CONNECT WITH US  

ಡೀಸಿ ನಿವಾಸದ ಬಳಿ ತುಕು ಹಿಡಿಯುತಿ R ದೆ ಸರ್ಕಾರಿ ಜೀಪು

ಚಿಕ್ಕಬಳ್ಳಾಪುರ: ಜಿಲ್ಲಾ ಕೇಂದ್ರದಲ್ಲಿ ಕಾರ್ಯನಿರ್ವಹಿಸುವ ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ತಿರುಗಾಡಲು ಸರ್ಕಾರ ಲಕ್ಷಾಂತರ ರೂ. ವೆಚ್ಚದ ಹವಾನಿಯಂತ್ರಿತ ವಾಹನಗಳನ್ನು ಒದಗಿಸುತ್ತಿದೆ. ಆದರೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಬೆಲೆ ಬಾಳುವ ಸರ್ಕಾರಿ ವಾಹನಗಳು ಬಳಕೆಯಾಗದೇ ನಗರದ ವಿವಿಧಡೆಗಳಲ್ಲಿ ಮಳೆ, ಗಾಳಿಗೆ ಮೈಯೊಡ್ಡಿ ತುಕ್ಕು ಹಿಡಿಯುವ ಮೂಲಕ ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟು ಮಾಡುತ್ತಿವೆ. ಹೌದು ನಗರದ ವಾಪಸಂದ್ರದ ಮುಖ್ಯ ರಸ್ತೆಯಲ್ಲಿರುವ ಡೀಸಿ ನಿವಾಸದ ಎದರಿಗೆ ಸರ್ಕಾರಿ ಜೀಪ್‌ವೊಂದು ಬಳಕೆಯಾಗದೇ ಹಲವು ತಿಂಗಳನಿಂದ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಒಳಗಾಗಿ ಮಳೆ, ಗಾಳಿಗೆ ಮೈಯೊಡ್ಡಿ ನಿಂತಿದ್ದು, ಅದರಲೂ ಜಿಲ್ಲಾಧಿಕಾರಿಗಳ ನಿವಾಸದ ಬಳಿ ಸರ್ಕಾರಿ ವಾಹನ ಅನಾಥವಾಗಿರುವುದು ಅಂತೂ ನಗರದ ಸಾರ್ವಜನಿಕ ವಲಯದಲ್ಲಿ ಟೀಕೆಗೆ ಗುರಿಯಾಗಿದೆ.

ವಾಪಸಂದ್ರದ ಮುಖ್ಯ ರಸ್ತೆಯಲ್ಲಿ ಸರ್ಕಾರಿ ಜೀಪನ್ನು ನಿಲ್ಲಿಸಲಾಗಿದೆ. ವಾಹನದ ಮೇಲೆ ಯಾವುದೇ ಇಲಾಖೆ ಹೆಸರು ಇಲ್ಲದಿದ್ದರೂ ಕೆ.ಎ- 40, ಜಿ- 101 ಎಂಬ ಸಂಖ್ಯೆ ನಮೂದಾಗಿದೆ. ಸಾಮಾನ್ಯವಾಗಿ ಜಿ. ಇರುವ ವಾಹನಗಳು ಸರ್ಕಾರಿ ವಾಹನಗಳೇ ಆಗಿರುತ್ತೆವೆ. ಪಕ್ಕದಲ್ಲಿ ಕರ್ನಾಟಕ ಲೋಕಾಯುಕ್ತ ಜಿಲ್ಲಾ ಕಚೇರಿ ಇದೆ. ಡೀಸಿ ವಸತಿ ಗೃಹದ ಅಕ್ಕಪಕ್ಕ ಅನೇಕ ಇಲಾಖೆಗಳ ಅಧಿಕಾರಿಗಳು ವಾಸ ಆಗಿದ್ದಾರೆ. ಆದರೆ ಯಾವ ಇಲಾಖೆ ಜೀಪ್‌ ಎನ್ನುವುದು ಮಾತ್ರ ನಿಗೂಢವಾಗಿದೆ.

ಸುಮಾರು ಒಂದು ವರ್ಷಕ್ಕೂ ಹೆಚ್ಚು ಈ ಸರ್ಕಾರಿ ಜೀಪು ರಸ್ತೆ ಬದಿಯಲ್ಲಿ ಠಿಕಾಣಿ ಹಾಕಿ ಮಳೆ, ಗಾಳಿ, ಬಿಸಿಲಿಗೆ ತನ್ನ ಸ್ವರೂಪವನ್ನು ಕಳೆದುಕೊಳ್ಳುತ್ತಿದೆ. ಈಗಾಗಲೇ ಜೀಪ್‌ನ ಬಹುಭಾಗ ದೂಳು ಆವರಿಸಿಕೊಂಡಿದ್ದು, ನೋಡಲು ಚೆಂದವಾಗಿದ್ದರೂ ಅದನ್ನು ಬಳಕೆ ಮಾಡುವ ಮನಸ್ಸು ಅಧಿಕಾರಿಗಳಲ್ಲಿ ಇಲ್ಲದ ಕಾರಣ ಅಥವ ಇಲಾಖೆಗೆ ಹೊಸ ಕಾರು ಬಂದ ಬಳಿಕ ಅಧಿಕಾರಿಗಳು ಹಳೆ ಕಾರು ಮರೆತು ಬಿಟ್ಟರಾ ಎಂಬ ಅನುಮಾನ ಸರ್ಕಾರಿ ಜೀಪು ನೋಡಿದ ವರನ್ನು ಕಾಡುತ್ತಿದೆ. ಈಗಾಗಲೇ ನಿರ್ಲಕ್ಷ್ಯಕ್ಕೆ ಒಳಗಾಗಿರುವ ಸರ್ಕಾರಿ ಜೀಪ್‌ನಲ್ಲಿ ಬೆಲೆ ಬಾಳುವ ಬಿಡಿಭಾಗಗಳು ಇಲ್ಲದಂತಾಗಿದ್ದು, ರಸ್ತೆ ಬದಿಯಲ್ಲಿ ನಿಲ್ಲಿಸಿ ನಿರ್ಲಕ್ಷಿಸಿರುವುದರಿಂದ ರಾತ್ರಿ ಪಾಳೆಯಲ್ಲಿ ಕಳ್ಳರು ವಾಹನದ ಬಿಡಿಭಾಗಗಳನ್ನು ಕದಿಯಲು ಮುಂದಾಗಿದ್ದಾರೆ.

