CONNECT WITH US  

ಕನ್ನಡದ ಮೆರುಗು ನೀಡಿದ ಗಾನ ಕೋಗಿಲೆಗಳು

ಚಿಂತಾಮಣಿ: ತಾಲೂಕು ಕನ್ನಡ ಸಾಹಿತ್ಯ ಬಳಗ, ದಾಸ ಸಾಹಿತ್ಯ ಪರಿಷತ್ತಿನ ತಾಲೂಕು ಘಟಕದಿಂದ ನಗರದ ವೆಂಕಟಗಿರಿಕೋಟೆಯಲ್ಲಿರುವ ಸೀತಮ್ಮ ಮಿಲಿ ಕೃಷ್ಣಪ್ಪನವರ ನಿವಾಸದಲ್ಲಿ ನಡೆದ 11ನೇ ತಿಂಗಳ "ಕನ್ನಡ ಹುಣ್ಣಿಮೆ' ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಗಾನ ಕಲಾವಿದರು ವಿವಿಧ ಕನ್ನಡ ಗೀತೆಗಳನ್ನು ಹಾಡುವುದರ ಮೂಲಕ ಪವಿತ್ರ ಹುಣ್ಣಿಮೆಯ ರಾತ್ರಿಗೆ ಕನ್ನಡದ ಮೆರುಗು ನೀಡಿ ಪುನೀತರಾದರು.

ಪಾಂಡುರಂಗ ಸ್ವಾಮಿ ಭಜನಾ ಮಂಡಲಿಯ ಸ್ವರ್ಣಗೌರಿ, ಚಂದ್ರಮ್ಮ, ರಾಧಾ, ಸೀತಮ್ಮ, ಹೇಮಾವತಿ, ಸರಸ್ವತಮ್ಮ, ಮಂಜುಳ, ಲೀಲಾ ಲಕ್ಷ್ಮೀನಾರಾಯಣ್‌, ಶಾಂತಮ್ಮ, ವೇದಾವತಿ, ಉಷಾರಾಣಿ, ಶೋಭಾರಾಣಿ ಮತ್ತಿತರರು, ಕೈವಾರ ತಾತಯ್ಯ, ಪುರಂದರದಾಸ, ಕನಕದಾಸರು ರಚಿಸಿರುವ ಕೀರ್ತನೆ, ತತ್ವಪದ, ದಾಸರ ಪದಗಳ ಜೊತೆಗೆ ಮತ್ತಿತರೆ ಭಕ್ತಿಗೀತೆಗಳನ್ನು ಶ್ರದ್ಧಾಭಕ್ತಿಯಿಂದ ಗಾಯನ ಮಾಡುವುದರ ಮೂಲಕ ಗಾನಸುಧೆ ಹರಿಸಿದರು.

ನಗರದ ಸ್ನೇಹಜೀವಿ ಕಲಾ ತಂಡದ ಎಸ್‌.ಎಫ್.ಎಸ್‌. ಸುರೇಶ್‌, ನಾಗರಾಜ, ಎ.ನಾರಾಯಣಸ್ವಾಮಿ, ಸೀಕಲ್‌ ನರಸಿಂಹಪ್ಪ, ವೆಂಕಟೇಶ್‌ ಪ್ರಸಾದ್‌, ನಾಗೇಶ್‌ ಎಸ್‌.ಕಂಚಿ ಮುಂತಾದವರು ಭಾವಗೀತೆ, ಜನಪದ ಗೀತೆ, ಜಾಗೃತಿ ಗೀತೆಗಳನ್ನು ಹಾಡಿ ಹುಣ್ಣಿಮೆಯ ಬೆಳದಿಂಗಳಿಗೆ ಕನ್ನಡದ ಸಿಂಚನಗೈದು ಪಾವನಗೊಳಿಸಿದರು. 

