CONNECT WITH US  

ವಿದ್ಯಾರ್ಥಿನಿಯರಿಗೆ ಸ್ಮಾರ್ಟ್‌ಗರ್ಲ್ ಪ್ರೋಗ್ರಾಂ ಆರಂಭ

ಚಿತ್ರದುರ್ಗ: ನಗರದ ರೋಟರಿ ಬಾಲಭವನದಲ್ಲಿ ರೋಟರಿ ಕ್ಲಬ್‌ ಚಿತ್ರದುರ್ಗ, ಭಾರತೀಯ ಜೈನ್‌ ಸಂಘಟನೆ ವತಿಯಿಂದ ರೋಟರಿ ಶಾಲೆ ಹಾಗೂ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿದ್ಯಾರ್ಥಿನಿಯರಿಗೆ ಶನಿವಾರದಿಂದ ಎರಡು ದಿನಗಳ ಸ್ಮಾರ್ಟ್‌ ಗರ್ಲ್ ಪ್ರೋಗ್ರಾಂ ಶಿಬಿರವನ್ನು ಆರಂಭಿಸಲಾಯಿತು. 

ವಿದ್ಯಾರ್ಥಿನಿಯರು ಸ್ಮಾರ್ಟ್‌ ಗರ್ಲ್ ಆಗಲು ತರಬೇತಿ ನೀಡುವುದಕ್ಕಾಗಿ ಗುಜರಾತ್‌ನ ರಾಜ್‌ಕೋಟ್‌ನಿಂದ ಆಗಮಿಸಿರುವ ಅಸ್ಮಿತ್‌ ದೇಸಾಯಿ ಶಿಬಿರ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಹದಿಹರೆಯದ
ವಯಸ್ಸಿನಲ್ಲಿ ಬಾಲಕಿಯರು ಯಾವುದೇ ಕಾರಣಕ್ಕೂ ತಪ್ಪುದಾರಿಗೆ ಹೋಗಬಾರದು. ಆತ್ಮವಿಶ್ವಾಸ, ನಂಬಿಕೆ, ಇಟ್ಟುಕೊಂಡು ಸಮಾಜದಲ್ಲಿ ಎದುರಾಗುವ ಸಮಸ್ಯೆಗಳನ್ನು ಯಾವ ರೀತಿ ನಿಭಾಯಿಸಬೇಕು ಎನ್ನುವುದನ್ನು ಎರಡು ದಿನಗಳ ತರಬೇತಿಯಲ್ಲಿ ತಿಳಿಸಿಕೊಡಲಾಗುವುದು. 

ಇದರಿಂದ ನಿಮ್ಮ ಜೀವನದಲ್ಲಿ ಸಾಕಷ್ಟು ಪ್ರಯೋಜನವಾಗಲಿದೆ ಎಂದು ಹೇಳಿದರು. ಐಪಿಡಿಜಿ ಮಧುಪ್ರಸಾದ್‌ ಮಾತನಾಡಿ, ಪ್ರೌಢಶಾಲೆ ಮತ್ತು ಪಿ.ಯು.ಶಿಕ್ಷಣದಲ್ಲಿ ಬಾಲಕಿಯರ ಜೀವನದಲ್ಲಿ ಅನೇಕ ಸವಾಲುಗಳು ಎದುರಾಗುವುದು ಸಹಜ. ಹಾಗಂತ ಹೆದರಿ ಮನೆಯಲ್ಲಿ ಕೂರಬಾರದು. 

ಹೆಣ್ಣು ಅಬಲೆಯಲ್ಲ, ಸಬಲೆ ಎನ್ನುವುದು ಕೇವಲ ಭಾಷಣದಲ್ಲಿದ್ದರೆ ಯಾವ ಪ್ರಯೋಜನವೂ ಆಗದು. ನಿಜ
ಜೀವನದ ಆಚರಣೆಯಲ್ಲಿರಬೇಕು. ದೂರದ ಗುಜರಾತ್‌ನಿಂದ ತರಬೇತಿ ನೀಡಲು ಆಗಮಿಸಿರುವ ಅಸ್ಮಿತ ದೇಸಾಯಿ ಅವರು ಶಿಬಿರದಲ್ಲಿ ತಿಳಿಸುವ ಪ್ರಮುಖ ವಿಚಾರಗಳನ್ನು ಶ್ರದ್ಧೆಯಿಂದ ಆಲಿಸಬೇಕು. ಅದು ಮುಂದೊಂದು ದಿನ ನಿಮ್ಮ ಜೀವನಕ್ಕೆ ಉಪಯೋಗವಾಗಲಿದೆ ಎಂದು ತಿಳಿಸಿದರು.

ರೋಟರಿ ಕ್ಲಬ್‌ ಚಿತ್ರದುರ್ಗ ಅಧ್ಯಕ್ಷೆ ಜಯಶ್ರೀ ಷಾ, ಇಮಿಡಿಯಟ್‌ ಫಾಸ್ಟ್‌ ಪ್ರಸಿಡೆಂಟ್‌ ವಿಶ್ವನಾಥ್‌, ರೋಟರಿ
ವಿದ್ಯಾಲಯದ ಕಾರ್ಯದರ್ಶಿ ವೈ. ಚಂದ್ರಶೇಖರಯ್ಯ, ವಿಕ್ರಾಂತ್‌ ಜೈನ್‌, ಶಿವರಾಂ, ಜವೇರಿಲಾಲ್‌, ಇನ್ನರ್‌
ವ್ಹೀಲ್‌ ಕ್ಲಬ್‌ ಅಧ್ಯಕ್ಷೆ ಶೈಲಾ ವಿಶ್ವನಾಥ್‌ ಇದ್ದರು. 

Trending videos

Back to Top