ಡೀಸಿ ಕಚೇರಿ ಆವರಣದಲ್ಲಿ ವಾಹನಗಳ ನಿರ್ಲಕ್ಷ್ಯ: ಡೀಸಿ ನಿವಾಸದ ಬಳಿ ಸರ್ಕಾರಿ ವಾಹನದ ದುಸ್ಥಿತಿ ಈ ರೀತಿಯಾದರೆ ಜಿಲ್ಲಾ ಡಳಿತದ ಶಕ್ತಿ ಕೇಂದ್ರವಾಗಿರುವ ಜಿಲ್ಲಾಡಳಿತ ಭವನದ ಆವರಣದಲ್ಲಿ ಕೂಡ ವಿವಿಧ ಇಲಾಖೆಗಳ ಹತ್ತಾರು ವಾಹನಗಳು ಬಳಕೆಯಾಗದೇ ಅಧಿಕಾರಿಗಳ ನಿರ್ಲಕ್ಷ್ಯದಿಂದ ಮೂಲೆಗುಂಪು ಮಾಡಲಾಗಿದೆ. ಕೆಲ ಅಧಿಕಾರಿಗಳು ಇಲಾಖೆಗೆ ಹೊಸ ಕಾರುಗಳನ್ನು ಖರೀದಿಸಿದ ನಂತರ ಹಳೆ ಕಾರುಗಳನ್ನು ವಿಲೇವಾರಿ ಮಾಡದ ಪರಿಣಾಮ ಆವರಣದಲ್ಲಿ ಹಳೆಯ ವಾಹನಗಳು ತುಕ್ಕು ಹಿಡಿಯುತ್ತಿವೆ. ಈ ಬಗ್ಗೆ ಹಲವಾರು ಬಾರಿ ಸಾರ್ವಜನಿಕರು ಜಿಲ್ಲಾಡಳಿತದ ಗಮನಕ್ಕೆ ತಂದರೂ ಏನು ಪ್ರಯೋಜನವಾಗುತ್ತಿಲ್ಲ. ಕೆಲ ಇಲಾಖೆಗಳ ಅಧಿಕಾರಿಗಳು ಸರ್ಕಾರಿ ವಾಹನಗಳು ಇದ್ದರೂ ದುರಸ್ತಿ ನೆಪವೊಡ್ಡಿ ಬಾಡಿಗೆ ಕಾರುಗಳಲ್ಲಿ ತಿರುಗಾಡುವ ಮೂಲಕ ಸರ್ಕಾರಕ್ಕೆ ವಂಚಿಸುತ್ತಿದ್ದಾರೆಂಬ ಆರೋಪಗಳು ಸಹ ಕೇಳಿ ಬರುತ್ತಿವೆ.

ಡೀಸಿ ನಿವಾಸದ ಬಳಿ ಸರ್ಕಾರಿ ಕಾರು ವರ್ಷಗಳಿಂದ ಬಳಸದೇ ನಿರ್ಲಕ್ಷಿಸಲಾಗಿದೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ಲಕ್ಷಾಂತರ ರೂ. ನಷ್ಟ ಆಗುತ್ತಿದೆ. ಕನಿಷ್ಠ ರಿಪೇರಿ ಮಾಡಿ ಅಥವಾ ಗುಜರಿಗೆ ಕೊಟ್ಟಿದ್ದರೂ ಸರ್ಕಾರಕ್ಕೆ ಒಂದಿಷ್ಟು ಆದಾಯ ಬರುತ್ತಿತ್ತು. ಈ ಬಗ್ಗೆ ಜಿಲ್ಲಾಡಳಿತ ಗಮನ ಹರಿಸಿ ಸರ್ಕಾರಿ ವಾಹನವನ್ನು ರಕ್ಷಿಸಬೇಕಿದೆ.
ಎನ್‌.ಚಂದ್ರಶೇಖರ್‌, ಚಿಕ್ಕಬಳ್ಳಾಪುರ ನಿವಾಸಿ

ಕಾಗತಿ ನಾಗರಾಜಪ್ಪ

ಇಂದು ಹೆಚ್ಚು ಓದಿದ್ದು

ಬೆಂಗಳೂರಿನಲ್ಲಿ ನಡೆದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಸಂಬಂಧಿ ಮದುವೆ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಸಚಿವ ರಮೇಶ ಜಾರಕಿಹೊಳಿ.

Nov 19, 2018 06:00am

ಬಾಗಲಕೋಟೆಯಲ್ಲಿ ಕಬ್ಬು ತುಂಬಿದ್ದ ಟ್ರ್ಯಾಕ್ಟರ್‌ ಬೆಂಕಿಗೆ ಆಹುತಿ.

Nov 19, 2018 06:00am

Trending videos

Back to Top