CONNECT WITH US  

ಮರ ಬಿದ್ದು ಚಾಲಕನಿಗೆ ಗಾಯ

ಬಾಳೆಹೊನ್ನೂರು: ರಸ್ತೆಯಲ್ಲಿ ಬಿದ್ದ ಮರವನ್ನು ತೆರವುಗೊಳಿಸುವಾಗ ಮತ್ತೂಂದು ಮರ ಬಿದ್ದು ಜೀಪ್‌ ಚಾಲಕ ಗಾಯಗೊಂಡ ಘಟನೆ ತಡ ರಾತ್ರಿ ವಿರಾಜಪೇಟೆ ಬೈಂದೂರು ರಾಜ್ಯ ಹೆದ್ದಾರಿ ಎಲೆಕಲ್ಲು ಸಮೀಪ ಘಟನೆ ಸಂಭವಿಸಿದೆ.

ಗಾಯಾಳುವನ್ನು ಶಿವಮೊಗ್ಗ ಆಸ್ಪತ್ರೆಗೆ ದಾಖಲಿಸಲಾಗಿದೆ. ಮರ ತೆರವುಗೊಳಿಸುವಾಗ ಮತ್ತೂಂದು ಮರ ಬಿದ್ದಾಗ ಗಾಬರಿಯಿಂದ ಓಡುವಾಗ ಈ ಅವಘಡ ಸಂಭವಿಸಿದೆ. ಎಸಿ.ಎಫ್‌. ಲೋಹಿತ್‌ ಆರ್‌.ಎಫ್‌.ಒ ತನುಜ್‌ ಕುಮಾರ್‌ ಹಾಗೂ ಪೊಲೀಸ್‌ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಉಪ ವಲಯ ಅರಣಾಧಿಕಾರಿ ಮಂಜುನಾಥ್‌, ನಾರಾಯಣ, ಮರ ತೆರವುಗೊಳಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ಇದಕ್ಕೂ ಮುನ್ನ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್‌ ಅವರು ಶೃಂಗೇರಿ ಕ್ಷೇತ್ರದಲ್ಲಿ ಅತಿವೃಷ್ಟಿ ಪ್ರದೇಶಕ್ಕೆ ಭೇಟಿ ನೀಡಿ ವಾಪಸ್‌ ಚಿಕ್ಕಮಗಳೂರಿಗೆ ಹೋಗುವಾಗ ರಾತ್ರಿ 7:30 ರ ಸಮಯದಲ್ಲಿ ಭಾರೀ ಮರವೊಂದು ರಸ್ತೆಗೆ ಬಿದ್ದು, ಸಚಿವರ ಪ್ರಯಾಣಕ್ಕೆ ಅಡ್ಡಿಯಾಯಿತು. ತೆರವು ಮಾಡಲು ಸುಮಾರು 2 ಗಂಟೆಗಳ ಕಾಲ ಸಮಯ ಬೇಕಾಗುವುದೆಂದು ತಿಳಿಸಿದಾಗ ಮಾಗುಂಡಿ ಹುಯಿಗೆರೆ ಮಾರ್ಗದಲ್ಲಿ ಚಿಕ್ಕಮಗಳೂರಿಗೆ ತೆರಳಿದರು.


Trending videos

Back to Top