ಮೂಡಿಗೆರೆಯಲ್ಲಿ ಮೂಡಲಿ ಅಭಿವೃದ್ಧಿಯ ಬೆಳಕು

Team Udayavani, Aug 21, 2018, 5:53 PM IST

chikk.jpg

ಮೂಡಿಗೆರೆ: ಕಾಫಿ ನಾಡು ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದ ಮಧ್ಯದಲ್ಲಿರುವ ಮೂಡಿಗೆರೆ ತಾಲೂಕು ಸುಂದರ ಪ್ರಕೃತಿಯ ತಾಣ. ತಾಲೂಕು ಕೇಂದ್ರವಾಗಿದ್ದರೂ ಹಲವು ವಿಷಯದಲ್ಲಿ ಇನ್ನೂ ಹೋಬಳಿಯದ್ದೇ ವಾತಾವರಣ. ಆಧುನಿಕತೆಯ ಗಾಳಿ ಬೀಸುತ್ತಿದ್ದರೂ ಅಭಿವೃದ್ಧಿ ಅನ್ನೋದು ಮರೀಚಿಕೆಯಾಗಿದೆ. ತಾಲೂಕಿನ ಕೆಲ ಹಳ್ಳಿಗಳು ಇಂದಿಗೂ ಮೂಲ ಸೌಲಭ್ಯ ಇಲ್ಲದೆ ನರಳುತ್ತಿವೆ. ತಾಲೂಕಿನ ಜನ ಮೇಲ್ದರ್ಜೆಯ ಕನಸು ಕಾಣುತ್ತಲೇ ಇದ್ದು ಇನ್ನೂ ನನಸಾಗಿಲ್ಲ.

ಪುರಸಭೆ ಪಟ್ಟಣ ಪಂಚಾಯ್ತಿಯಾಯ್ತು: ರಾಜ್ಯದ ಹಲವೆಡೆ ಕೆಲವು ಪಟ್ಟಣಗಳು ತಾಲೂಕುಗಳಾಗಿ, ಇನ್ನು ಕೆಲವು ಪಟ್ಟಣಪಂಚಾಯ್ತಿಗಳು ಪುರಸಭೆಯಾಗಿ, ಹಾಗೂ ನಗರಸಭೆಗಳಾಗಿ ಮೇಲ್ದರ್ಜೆಗೇರಿದೆ. ಆದರೆ ಸುಮಾರು 20-25 ವರ್ಷಗಳ ಪುರಸಭೆಯಾಗಿದ್ದ ಮೂಡಿಗೆರೆ ನಂತರದ ದಿನಗಳಲ್ಲಿ ಜನಸಂಖ್ಯೆ ಆಧಾರದಲ್ಲಿ ಸರ್ಕಾರದ ನಿಯಮನುಸಾರ ಅದು ಪಟ್ಟಣಪಂಚಾಯ್ತಿಯಾಗಿ ಹಿಂಬಡ್ತಿಗೊಂಡಿದೆ. ಪಟ್ಟಣದ ಪಕ್ಕದಲ್ಲಿರುವ ಹೆಸಲ್‌ ಗ್ರಾಮ ಪಂಚಾಯತ್‌, ಹಾಗೂ ಹಳೇಮೂಡಿಗೆರೆ ಗ್ರಾಮಪಂಚಾಯ್ತಿಯನ್ನು ಪಟ್ಟಣದ ವ್ಯಾಪ್ತಿಗೆ ಸೇರ್ಪಡೆಗೊಳಿಸಿದಲ್ಲಿ ಪುನಃ ಹಿಂದಿನಂತೆಯೇ ಪುರಸಭೆಯಾಗಲಿದೆ.

