CONNECT WITH US  

ಅಡುಗೆಮನೆಯಲ್ಲಿ ಹೊಸ ತಂತ್ರಜ್ಞಾನ ಅಳವಡಿಕೆ ಅಗತ್ಯ

ನಾಯಕನಹಟ್ಟಿ: ಅಡುಗೆ ಮನೆಗಳಲ್ಲಿ  ಹೊಸ ತಂತ್ರಜ್ಞಾನ ಅಳವಡಿಸಿಕೊಳ್ಳಬೇಕು ಎಂದು ವಿಧಾನ ಪರಿಷತ್‌ ಸದಸ್ಯೆ ಜಯಮ್ಮ ಬಾಲರಾಜ್‌ ಹೇಳಿದರು.

ಇಲ್ಲಿನ ಹೊರಮಠ ಸಮುದಾಯ ಭವನದಲ್ಲಿ ಏರ್ಪಡಿಸಿದ್ದ ಉಜ್ವಲ ಯೋಜನೆಯ ಫಲಾನುಭವಿಗಳಿಗೆ ಗ್ಯಾಸ್‌
ಸಿಲಿಂಡರ್‌ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಅಡುಗೆ ಮನೆಯಲ್ಲಿ ಹೊಸ ಸಂಶೋಧನೆಗಳು ನಡೆಯಬೇಕಾಗಿದೆ. ಕಾಲ ಬದಲಾವಣೆಯಾದಂತೆ ಅಡುಗೆ ಮನೆಯೂ ಬದಲಾಗಬೇಕಾಗಿದೆ. ಕೆಲವು ದಶಕಗಳ ಹಿಂದೆ ಮಹಿಳೆಯರು ಅಡುಗೆ ಮನೆಯಲ್ಲಿ ಸೌದೆ ಬಳಸಿ ಅಡುಗೆ ಮಾಡುತ್ತಿದ್ದರು. ಹೀಗಾಗಿ ಅವರ ಕಣ್ಣು ಹಾಗೂ ಆರೋಗ್ಯ ಎರಡೂ ಬೇಗ ಹಾಳಾಗುತ್ತಿದ್ದವು. ಜತೆಗೆ ಮಾಲಿನ್ಯವೂ ಹೆಚ್ಚಾಗುತ್ತಿತ್ತು. ಆದರೆ ಇದೀಗ ಸರಕಾರ ವತಿಯಿಂದ ಬಡವರಿಗೆ ಉಚಿತವಾಗಿ ಗ್ಯಾಸ್‌ ಸಿಲಿಂಡರ್‌ ವಿತರಣೆ ಮಾಡುತ್ತಿರುವುದು ಉತ್ತಮ ಕ್ರಮವಾಗಿದೆ. ಇದರಿಂದ ಬಡ 
ಮಹಿಳೆಯರಿಗೆ ಇದು ಅನುಕೂಲವಾಗಲಿದೆ ಎಂದರು.

ಮೊಳಕಾಲ್ಮೂರು ಶಾಸಕ ಎಸ್‌. ತಿಪ್ಪೇಸ್ವಾಮಿ ಮಾತನಾಡಿ, ಕೇಂದ್ರ ಸರ್ಕಾರ ಮಹಿಳೆಯರ ಬಗ್ಗೆ ವಿಶೇಷ ಕಾಳಜಿ ಹೊಂದಿದೆ. ಈಗಾಗಲೇ ಎಲ್ಲೆಡೆ ಅರಣ್ಯ ನಾಶವಾಗಿದೆ. ಹೀಗಾಗಿ ಸೌದೆ ದೊರೆಯುವುದು ಕಷ್ಟವಾಗಿದೆ. ಇಂಥಹ 
ಸಂದರ್ಭದಲ್ಲಿ ಕೇಂದ್ರ ಸರಕಾರ ಬಡ  ಜನರಿಗೆ ಉಚಿತವಾಗಿ ಸಿಲಿಂಡರ್‌ ಹಾಗೂ ಗ್ಯಾಸ್‌ ವಿತರಿಸುತ್ತಿರುವುದು ಉತ್ತಮವಾದ ಸಂಗತಿಯಾಗಿದೆ. ಶ್ರೀಮಂತರು ತಮ್ಮ ಸಬ್ಸಿಡಿಯನ್ನು ಕೈಬಿಡುವಂತೆ ಪ್ರಧಾನಿ ಮನವಿ
ಮಾಡಿದ್ದರು. ಇದಕ್ಕೆ ಲಕ್ಷಾಂತರ ಜನರು ಸ್ಪಂದಿಸಿದ್ದರು. ಆ ರಿಯಾಯತಿಯನ್ನು ಬಡ ಜನರಿಗೆ ತಲುಪಿಸಲಾಗುತ್ತಿದೆ. ಕೇಂದ್ರ ಸರ್ಕಾರ ಹಲವಾರು ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ. ಚಹಾ ಮಾರುತ್ತಿದ್ದ ವ್ಯಕ್ತಿ ಪ್ರಧಾನಿಯಾಗಿದ್ದಾರೆ. ಬದುಕಿನ ಎಲ್ಲ ಹಂತಗಳ ಪರಿಚಯ ಅವರಿಗಿದೆ. ಹೀಗಾಗಿ ಅವರ ನೇತƒತ್ವದಲ್ಲಿ ಸರ್ಕಾರ ಉತ್ತಮ ಕಾರ್ಯಕ್ರಮಗಳನ್ನು ರೂಪಿಸಿದೆ ಎಂದರು.

