ ನೀರಾವರಿ ವಿಚಾರದಲ್ಲಿ ಮೈತ್ರಿ ಸರ್ಕಾರ ಬದ್ಧತೆ, ಪ್ರಾಮಾಣಿಕತೆಯಿಂದ ನಡೆದುಕೊಳ್ಳಬೇಕು. ಹಿಂದಿನ ಕಾಂಗ್ರೆಸ್‌ ಸರ್ಕಾರದಲ್ಲಿ ಜಿಲ್ಲೆಗೆ ರೂಪಿಸಿರುವ ಹೆಬ್ಟಾಳ, ನಾಗವಾರ ಕೊಳಚೆ ನೀರನ್ನು ಕೈಬಿಟ್ಟು ಡಾ.ಜಿ.ಎಸ್‌.ಪರಮಶಿವಯ್ಯ ವರದಿ ಆಧಾರಿತ ಸಮಗ್ರ ನೀರಾವರಿ ಯೋಜನೆಗಳನ್ನು ಅನುಷ್ಠಾನಗೊಳಿಸದರೆ ಶಾಶ್ವತ ನೀರಾವರಿಯಿಂದ ವಂಚನೆಗೆ ಒಳಗಾಗಿರುವ ಬಯಲು ಸೀಮೆಗೆ ನ್ಯಾಯ ಸಿಗಲು ಸಾಧ್ಯ. ಕೃಷಿ ಕ್ಷೇತ್ರದ ಬದಲಾವಣೆಗೆ ವೈಜ್ಞಾನಿಕ ಕೃಷಿ ನೀತಿ ಜಾರಿಗೊಳಿಸಬೇಕು, ಬೆಲೆ ಕುಸಿತದಿಂದ ಕಂಗಾಲಾಗಿರುವ ರೇಷ್ಮೆ ಗೂಡಿಗೆ ಬೆಂಬಲ ಬೆಲೆ ಘೋಷಿಸಬೇಕು. ಅವಿಭಜಿತ
ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳು ಕೆರೆ, ಕುಂಟೆಗಳ ಪುನಶ್ವೇತನಕ್ಕಾಗಿ ವಿಶೇಷ ಪ್ಯಾಕೇಜ್‌ ಘೋಷಿಸಬೇಕು. ಆಕಸ್ಮಿಕವಾಗಿ ಮೃತಪಟ್ಟ ರೈತ ಹಾಗೂ ಆತ್ಮಹತ್ಯೆ ಮಾಡಿಕೊಂಡಿರುವ ರೈತ ಕುಟುಂಬಗಳಿಗೆ ಆರ್ಥಿಕ ನೆರವು ನೀಡುವ ನಿಟ್ಟಿನಲ್ಲಿ ಮೈತ್ರಿ ಸರ್ಕಾರ ಕೂಡಲೇ ರೈತ ನಿಧಿ ಸ್ಥಾಪನೆ ಮಾಡಬೇಕು ಎಂದು ಆಗ್ರಹಿಸಿದರು. 

ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪ್ರಧಾನ ಕಾರ್ಯದರ್ಶಿ ಮಂಜೇಗೌಡ, ಜಿಲ್ಲಾಧ್ಯಕ್ಷೆ ಸುಷ್ಮ ಶ್ರೀನಿವಾಸ್‌, ಖಜಾಂಚಿ ಕೆ.ರಮೇಶ್‌, ಮುಖಂಡರಾದ ಪ್ರವೀಣ್‌, ಮಹೇಂದ್ರ, ಸುಧಾಕರ್‌ ಉಪಸ್ಥಿತರಿದ್ದರು.

ನವಲಗುಂದ ಮತ್ತು ನರಗುಂದ ಗೋಲಿಬಾರ್‌ನಲ್ಲಿ ಹುತಾತ್ಮರಾದ ರೈತರ ಸ್ಮರಣಾರ್ಥ ಜು.21ರಂದು ಬೆಂಗಳೂರಿನ ನಡೆಯುವ ರೈತರ ಹುತಾತ್ಮ ದಿನಾಚರಣೆ ಹಾಗೂ ರೈತ ಸಮಾವೇಶದಲ್ಲಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ, ವಿರೋಧ ಪಕ್ಷಗಳ ನಾಯಕರು ಭಾಗವಹಿಸಲಿದ್ದು, ರಾಜ್ಯದಲ್ಲಿನ ರೈತರ ಬೇಡಿಕೆ ಈಡೇರಿಸುವಂತೆ ಮುಖ್ಯಮಂತ್ರಿಗೆ ಮನವಿ ಮಾಡಲಾಗುವುದು.
  ಬಿ.ನಾರಾಯಣಸ್ವಾಮಿ, ರೈತ ಸಂಘದ ರಾಜ್ಯಾಧ್ಯಕ


Trending videos

Back to Top