ಪುರಸಭೆಯಾದಲ್ಲಿ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಹರಿದುಬರಲಿದೆ. ಇದರಿಂದ ಪಟ್ಟಣದಲ್ಲಿ ಸಾಕಷ್ಟು ಬದಲಾವಣೆ ತರಬಹುದು. ತಾಲೂಕು ಕೇಂದ್ರದ ರಸ್ತೆಗಳನ್ನು ಅಭಿವೃದ್ಧಿಪಡಿಸಬಹುದು. ಅಲ್ಲದೆ ಪಟ್ಟಣಕ್ಕೆ ಉತ್ತಮ ಕುಡಿಯುವ ನೀರಿನ ವ್ಯವಸ್ಥೆ, ಸಮರ್ಪಕವಾದ ವಿದ್ಯುತ್‌ಶಕ್ತಿ ಮೊದಲಾದ ಸೌಲಭ್ಯಗಳು ದೊರಕಲಿವೆ. ಈಗ ಪಟ್ಟಣದ ಒಳಗೆ ಬಹಳಷ್ಟು ಸರ್ಕಾರಿ ಜಾಗಗಳು ಯಾವುದೇ
ಪ್ರಯೋಜನಕ್ಕೂ ಬಾರದೆ ಖಾಲಿ ಬಿದ್ದಿದೆ. ಪಟ್ಟಣದ ಮಧ್ಯಬಾಗದಲ್ಲಿಯೇ ಈ ನಿವೇಶನಗಳು ಇದ್ದರೂ ಕೂಡಾ ಅದ್ಯಾವುದೂ ಸಹ ಸಮರ್ಪಕವಾಗಿ ಸದ್ಬಳಕೆಯಾಗುತ್ತಿಲ್ಲ. ಆ ಖಾಲಿ ನಿವೇಶನಗಳಲ್ಲಿ ಸರ್ಕಾರದಿಂದಲೇ ವಾಣಿಜ್ಯಮಳಿಗೆಗಳನ್ನು ನಿರ್ಮಿಸಿದಲ್ಲಿ ಆದಾಯಕ್ಕೆ ದಾರಿಯಾಗಲಿದೆ. ಅಲ್ಲದೆ ಸರಕಾರಿ ನೌಕರರಿಗಾಗಿ ವಸತಿಗೃಹಗಳನ್ನು ಕಟ್ಟಿಸಬಹುದು. ಹೀಗೆ ಖಾಲಿ ಬಿದ್ದ ಸ್ಥಳಗಳ ಪ್ರಯೋಜನ ಪಡೆಯುವತ್ತ ಚಿಂತನೆ ಆಗಬೇಕಿದೆ.

ಸಂಚಾರ ಸಮಸ್ಯೆಗೆ ಬೇಕಿದೆ ಮುಕ್ತಿ: ಮೂಡಿಗೆರೆಯ ಕಡೂರು-ಮಂಗಳೂರು ರಾಷ್ಟೀಯ ಹೆದ್ದಾರಿ ಪಟ್ಟಣದೊಳಗೆ ಹಾದುಹೋಗುವುದರಿಂದ ವಾಹನ ಸಂಖ್ಯೆ ಸದಾ ಅಧಿಕವಾಗಿರುತ್ತದೆ. ಅದಕ್ಕಾಗಿ ಮೂಡಿಗೆ ರೆ ಪಟ್ಟಣದ ಹೊರವಲಯದಲ್ಲಿ ವರ್ತುಲ ರಸ್ತೆ ನಿರ್ಮಾಣವಾಗಬೇಕಿದೆ. ಇದಾದಲ್ಲಿ ಪಟ್ಟಣದ  ಒಳಗೆ ಬರುವ ಭಾರೀ ವಾಹನಗಳ ಸಂಚಾರ ಕಡಿಮೆಯಾಗುತ್ತದೆ. ಹಾಗೂ ಪಟ್ಟಣದ ಕಡೂರು ಮಂಗಳೂರು ಮುಖ್ಯರಸ್ತೆ ಅಗಲೀಕರಣಗೊಂಡು ಮಧ್ಯದಲ್ಲಿ ರಸ್ತೆ ವಿಭಜಕ ಹಾಕಿದಲ್ಲಿ ಮುಖ್ಯರಸ್ತೆ ಸುಂದರವಾಗಿ ಕಾಣುವುದಲ್ಲದೆ ಅಪಘಾತದ ಪ್ರಮಾಣವು ಕಡಿಮೆಯಾಗುತ್ತದೆ. ಅದೇರೀತಿ ಪಟ್ಟಣದ ಮಹಾತ್ಮಗಾಂಧಿ ರಸ್ತೆ ಪಟ್ಟಣದ ವ್ಯವಹಾರ ಸ್ಥಳವಾಗಿದ್ದು ಇಲ್ಲಿ ವಾಹನ ಸಂಚಾರ ಹೆಚ್ಚಿರುತ್ತದೆ.