ಚಳ್ಳಕೆರೆ ಶಾಸಕ ಟಿ. ರಘುಮೂರ್ತಿ ಮಾತನಾಡಿ, 2011ರಲ್ಲಿ ಆರ್ಥಿಕ, ಶೈಕ್ಷಣಿಕ ಸರ್ವೆ ಕಾರ್ಯದಲ್ಲಿ ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ. ಪ್ರತಿ ಕುಟುಂಬದಲ್ಲಿ ಒಬ್ಬರನ್ನು ಆಯ್ಕೆ ಮಾಡಲಾಗಿದೆ. ಚಳ್ಳಕೆರೆ 
ತಾಲೂಕಿನಲ್ಲಿ 1500, ಮೊಳಕಾಲ್ಮೂರು ತಾಲೂಕಿನಲ್ಲಿ 856 ಫಲಾನುಭವಿಗಳನ್ನು ಗುರುತಿಸಲಾಗಿದೆ. ಅನಿಲ ಭಾಗ್ಯ
ಯೋಜನೆಯಲ್ಲಿ ಸರ್ಕಾರ ಮುಂದಿನ ದಿನಗಳಲ್ಲಿ ಹೆಚ್ಚಿನ ಜನರಿಗೆ ಸೌಲಭ್ಯವನ್ನು ವಿಸ್ತರಿಸಲಿದೆ. ಮೊಳಕಾಲ್ಮೂರು ಹಾಗೂ ಚಳ್ಳಕೆರೆ ತಾಲೂಕುಗಳು ಹಿಂದುಳಿದಿದ್ದು, ಎಸ್ಸಿ ಹಾಗೂ ಎಸ್ಟಿ ಜನಾಂಗ ಹೆಚ್ಚಾಗಿದೆ. ಹೀಗಾಗಿ ಪೋಷಕರು ತಮ್ಮ ಮಕ್ಕಳಿಗೆ ಶಿಕ್ಷಣ ನೀಡಲು ಹೆಚ್ಚಿನ ಗಮನ ಹರಿಸಬೇಕು ಎಂದು ಹೇಳಿದರು. 

ಐಒಸಿ ಏರಿಯಾ ಸೇಲ್ಸ್‌ ಮ್ಯಾನೇಜರ್‌, ಜೋಸ್ಪಿನ್‌ ಮಾರ್ಗರೇಟ್‌, ಗ್ಯಾಸ್‌ ಏಜೆನ್ಸಿಗಳ ಮಾಲೀಕರಾದ ಶಂಕರಲಿಂಗಯ್ಯ, ರವಿ, ವರಲಕ್ಷ್ಮಿ, ಬಿಜೆಪಿ ಮಂಡಲಾ ಧ್ಯಕ್ಷ ಎಂ.ವೈ.ಟಿ. ಸ್ವಾಮಿ, ಚಳ್ಳಕೆರೆ ತಾಪಂ ಅಧ್ಯಕ್ಷ ವೀರೇಶ್‌, ಪಪಂ ಅಧ್ಯಕ್ಷೆ ನೀಲಮ್ಮ, ಸ್ಥಾಯಿ ಸಮಿತಿ ಅಧ್ಯಕ್ಷ ಎನ್‌.ಮಹಾಂತೇಶ್‌, ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷ 
ಸೈಯ್ಯದ್‌ ಅನ್ವರ್‌, ಶ್ರೀಶೈಲ, ಧನಲಕ್ಷ್ಮಿ, ವಿಜಯ ಮಹಾಂತೇಶ್ವರ, ಕುಬೇರ, ಕೈಲಾಸ್‌ ಮತ್ತಿತರರು ಇದ್ದರು.

Trending videos

Back to Top