CONNECT WITH US  

ಕೊಳಚೆ ನೀರಿಗೆ ಬಿಜೆಪಿ ವಿರೋಧ

ಚಿಕ್ಕಬಳ್ಳಾಪುರ: ಕೆ.ಸಿ ಹಾಗೂ ಎಚ್‌ಎನ್‌ ವ್ಯಾಲಿಗಳ ನೀರು ಬಳಕೆಗೆ ಯೋಗ್ಯವಲ್ಲ ಎಂದು ವೈಜ್ಞಾನಿಕವಾಗಿ ಸಾಬೀತಾಗಿ
ದ್ದರೂ, ರಾಜ್ಯದ ಮೈತ್ರಿ ಸರ್ಕಾರದ ಪಾಲು ಪಕ್ಷಗಳಾದ ಕಾಂಗ್ರೆಸ್‌, ಜೆಡಿಎಸ್‌ ಶಾಮೀಲಾಗಿ ಯೋಜನೆಯನ್ನು ಜಾರಿ ಗೊಳಿಸುವ ಮೂಲಕ ಇಲ್ಲಿನ ಜಲಮೂಲಗಳನ್ನು ವಿಷಯುಕ್ತ ಗೊಳಿಸಲು ಮುಂದಾಗಿವೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಜಿ.ವಿ.ಮಂಜುನಾಥ ರೆಡ್ಡಿ ಟೀಕಿಸಿದರು.

ನಗರದ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಚುನಾವಣೆಗೂ ಮೊದಲು ಎತ್ತಿನಹೊಳೆ, ಕೆ.ಸಿ ಹಾಗೂ ಹೆಬ್ಟಾಳ ನಾಗವಾರ ಕೊಳಚೆ ನೀರನ್ನು ವಿರೋಧಿಸುತ್ತಿದ್ದ ಕುಮಾರಸ್ವಾಮಿ ಮುಖ್ಯ ಮಂತ್ರಿಯಾದ ಬಳಿಕ ಎರಡು ಯೋಜನೆಗಳ ಬಗ್ಗೆ ಚಕಾರ ಎತ್ತುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಯಾವ ಪುರುಷಾರ್ಥಕ್ಕೆ ಈ ಯೋಜನೆ: ಪಕ್ಕದ ಕೋಲಾರ ಜಿಲ್ಲೆಗೆ ಬೆಂಗಳೂರಿನ ಕೆ.ಸಿ ವ್ಯಾಲಿಯಿಂದ ಹರಿದು ಬರುತ್ತಿರುವ
ಕೊಳಚೆ ನೀರಿನಲ್ಲಿ ಈಗಾಗಲೇ ಅಪಾಯಕಾರಿ ನೊರೆ ಕಾಣಿಸಿ ಕೊಂಡಿದೆ. ಈ ಮೊದಲೇ ತಜ್ಞರು, ಐಐಎಸ್‌ಸಿ ಸಂಸ್ಥೆಯ ಜಲ
ತಜ್ಞರು ಕೊಳಚೆ ನೀರಿನ ಯೋಜನೆಗಳಿಗೆ ವಿರೋಧ ವ್ಯಕ್ತಪಡಿಸಿ ಈ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಯಾವ ಪುರುಷಾರ್ಥಕ್ಕೆ
ಮೈತ್ರಿ ಸರ್ಕಾರ ಈ ಕೊಳಚೆ ನೀರನ್ನು ಹರಿಸಲು ಮುಂದಾಗಿದೆ. ಅಧಿಕಾರಕ್ಕಾಗಿ ಕಾಂಗ್ರೆಸ್‌, ಜೆಡಿಎಸ್‌ ಪಕ್ಷಗಳು ಎಂತಹ
ಕೀಳುಮಟ್ಟಕ್ಕಾದರೂ ತಲುಪುವ ಮನಸ್ಥಿತಿಯನ್ನು ಹೊಂದಿದ್ದಾರೆ. ಈ ಕಾರಣಕ್ಕಾಗಿ ಕಾಂಗ್ರೆಸ್‌ ಪಕ್ಷದ ಮುಲಾಜಿನಲ್ಲಿ
ಮುಖ್ಯಮಂತ್ರಿಯಾಗಿರುವ ಕುಮಾರಸ್ವಾಮಿ ಕೊಳಚೆ ನೀರಿನ ಅಪಾಯದ ಬಗ್ಗೆ ಮೌನಕ್ಕೆ ಶರಣಾಗಿದ್ದಾರೆ. ಇದು ಜೆಡಿಎಸ್‌
ದ್ವಂಧ್ವ ನಿಲುವುಗೆ ಸಾಕ್ಷಿಯಾಗಿದೆ ಎಂದು ತಿಳಿಸಿದರು.