ವಾದ್ಯ ಕಲಾವಿದರಾದ ಆರ್‌.ವಿ.ವೆಂಕಟರಾಮರೆಡ್ಡಿ, ಜಿ.ಕೃಷ್ಣಪ್ಪ, ಅರಹಳ್ಳಿ ಶಿವಣ್ಣ, ದೊಡ್ಡಗಂಜೂರು ನಾಗರಾಜಪ್ಪ ಅವರು ವಿವಿಧ ಪಕ್ಕ ವಾದ್ಯಗಳನ್ನು ನುಡಿಸಿ, ಗಾಯಕರ ಕಂಠಸಿರಿಯಿಂದ ಮೂಡಿಬಂದ ಗಾನಲಹರಿಗೆ ಸಂಗೀತದ ಮೆರುಗು ನೀಡಿ ಕೇಳುಗರ ಮೆಚ್ಚುಗೆಗೆ ಪಾತ್ರರಾದರು. 

ಸಾಹಿತ್ಯ ಬಳಗದ ಗೌರವಾಧ್ಯಕ್ಷ ಬಿ.ವಿ.ರಾಮಚಂದ್ರಾರೆಡ್ಡಿ (ಸ್ವಾಮೀಜಿ) ಮಾತನಾಡಿ, ಕನ್ನಡ ಹುಣ್ಣಿಮೆ ಕಾರ್ಯಕ್ರಮವು ಗಾನ ಕಲಾವಿದರು ಹಾಗೂ ಸಂಗೀತಗಾರರ ಅಪೂರ್ವ ಸಂಗಮದಂತಿದೆ. ಮುಂದಿನ ತಿಂಗಳಲ್ಲಿ ಈ ಕಾರ್ಯಕ್ರಮದ ಪ್ರಥಮ ವಾರ್ಷಿಕೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲಾಗುವುದು. ಇದಕ್ಕೆ ಎಲ್ಲರೂ ಸಹಕರಿಸಬೇಕು ಎಂದು ಹೇಳಿದರು.

ಮೀನುಗಾರಿಕೆ ಇಲಾಖೆಯ ನಿವೃತ್ತ ಉಪ ನಿರ್ದೇಶಕರಾದ ಗೋಪಾಲಗೌಡರು ಅಧ್ಯಕ್ಷತೆ ವಹಿಸಿದ್ದರು. ಈ ವೇಳೆ ತಾಲೂಕು ಕಸಾಪ ಅಧ್ಯಕ್ಷ ಮು.ಪಾಪಣ್ಣ, ನಿವೃತ್ತ ಇಂಜಿನಿಯರ್‌ ಕೆ.ಎಸ್‌.ರಾಮಕೃಷ್ಣಾ ರೆಡ್ಡಿ, ಪ್ರಾಧ್ಯಾಪಕ ಡಾ.ಕೆ.ಸೋಮಶೇಖರ್‌, ವೇದಾಂತಿ ಡಾ.ಕೆ.ಕೃಷ್ಣಪ್ಪ, ಯುವ ಬರಹಗಾರ ಕೆ.ಎನ್‌.ಅಕ್ರಂಪಾಷ, ಸಾಹಿತ್ಯ ಬಳಗದ ಅಧ್ಯಕ್ಷ ನಂಜಪ್ಪರೆಡ್ಡಿ, ಜಿ.ವಿ.ರಾಮಕೃಷ್ಣ, ಜಿ.ಅಶ್ವತ್ಥನಾರಾಯಣ ರೆಡ್ಡಿ, ಶಿ.ಮ.ಮಂಜುನಾಥ, ಮೈಲಾಪುರ ಲೋಕೇಶ್‌, ಸುನಿಲ್‌ ಕುಮಾರ್‌, ಮೈಲಾಂಡ್ಲಹಳ್ಳಿ ಮಂಜುನಾಥ್‌ ಉಪಸ್ಥಿತರಿದ್ದರು.


Trending videos

Back to Top