CONNECT WITH US  

ಅಕ್ರಮ ಸರ್ಕಾರಿ ಭೂಮಿ ಒತ್ತುವರಿ ತೆರವು

ಚಿಂತಾಮಣಿ: ತಾಲೂಕಿನಲ್ಲಿ ಸರ್ಕಾರಿ ಜಮೀನುಗಳ ಅಕ್ರಮ ಹೆಚ್ಚಾಗಿದ್ದ ಹಿನ್ನೆಲೆಯಲ್ಲಿ ಅಧಿಕಾರಿಗಳು ಸರ್ಕಾರಿ ಭೂಮಿ ಒತ್ತುವರಿಗೆ ಮುಂದಾಗಿದ್ದಾರೆ. ಅಕ್ರಮವಾಗಿದ್ದ ಕೆರೆಯಂಗಳ ಜಮೀನನ್ನು ಕಂದಾಯ ಅಧಿಕಾರಿಗಳು ವಶಪಡಿಸಿಕೊಂಡು ಬೇಲಿಹಾಕುವಲ್ಲಿ ಯಶಸ್ವಿಯಾಗಿದ್ದಾರೆ.

ತಾಲೂಕಿನ ಬುಕ್ಕನಹಳ್ಳಿ ಗ್ರಾಮದ ಸರ್ವೆ ನಂ.54ರ ಪಕ್ಕದಲ್ಲಿರುವ ಕೆರೆ ಜಾಗವನ್ನು ಬುಕ್ಕನಹಳ್ಳಿ ಗ್ರಾಮದ ರಾಮರೆಡ್ಡಿ ಮತ್ತು ನಾರಾಯಣಸ್ವಾಮಿ ಎಂಬುವರು ಒತ್ತುವರಿ ಮಾಡಿಕೊಂದ್ದು, ಭೂ ಒತ್ತುವರಿದಾರರಿಂದ ಜಿಪಂ ಅಭಿಯಾಂತರ ರವೀಂದ್ರ ಬಾಬು ಹಾಗೂ ಕಂದಾಯ ಅಧಿಕಾರಿಗಳು ಒತ್ತುವರಿಯಾಗಿದ್ದ ಜಮೀನನ್ನು ವಶಪಡಿಸಿಕೊಂಡು ಭದ್ರತೆ ನೀಡಿದ್ದಾರೆ.

ಇನ್ನೂ ಒತ್ತುವರಿಯಾಗಿದ್ದ ಕೆರೆ ಜಮೀನನ್ನು ತೆರವುಗೊಳಿಸುವಂತೆ ಅಧಿಕಾರಿಗಳು ಕಳೆದ ಒಂದು ತಿಂಗಳ ಹಿಂದೆ ಸೂಚಿಸಿದ್ದರೂ, ಅಧೀಕಾರಿಗಳ ಮಾತಿಗೆ ಕಿವಿಕೊಡದ ಭೂ ಅಕ್ರಮಿಗಳು ಕೆರೆಯಾಂಗಲವನ್ನು ಉಳುಮೆ ಮಾಡಿ ಬಿತ್ತನೆಗೆ ಸಿದ್ದಪಡಿದ್ದರು. ಇದನ್ನು ಅರಿತ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ತೆರವುಗೊಳಿಸಿ ಭದ್ರತೆ ನೀಡಿದ್ದಾರೆ.

ಈ ವೇಳೆ ಜಿಪಂ ಎಇಇಎ ರವೀಂದ್ರ ಬಾಬು, ಅಂಬಾಜಿದುರ್ಗ ಹೋಬಳಿಯ ಕಂದಾಯ ವೃತ್ತ ನಿರೀಕ್ಷಕ ಕೃಷ್ಣಯ್ಯ, ಗ್ರಾಮ ಲೆಕ್ಕಿಗ ಶ್ರೀನಿವಾಸ್‌, ತಾಲೂಕು ಸರ್ವೆ ಅಧಿಕಾರಿ ಶ್ರೀನಿವಾಸ್‌ ಹಾಜರಿದ್ದರು.

ಇಂದು ಹೆಚ್ಚು ಓದಿದ್ದು

ಚುನಾವಣೆ ಹಿನ್ನೆಲೆಯಲ್ಲಿ ಜೈಪುರದಲ್ಲಿ ಬುಧವಾರ ಬಿಜೆಪಿ ಮತ್ತು ಕಾಂಗ್ರೆಸ್‌ಗಾಗಿ ಪ್ರಚಾರ ಸಾಮಗ್ರಿಗಳನ್ನು ಸಿದ್ಧಪಡಿಸುತ್ತಿರುವ ಕಾರ್ಯಕರ್ತರು.

Nov 15, 2018 07:29am

Trending videos

Back to Top