ವಿಷದ ಸ್ಥಿತಿಗೆ ತಲುಪಿದೆ ನೀರು: ಹೆಚ್‌ಎನ್‌ ವ್ಯಾಲಿ ಯೋಜನೆ ಘೋಷಣೆಯಾದಾಗ ಸ್ಥಳೀಯ ಜೆಡಿಎಸ್‌ ಮುಖಂಡರು
ವಿರೋಧಿಸಿ, ಬಂದ್‌ ಆಚರಣೆ ಮಾಡಿದರು. ಈಗ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾರೆಂಬ ಕಾರಣಕ್ಕೆ ಕೊಳಚೆ ನೀರಿನ ಬಗ್ಗೆ ಧ್ವನಿ ಎತ್ತುತ್ತಿಲ್ಲ. ಈಗಾಗಲೇ ಕಾಮಗಾರಿ ಭರದಿಂದ ಅನುಷ್ಠಾನಗೊಳ್ಳುತ್ತಿದೆ. ಅಂತರ್ಜಲ ಪಾತಾಳಕ್ಕೆ ಕುಸಿದು ಜಿಲ್ಲೆಯ ಭೂಗರ್ಭದಲ್ಲಿನ ನೀರು ವಿಷದ ಸ್ಥಿತಿಗೆ ಬಂದು ತಲುಪಿದೆ. ಇತಂಹ ಸಂದರ್ಭದಲ್ಲಿ ಮತ್ತೆ ಕೊಳಚೆ ನೀರನ್ನು ಈ ಜಿಲ್ಲೆಗಳ ಕೆರೆ, ಕುಂಟೆಗಳಿಗೆ ಹರಿಸಿದರೆ ಜಿಲ್ಲೆಯ ಜೀವ ಸಂಕುಲದ ಪರಿಸ್ಥಿತಿ ಏನಾಗಬೇಕು. ಕೊಳಚೆ ನೀರಿಂದ ಈ ಭಾಗದ ಜನ ಜೀವನದ ಮೇಲೆ ದುಷ್ಪರಿಣಾಮ ಬೀರುವುದರಲ್ಲಿ ಯಾವುದೇ ಸಂಶಯ ಇಲ್ಲ. ಈ ಬಗ್ಗೆ ತಜ್ಞರು ಎಚ್ಚರಿಸಿದ್ದಾರೆ ಎಂದರು.

21ಕ್ಕೆ ಬೃಹತ್‌ ರಕ್ತದಾನ ಶಿಬಿರ: ಸ್ವಾತಂತ್ರ್ಯ ಹೋರಾಟಗಾರ ಚಂದ್ರಶೇಖರ್‌ ಆಜಾದ್‌ ಜನ್ಮದಿನದ ಅಂಗವಾಗಿ ಬಿಜೆಪಿ
ಯುವ ಮೋರ್ಚಾದಿಂದ ಜು.21ರಂದು ನಗರದ ಅಂಬೇಡ್ಕರ್‌ ಭವನದಲ್ಲಿ ರಕ್ತದಾನ ಶಿಬಿರ ಆಯೋಜಿಸಲಾಗಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಬೇಕು. ಜಿಲ್ಲಾದ್ಯಂತ ರಕ್ತದಾನ ಶಿಬಿರ ಆಯೋಜಿಸಲಾಗಿದ್ದು, ಜು.21ಕ್ಕೆ ಚಿಕ್ಕಬಳ್ಳಾಪುರ, 28ಕ್ಕೆ ಗೌರಿಬಿದನೂರು, 30ಕ್ಕೆ ಶಿಡ್ಲಘಟ್ಟ ಹಾಗೂ ಬಾಗೇಪಲ್ಲಿಯಲ್ಲಿ ರಕ್ತದಾನ ಶಿಬಿರಗಳನ್ನು ಆಯೋಜಿಸಲಾಗಿದೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಭರತ್‌ ರೆಡ್ಡಿ, ಪ್ರಧಾನ ಕಾರ್ಯದರ್ಶಿ ಸಿ.ಬಿ.ಕಿರಣ್‌, ನಗರ ಯುವ ಮೋರ್ಚಾ ಘಟಕದ ಅಧ್ಯಕ್ಷ ಮಧುಚಂದ್ರ, ಬಿಜೆಪಿ ಮಾಧ್ಯಮ ವಕ್ತಾರ ಲಕ್ಷ್ಮೀಪತಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಲೋಕಸಭೆಯಲ್ಲಿ ಗೆಲುವು ಶತಸಿದ್ಧ ಜಿಲ್ಲೆಯ ಯಾವುದೇ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಗೆಲುವು ಸಾಧಿಸದಿದ್ದರೂ, ಮುಂಬರುವ 2019ರ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯ ಗೆಲುವು ಶತಸಿದ್ಧ ಎಂದು ಬಿಜೆಪಿ ಜಿಲ್ಲಾ
ಧ್ಯಕ್ಷ ಡಾ.ಜಿ.ವಿ.ಮಂಜುನಾಥ ವಿಶ್ವಾಸ ವ್ಯಕ್ತಪಡಿಸಿದರು. ಪಕ್ಷವು ಈಗಾಗಲೇ ಕಾರ್ಯಕರ್ತರಿಗೆ ಚುನಾವಣೆ ಯನ್ನು ಎದುರಿಸುವ ಮಾರ್ಗಸೂಚಿಗಳನ್ನು ನೀಡಿದೆ. ಅದರಂತೆ ಪಕ್ಷದ ಅಭ್ಯರ್ಥಿಯ ಗೆಲುವಿಗೆ ಶ್ರಮಿಸಲಿದ್ದೇವೆ. ಅಲ್ಲದೆ ಪ್ರಧಾನಿ ನರೇಂದ್ರ ಮೋದಿ ಕಳೆದ 4 ವರ್ಷದಲ್ಲಿ ಜಾರಿಗೊಳಿಸಿರುವ ಜನಪರ ಕಾರ್ಯ ಕ್ರಮಗಳನ್ನು ಜಿಲ್ಲೆಯ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಪ್ರತಿ ಮನೆ ಮನೆಗೂ ತಲುಪಿಸಲಿದ್ದೇವೆ ಎಂದರು.


Trending videos

Back to Top