ಇದರಿಂದ ಪಾದಚಾರಿಗಳಿಗೂ, ಅಂಗಡಿಗೆ ಬರುವ ವ್ಯಾಪಾರಸ್ಥರಿಗೂ ಬಹಳಷ್ಟು ಸಮಸ್ಯೆಯಾಗುತ್ತಿದೆ. ಅದಕ್ಕಾಗಿ ಎಂ.ಜಿ.ರಸ್ತೆಯ ಅಗಲೀಕರಣ ಹಾಗೂ ವಾಹನ ನಿಲುಗಡೆಗೆ ಯೋಜನೆ ರೂಪಿಸಬೇಕಿದೆ. ಇದರಿಂದ ಪಟ್ಟಣದ ಸೌಂದರ್ಯವೂ ಹೆಚ್ಚಲಿದೆ.

ಬೇಕಿದೆ ಸುಸಜ್ಜಿತ ಆಸ್ಪತ್ರೆ: ಪಟ್ಟಣಕ್ಕೆ ಸುಸಜ್ಜಿತ, ವ್ಯವಸ್ಥಿತ ಆಸ್ಪತ್ರೆಯ ಅಗತ್ಯವಿದೆ. ಇಲ್ಲಿನ ಸರ್ಕಾರಿ ಆಸ್ಪತ್ರೆ 100 ಹಾಸಿಗೆಗಳ ಸಾಮರ್ಥಯದ್ದಾಗಿದ್ದರೂ ಕಟ್ಟಡ ಮಾತ್ರ ವೈದ್ಯಕೀಯ ಸೌಲಭ್ಯಗಳ ಕೊರತೆ ಇದೆ. ಶಸ್ತ್ರಚಿಕಿತ್ಸೆ ಮತ್ತು ಎಲ್ಲಾ ರೀತಿಯ ಕಾಯಿಲೆಗಳಿಗೆ ಅಗತ್ಯ ವೈದ್ಯರು ಮತ್ತು ವೈದ್ಯಕೀಯ ಸಲಕರಣೆಗಳ ಅಗತ್ಯವಿದೆ.
 
ಪ್ರವಾಸಿ ತಾಣವಾಗಲಿ: ತಾಲೂಕಿನಲ್ಲಿ ಪ್ರೇಕ್ಷಣಿಯ ಸ್ಥಳಗಳಾದ ದೇವರಮನೆ, ಚಾರಣಪ್ರಿಯರ ನೆಚ್ಚಿನ ಬೈರಾಪುರ, ಬಲ್ಲಾಳ ರಾಯನದುರ್ಗ, ಪರಿಸರ ಪ್ರಿಯರ ಕುದುರೆಮುಖ, ಹಾಗೂ ನೀರಿನ ಝರಿಗಳಿಂದ ಕೂಡಿದ ಚಾರ್ಮಾಡಿ ಘಾಟ್‌ ಹಾಗೂ ಧಾರ್ಮಿಕ ಸ್ಥಳವಾದ ಕಳಸ, ಹೊರನಾಡು, ಹೊಯ್ಸಳರ ಉಗಮ ಸ್ಥಾನವಾದ ಅಂಗಡಿ ಮೊದಲಾದ ಸ್ಥಳಗಳನ್ನು ಅಭಿವೃದ್ಧಿ ಪಡಿಸಬೇಕು. 

