CONNECT WITH US  

ಮೂರು ಮಕ್ಕಳ ಕತ್ತು ಕೊಯ್ದು ಆತ್ಮಹತ್ಯೆಗೆ ಯತ್ನಿಸಿದ ತಾಯಿ 

ಮೀಟರ್‌ ಬಡ್ಡಿ ದಂಧೆಕೋರರ ಕಾಟ ತಾಳಲಾರದೆ ಕಠಿಣ ನಿರ್ಧಾರ 

ಚಿಂತಾಮಣಿ: ಮೂವರು ಮಕ್ಕಳ ಕತ್ತು ಕೊಯ್ದ ಮಹಿಳೆ ಬಳಿಕ ತಾನೂ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಗುರವಾರ ನಡೆದಿದೆ. ನಾಲ್ವರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ಮುಂದುವರಿದಿದೆ.

ನಿರಂತರವಾಗಿ ಮೀಟರ್‌ ಬಡ್ಡಿ ದಂಧೆಕೋರರ ಕಾಟ ತಾಳಲಾರದೆ ರಾಜಮ್ಮ ಎಂಬ ಮಹಿಳೆ ಮಕ್ಕಳಾದ  ಮನೋಜ್‌, ಅಮೃತಾ ಮತ್ತು ಭೂಮಿಕಾಳ ಕತ್ತು ಕೊಯ್ದು ತಾನೂ ಕತ್ತು ಕುಯ್ದು ಕೊಂಡಿದ್ದಾಳೆ.

ಮಕ್ಕಳ ಚೀರಾಟ ಕೇಳಿ ನೆರೆ ಹೊರೆಯವರು ದೌಡಾಯಿಸಿ ನಾಲ್ವರನ್ನು ತಕ್ಷಣ ಚಿಕ್ಕಬಳ್ಳಾಪುರ ತಾಲೂಕು ಆಸ್ಪತ್ರೆಗೆ ದಾಖಲಿಸಿದ್ದಾರೆ. ನಾಲ್ವರಿಗೂ ಚಿಕಿತ್ಸೆ ಮುಂದುವರಿದಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.  

ರಾಜಮ್ಮ ಪತಿ ವೆಂಕಟೇಶ್‌ ಹಲವು ಜನರ ಬಳಿ ಸಾಲ ಪಡೆದುಕೊಂಡು,ಸಾಲಬಾಧೆ  ತಾಳಲಾರದೆ ಮನೆ ಬಿಟ್ಟು ತೆರಳಿದ್ದಾರೆ. ಆ ಬಳಿಕ ಸಾಲ ನೀಡಿದವರು ನಿತ್ಯವೂ ಪೀಡಿಸುತ್ತಿದ್ದರು ಎಂದು ತಿಳಿದು ಬಂದಿದೆ. 

ಚಿಂತಾಮಣಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 


Trending videos

Back to Top