CONNECT WITH US  

ಡಿ.ದೇವರಾಜ ಅರಸು ಅಪರೂಪದ ರಾಜಕಾರಣಿ

ಕಡೂರು: ನಾಡು ಕಂಡ ಅಪರೂಪದ ರಾಜಕಾರಣಿ ದಿ| ಡಿ.ದೇವರಾಜ ಅರಸು ಎಂದು ಶಾಸಕ ಬೆಳ್ಳಿಪ್ರಕಾಶ್‌ ತಿಳಿಸಿದರು. ತಾಲೂಕು ಪಂಚಾಯತ್‌ ಸಭಾಂಗಣದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ತಾಲೂಕು ಆಡಳಿತ
ಸಹಯೋಗದಲ್ಲಿ ನಡೆದ ಡಿ.ದೇವರಾಜ ಅರಸು ಅವರ 103 ನೇ ಜಯಂತಿ ಹಾಗೂ ಶ್ರೀಕೃಷ್ಣ ಜಯಂತಿ ಕಾರ್ಯಕ್ರಮದ
ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಅರಸು ರವರು ಬಲಾಡ್ಯ (ಲಿಂಗಾಯತ, ಒಕ್ಕಲಿಗ) ಜಾತಿಗಳ ಮಧ್ಯೆ ಮುಖ್ಯಮಂತ್ರಿಯಾಗಿ ಹೊರಹೊಮ್ಮಿದ
 ಧೀಮಂತ ನಾಯಕರಾಗಿದ್ದರು. ಬಲಿಷ್ಟ ಜಾತಿ ವ್ಯವಸ್ಥೆಯಡಿ ಕೇಂದ್ರೀಕೃತವಾಗಿದ್ದ ರಾಜಕೀಯ ವ್ಯವಸ್ಥೆಗೆ ಪರ್ಯಾಯವಾಗಿ ಹಿಂದುಳಿದ ಸಣ್ಣ ಸಮುದಾಯಗಳನ್ನು ಕ್ರೋಢೀಕರಿಸಿ ದೊಡ್ಡ ಶಕ್ತಿಯಾಗಿ ಬೆಳೆದ ಮಹಾನ್‌ ಚೇತನ ದೇವರಾಜು ಅರಸು ಎಂದು ಹೇಳಿದರು.

ಜನಪರವಾದ ಕಾನೂನುಗಳನ್ನು ತರಲು ಅರಸು ಹಿಂದೆ ಮುಂದೆ ನೋಡುತ್ತಿರಲಿಲ್ಲ. ಭೂ ಸುಧಾರಣೆ, ಮಲಹೊರುವ
ಹಾಗೂ ಜೀತಪದ್ದತಿ ನಿರ್ಮೂಲನೆ, ಇಂದಿರಾ ಗಾಂಧಿಯವರ 20 ಅಂಶದ ಕಾರ್ಯಕ್ರಮಗಳನ್ನು ರಾಜ್ಯದಲ್ಲಿ
ಅನುಷ್ಠಾನಗೊಳಿಸಿದ ಹಿರಿಮೆ ಅರಸುರವರದ್ದು ಎಂದು ಸ್ಮರಿಸಿದರು.

 ಇಂತಹ ಮಹಾನ್‌ ವ್ಯಕ್ತಿಗಳ ಜಯಂತಿಗೆ ತಾಲೂಕಿನ ಎಲ್ಲಾ ಇಲಾಖೆಯ ಅಧಿಕಾರಿಗಳು ಹಾಗೂ ಅವರ ಯೋಜನೆಗಳ
ಫಲಾನುಭವಿಗಳೆಲ್ಲರೂ ಬರಬೇಕಾಗಿತ್ತು. ಯಾವ ಇಲಾಖೆಯ ಅಧಿಕಾರಿಗಳು ಗೈರು ಹಾಜರಾಗಿದ್ದಾರೆ. ಅಂತವರಿಗೆ ಕೂಡಲೆ ನೋಟಿಸ್‌ ನೀಡಿ ಎಂದು ತಹಶೀಲ್ದಾರ್‌ಗೆ ಸೂಚನೆ ನೀಡಿದರು.

ಜಿಪಂ ಸದಸ್ಯ ಮಹೇಶ್‌ ಒಡೆಯರ್‌ ಮಾತನಾಡಿ, 70 ದಶಕದಲ್ಲಿ ಹಿಂದುಳಿದ ವರ್ಗದಿಂದ ಮುಖ್ಯಮಂತ್ರಿಗಳಾಗಿ ಆಯ್ಕೆಯಾದ ಮೊದಲಿಗರು ದಿ| ಡಿ.ದೇವರಾಜು ಅರಸು. ಅರಸುವರು ಬಡವರಿಗೆ ಭೂ ಸುಧಾರಣಾ ಕಾಯ್ದೆ ಜಾರಿಗೆ
ತಂದು ಸಾವಿರಾರು ಕುಟುಂಬಗಳಿಗೆ ಜೀವದಾನ ನೀಡಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದರು.

ಜಿ.ಪಂ.ಸದಸ್ಯ ಶರತ್‌ ಕೃಷ್ಣಮೂರ್ತಿ ಮಾತನಾಡಿದರು. ನಿವೃತ್ತ ಬಿಸಿಎಂ ಅಧಿಕಾರಿ ಕಾಶಿನಾಥ್‌ ಅರಸುರವರನ್ನು ಕುರಿತು ಉಪನ್ಯಾಸ ನೀಡಿದರು. ಕಾರ್ಯಕ್ರಮವನ್ನು ಬೀರೂರು ಪುರಸಭೆ ಅಧ್ಯಕ್ಷೆ ಸವಿತಾ ರಮೇಶ್‌ ಉದ್ಘಾಟಿಸಿದರು. ತಹಶೀಲ್ದಾರ್‌ ಭಾಗ್ಯ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.

ತಾಪಂ ಅಧ್ಯಕ್ಷೆ ರೇಣುಕಾ ಉಮೇಶ್‌, ಉಪಾಧಕ್ಷ ಚಂದ್ರಪ್ಪ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿಸ್ತರಣಾಧಿಕಾರಿ ನಾಗವಲ್ಲಿ, ಶಾಲಾ ಮಕ್ಕಳು ಇದ್ದರು.


Trending videos

Back to Top