ರಾಜಕಾರಣಿಗಳು ವಾಜಪೇಯಿ ತತ್ವಾದರ್ಶ ಅಳವಡಿಸಿಕೊಳ್ಳಿ

ಚಿಂತಾಮಣಿ: ದೇಶದಲ್ಲಿ ರಾಜಕೀಯ ಅಜಾತಶತ್ರು ಎಂದೇ ಪ್ರಖ್ಯಾತಿ ಪಡೆದಿರುವ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ನಿಧನ ದೇಶದ ರಾಜಕಾರಣಕ್ಕೆ ತುಂಬಲಾರದ ನಷ್ಟವಾಗಿದೆ. ವಾಜಪೇಯಿ ಅವರಂತಹ ರಾಜಕೀಯ ಪ್ರವೀಣರು ದೇಶಕ್ಕೆ ಇನ್ನು ದೊರೆಯಲಾರರು ಎಂದು ವಿಧಾನಸಭಾ ಉಪಸಭಾಧ್ಯಕ್ಷ ಜೆ.ಕೆ.ಕೃಷ್ಣಾರೆಡ್ಡಿ ತಿಳಿಸಿದರು.
ದುಃಖಕರ ಸಂಗತಿ: ದೇಶದ ಸರ್ವಾಂಗಿಣ ಅಭಿವೃದ್ಧಿಗೆ ಶ್ರಮಿಸಿ ರಾಜಕೀಯ ಕ್ಷೇತ್ರದಲ್ಲಿ ದೊಡ್ಡಣ್ಣನಂತೆ ಇದ್ದ ವಾಜಪೇಯಿ ಅವರ ನಿಧನ ದೇಶದ ಎಲ್ಲಾ ಜನತೆಗೂ ದುಃಖ ತರುವಂತರ ಸಂಗತಿಯಾಗಿದೆ. ಇದರಿಂದ ಭಾರತೀಯರು ತೊಂದರೆ ಅನುಭವಿಸುವಂತಾಗಿದೆ ಎಂದ ಅವರು, ವಾಜಪೇಯಿ ಅವರ ಕುಟುಂಬಕ್ಕೆ ದೇವರು ಶಕ್ತಿ ನೀಡಲಿ ಎಂದು ಪಾರ್ಥಿಸಿದರು.
ವಾಜಪೇಯಿ ಮಾರ್ಗ ಅಗತ್ಯ: ರಾಜಕಾರಣದಲ್ಲಿ ಹಲವು ಹುದ್ದೆಗಳನ್ನು ಆಲಂಕರಿಸಿ ದೇಶದ ಪ್ರಧಾನಿಯಾಗಿ ದೇಶದ ಅಭಿವೃದ್ಧಿಗೆ ಶ್ರಮಿಸಿದರು. ಇಂದಿನ ರಾಜಕಾರಣಿಗಳು ವಾಜಪೇಯಿ ಅವರ ಗುಣ, ತತ್ವಾದರ್ಶಗಳನ್ನು ಮೈಗೋಡಿಸಿಕೊಳ್ಳುವ ಅಗತ್ಯವಿದೆ ಎಂದು ತಿಳಿಸಿದರು.