CONNECT WITH US  

ಹಾವುಗೊಲ್ಲರಿಗೆ ಕಡುಹಿನಬೈಲಿನಲ್ಲಿ ತಾತ್ಕಾಲಿಕ ವ್ಯವಸ್ಥೆ

ಎನ್‌.ಆರ್‌.ಪುರ: ಇತ್ತೀಚೆಗೆ ತಾಲೂಕಿನ ಬಾಳೆ ಗ್ರಾ.ಪಂ. ವ್ಯಾಪ್ತಿಯಲ್ಲಿ ವಾಸವಾಗಿದ್ದ ಹಾವುಗೊಲ್ಲರ ಕುಟುಂಬಗಳು ಜ್ಯೋತಿಷಿಯೊಬ್ಬರ ಮಾತನ್ನು ಕೇಳಿ ಊರು ಬಿಟ್ಟು ಗುಳೇ ಹೋಗಿದ್ದರು. ಈ ಹಾವುಗೊಲ್ಲರಿಗೆ ಮಾನವೀಯತೆಯಡಿ ತಾತ್ಕಾಲಿಕವಾಗಿ ವಾಸಿಸಲು ಕಡಹಿನಬೈಲು ಗ್ರಾ.ಪಂನಲ್ಲಿ ನಡೆದ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.
 
ಗ್ರಾ.ಪಂ. ಅಧ್ಯಕ್ಷೆ ರೋಜಾಲಿಬಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ, ಇತ್ತೀಚೆಗೆ ತಾಲೂಕಿನ ಕಡಹಿನಬೈಲು ಗ್ರಾ.ಪಂ. ವ್ಯಾಪ್ತಿಯ ಸೌತಿಕೆರೆಯಲ್ಲಿ ಮುಚ್ಚಲ್ಪಟ್ಟಿರುವ ಸರ್ಕಾರಿ ಶಾಲೆಯ ಆವರಣದಲ್ಲಿ ತಾತ್ಕಾಲಿಕವಾಗಿ ಟೆಂಟ್‌ ನಿರ್ಮಿಸಿಕೊಂಡು ವಾಸಿಸಲು ಗ್ರಾಮಸ್ಥರು ಒಪ್ಪಿದರು. ಈಗಾಗಲೇ ಪೊಲೀಸ್‌ ಇಲಾಖೆ, ತಹಶೀಲ್ದಾರ್‌ ಹಾಗೂ ಕಾರ್ಯನಿರ್ವಾಹಕ ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿದ್ದಾರೆ. ಅದರಂತೆ ಶಾಲಾ ಆವರಣ ಯಾವುದೇ ಕಾರಣಕ್ಕೂ ಹಾನಿ ಮಾಡಬಾರದು.

ಸ್ವತ್ಛತೆ ಕಾಪಾಡಿಕೊಳ್ಳಬೇಕು ಎಂಬ ಷರತ್ತಿನೊಂದಿಗೆ ಸ್ಥಳಾವಕಾಶವನ್ನು ಕಲ್ಪಿಸಿಕೊಡಲು ತೀರ್ಮಾನಿಸಲಾಯಿತು.
ಹಾವುಗೊಲ್ಲ ಕುಟುಂಬದ ಸದಸ್ಯರಿಂದ ಯಾವುದೇ ಅಹಿತಕರ ಘಟನೆಗಳಾಗದಂತೆ ಮುನ್ನೆಚ್ಚರಿಕೆ ನೀಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು.

ಊರು ಬಿಟ್ಟು ಗುಳೇ ಹೋದ ಹಾವುಗೊಲ್ಲ ಕುಟುಂಬಗಳು ಸದ್ಯಕ್ಕೆ ಕೊಪ್ಪ, ತೀರ್ಥಹಳ್ಳಿ ತಾಲೂಕಿನ ವಿವಿಧ ಕೆಲ ಪ್ರದೇಶಗಳಲ್ಲಿ ವಾಸಿಸುತ್ತಿರುವುದು ತಿಳಿದು ಬಂದಿದೆ. ಈಗಾಗಲೇ ಎನ್‌. ಆರ್‌.ಪುರ ತಾಲೂಕಿನ ನಾಗಲಾಪುರ ಗ್ರಾ.ಪಂ. ವ್ಯಾಪ್ತಿಯ ಸ.ನಂ.179ರಲ್ಲಿ ನಿವೇಶನಕ್ಕೆ ಜಾಗ ಒದಗಿಸುವ ಬಗ್ಗೆ ಪ್ರಸ್ತಾವನೆಯನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಾಗಿದೆ. 

ಉಪಾಧ್ಯಕ್ಷೆ ಪದ್ಮನಿ ಪ್ರಭಾಕರ್‌, ಸದಸ್ಯರಾದ ಎ.ಎಲ್‌.ಮಹೇಶ್‌, ಕೆ.ಎನ್‌ .ನಾಗರಾಜ್‌, ಸುಲೈಮಾನ್‌, ವಿಜು, ವಿಂದ್ಯಾಹೆಗ್ಡೆ, ಸುಧಾ, ಶಾರದಾ, ಪಿಡಿಒ ನಾಗೇಶ್‌, ಗ್ರಾಮದ ಮುಖಂಡರಾದ ಎಚ್‌.ಕೆ.ಚಂದ್ರೇಗೌಡ, ವಿನೋದಾ, ಮಂಜುನಾಥ್‌ ಇತರರು ಇದ್ದರು.


Trending videos

Back to Top