ಇದನ್ನು ಅಭಿವೃದ್ಧಿ ಪಡಿಸಿದಲ್ಲಿ ಪ್ರವಾಸೋದ್ಯಮದ ಮೂಲಕ ಆರ್ಥಿಕ ಲಾಭವಾಗಲಿದೆ. ಇದಕ್ಕೆ ಪ್ರವಾಸೋದ್ಯಮ ಇಲಾಖೆ ಹೆಚ್ಚಿನ ಮಹತ್ವ ನೀಡಬೇಕು. ಪ್ರವಾಸಿಗರನ್ನು ಆಕರ್ಷಿಸಲು ಮತ್ತು ಪ್ರವಾಸದ ಸ್ಥಳಗಳಿಗೆ ಹೋಗಲು ಉತ್ತಮ ರಸ್ತೆಗಳ ಅಗತ್ಯವಿದೆ. ಇವಿಷ್ಟು ಸಾರ್ವಜನಿಕರು ಕಂಡಂತಹ ಮುಂದಿನ ಮೂಡಿಗೆರೆಯ ಕನಸಿನ ಚಿತ್ರಣವಾಗಿದೆ.

ಇನ್ನೂ ಕತ್ತಲೆಯಲ್ಲೇ ಬದುಕು ಪಟ್ಟಣ ಸೇರಿದಂತೆ ತಾಲೂಕಿನ ಹಲವೆಡೆ ವಿದ್ಯುತ್‌ ಸಮಸ್ಯೆ ನೀಗಿಸಲು ಅಧಿಕ ವಿದ್ಯುತ್‌ ಪಡೆಯಬೇಕು. ಪುರಸಭೆಯಾದಲ್ಲಿ ಅಧಿಕ ವಿದ್ಯುತ್ತನ್ನು ಪಡೆಯಲು ಸಹಕಾರಿಯಾಗುತ್ತದೆ. ಈ ತಾಲೂಕಿನಲ್ಲಿ ಪಿ.ಯು.ಸಿ. ವರೆಗೆ ವಿಧ್ಯಾಭ್ಯಾಸಕ್ಕೆ ಯಾವುದೇ ತೊಂದರೆಯಿಲ್ಲ. ಮುಂದಿನ ವಿದ್ಯಾಭ್ಯಾಸಕ್ಕೆ ಬೇರೆಡೆಗೆ ಹೋಗಬೇಕು.ಅಲ್ಲದೆ ಇಲ್ಲಿ ಮುಖ್ಯವಾಗಿ ತಾಂತ್ರಿಕ ವಿಧ್ಯಾಲಯಗಳ ಅಗತ್ಯವಿದೆ. ಈ ವಿದ್ಯಾಲಯಗಳು ಬಂದಲ್ಲಿ ವಿಧ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಅದೇ ರೀತಿ ನಗರದ ಅಭಿವೃದ್ಧಿಗೆ ಹೂಡಿಕೆದಾರರ ಅಗತ್ಯವಿದೆ. ಇಲ್ಲಿ ಇರುವಂತಹ ಹಣವಂತರು ಬೇರೆಡೆ ಬಂಡವಾಳ ಹೂಡುತ್ತಾರೆ. ಆದರೆ ಇಲ್ಲಿಯೇ ಬಂಡವಾಳ ಹೂಡಿದಲ್ಲಿ ಸ್ಥಳೀಯರಿಗೆ ಉದ್ಯೋಗಾವಕಾಶ ದೊರಕುತ್ತದೆ. ಹಾಗೂ ಪಟ್ಟಣ ಆರ್ಥಿಕವಾಗಿ ಅಭಿವೃದ್ಧಿ ಹೊಂದುತ್ತದೆ.

„ನಾಗೇಶ್‌ ಹೆಬ್ಟಾರ್‌

ಟಾಪ್ ನ್ಯೂಸ್

Gujarat Lok Sabha Constituency: ಗುಜರಾತ್‌ ಎಂಬ ಕೇಸರಿ ಕೋಟೆಗೆ ಲಗ್ಗೆ ಸಾಧ್ಯವೇ?

Gujarat Lok Sabha Constituency: ಗುಜರಾತ್‌ ಎಂಬ ಕೇಸರಿ ಕೋಟೆಗೆ ಲಗ್ಗೆ ಸಾಧ್ಯವೇ?

Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್

Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್

4-gadaga

Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್‌ಪಿ

Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ

Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ

3-gadaga

Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

2-hunsur

Hunsur: ನಾಗರಹೊಳೆಯಲ್ಲಿ ದುಷ್ಕರ್ಮಿಗಳ ಗುಂಡೇಟಿಗೆ ಕಾಡುಕೋಣ ಬಲಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

 Lok Sabha Election: ಉಡುಪಿ- ಜಯಪ್ರಕಾಶ್‌ ಹೆಗ್ಡೆ ಬಿರುಸಿನ ಪ್ರಚಾರ, ದೇವಾಲಯಕ್ಕೆ ಭೇಟಿ

 Lok Sabha Election: ಉಡುಪಿ- ಜಯಪ್ರಕಾಶ್‌ ಹೆಗ್ಡೆ ಬಿರುಸಿನ ಪ್ರಚಾರ, ದೇವಾಲಯಕ್ಕೆ ಭೇಟಿ

B Y Vijayendra: ಕಾಂಗ್ರೆಸ್‌ನವರು ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ?

B Y Vijayendra: ಕಾಂಗ್ರೆಸ್‌ನವರು ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ?

Election 2024: ಕೋಟಾ ಅವರನ್ನು 2 ಲಕ್ಷ ಮತಗಳ ಅಂತರದಿಂದ ಗೆಲ್ಲಿಸಿ: ದೇವೇಗೌಡ

Election 2024: ಕೋಟಾ ಅವರನ್ನು 2 ಲಕ್ಷ ಮತಗಳ ಅಂತರದಿಂದ ಗೆಲ್ಲಿಸಿ: ದೇವೇಗೌಡ

ಕೋಟ ಅವರನ್ನು 2 ಲಕ್ಷ ಮತಗಳ ಅಂತರದಿಂದ ಗೆಲ್ಲಿಸಿ: ದೇವೇಗೌಡ

ಕೋಟ ಅವರನ್ನು 2 ಲಕ್ಷ ಮತಗಳ ಅಂತರದಿಂದ ಗೆಲ್ಲಿಸಿ: ದೇವೇಗೌಡ

9 ವರ್ಷದ ಬಾಲಕಿ ಕಿಡ್ನ್ಯಾಪ್ ಮಾಡಿ ಡಿಕೆಶಿ ಆಸ್ತಿ ಬರೆಯಿಸಿಕೊಂಡ್ರು: ಎಚ್‌ಡಿಡಿ

9 ವರ್ಷದ ಬಾಲಕಿ ಕಿಡ್ನ್ಯಾಪ್ ಮಾಡಿ ಡಿಕೆಶಿ ಆಸ್ತಿ ಬರೆಯಿಸಿಕೊಂಡ್ರು: ಎಚ್‌ಡಿಡಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Food Safety: ಆಹಾರ ಸುರಕ್ಷೆ- ನೂರು ಪ್ರತಿಶತ ಖಾತರಿ ಅಗತ್ಯ‌

Food Safety: ಆಹಾರ ಸುರಕ್ಷೆ- ನೂರು ಪ್ರತಿಶತ ಖಾತರಿ ಅಗತ್ಯ‌

Gujarat Lok Sabha Constituency: ಗುಜರಾತ್‌ ಎಂಬ ಕೇಸರಿ ಕೋಟೆಗೆ ಲಗ್ಗೆ ಸಾಧ್ಯವೇ?

Gujarat Lok Sabha Constituency: ಗುಜರಾತ್‌ ಎಂಬ ಕೇಸರಿ ಕೋಟೆಗೆ ಲಗ್ಗೆ ಸಾಧ್ಯವೇ?

Lok Sabha Election: ಮಠಾಧೀಶರ ಆಶೀರ್ವಾದ ಪಡೆದ ಬಿಜೆಪಿ ಅಭ್ಯರ್ಥಿ ಗಾಯಿತಿ ಸಿದ್ದೇಶ್ವರ

Lok Sabha Election: ಮಠಾಧೀಶರ ಆಶೀರ್ವಾದ ಪಡೆದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ

Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್

Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್

4-gadaga

Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್‌ಪಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.