CONNECT WITH US  

ಪೋಕ್ರಾನ್‌ ಅಣು ಕೇಂದ್ರ ಸ್ಥಾಪಿಸಿದ ನಾಯಕ ಅಟಲ್‌

ಚಳ್ಳಕೆರೆ: ಗುಜರಾತಿನಲ್ಲಿ ಪೋಕ್ರಾನ್‌ ಅಣು ಕೇಂದ್ರ ಸ್ಥಾಪಿಸಿ, ವಿವಿಧ ದೇಶಗಳ ದಿಗ್ಬಂಧನ ಹೇರಿಕೆ ಒತ್ತಡ ಮಧ್ಯೆಯೂ ಪರಮಾಣು ಸ್ಫೋಟಿಸಿ ಶತ್ರು ರಾಷ್ಟ್ರಗಳಿಗೆ ಚುರುಕು ಮುಟ್ಟಿಸಿದ ಧೀಮಂತ ನಾಯಕ ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಎಂದು ಬಿಜೆಜಪಿ ರಾಜ್ಯ ಸಹಕಾರಿ ಕ್ಷೇತ್ರದ ಹಿರಿಯ ದುರೀಣ ಸಿ.ಬಿ. ಆದಿಭಾಸ್ಕರ ಶೆಟ್ಟಿ ಹೇಳಿದರು.

ಇಲ್ಲಿನ ಬಿಜೆಪಿ ಕಾರ್ಯಾಲಯದಲ್ಲಿ ಪಕ್ಷ ಆಯೋಜಿಸಿದ್ದ ಮಾಜಿ ಪ್ರಧಾನಿ ಆಟಲ್‌ ಬಿಹಾರಿ ವಾಜಪೇಯಿ ಸಂತಾಪ ಸಭೆಯಲ್ಲಿ ಅವರು ಮಾತನಾಡಿದರು.
 
ರಾಷ್ಟ್ರದ ರಾಜಕೀಯ ಮೌಲ್ಯಗಳಿಗೆ ವಿಶೇಷ ಗೌರವ ಹಾಗೂ ಬೆಲೆ ತಂದುಕೊಟ್ಟ ನಾಯಕ ಅಟಲ್‌ ಬಿಹಾರಿ ವಾಜಪೇಯಿ. ಮೂರು ಬಾರಿ ರಾಷ್ಟ್ರದ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಪದೇ ಪದೇ ರಾಷ್ಟ್ರದೊಂದಿಗೆ ಕ್ಯಾತೆ ತೆಗೆಯುತ್ತಿದ್ದ ಪಾಕಿಸ್ತಾನಕ್ಕೂ ಸಹ ಕಾರ್ಗಿಲ್‌ ಯುದ್ಧದ ಮೂಲಕ ಉತ್ತರ ನೀಡಿದವರು. ಇಂತಹ ಮಹಾನ್‌ ಶಕ್ತಿ ನಾಯಕ ದೂರವೃಷ್ಟಿವುಳ್ಳ ಜನನಾಯಕ ಇಂದು ನಮ್ಮಿಂದ ದೂರವಾಗಿದ್ದಾರೆ. ಅವರ ನಿಧನ ವಿಶ್ವಕ್ಕೆ ತುಂಬಲಾರದ ನಷ್ಟ ಎಂದರು.

ಭಾರತೀಯ ಜನತಾ ಪಕ್ಷವನ್ನು ಬೇರು ಮಟ್ಟದಿಂದ ಸಂಘಟಿಸಿ ಅಧಿಕಾರ ಪಡೆಯುವ ತನಕ ಪರಿಶ್ರಮ ವಹಿಸಿವರು. ಅಟಲ್‌ ಬಿಹಾರಿ ವಾಜಪೇಯಿ ಅಂತಹ ಸರ್ವಶ್ರೇಷ್ಠ ರಾಜಕಾರಣಿ ಸಿಗುವುದೇ ವಿರಳ. ಕೇವಲ ಭಾರತೀಯ ಜನತಾ ಪಕ್ಷವಲ್ಲದೆ ವಿಶ್ವದ ಎಲ್ಲಾ ಪಕ್ಷಗಳ ನಾಯಕರ ವಿಶ್ವಾಸವನ್ನು ವಾಜಪೇಯಿ ಗಳಿಸಿದ್ದರು ಎಂದು ಹೇಳಿದರು. 

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜೆ.ಪಿ. ಜಯಪಾಲಯ್ಯ ಮಾತನಾಡಿ, ಇಂದು ರಾಷ್ಟ್ರದಲ್ಲಿ ಪ್ರಧಾನ ಮಂತ್ರಿ ನರೇಂದ್ರಮೋದಿ ಉತ್ತಮ ಆಡಳಿತ ನೀಡುತ್ತಿದ್ದರೆ ಅದಕ್ಕೆ ಮೂಲಪ್ರೇರಣೆ ಅಟಲ್‌ ಬಿಹಾರಿ ವಾಜಪೇಯಿ. ನರೇಂದ್ರ ಮೋದಿ ಬಿಜೆಪಿ ರಾಷ್ಟ್ರೀಯ ಯುವ ಮೋರ್ಚಾದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಅವರನ್ನು ಗುಜರಾತಿಗೆ ಕಳುಹಿಸಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುವಂತೆ ಮಾಡಿದವರು ರಾಷ್ಟ್ರ ರಾಜಕಾರಣದ ಭೀಷ್ಮ ಅಟಲ್‌ ಬಿಹಾರಿ ವಾಜಪೇಯಿ ಎಂದರು.

ಅಧ್ಯಕ್ಷತೆ ವಹಿಸಿದ್ದ ಮಂಡಲಾಧ್ಯಕ್ಷ ಬಿ.ವಿ. ಸಿರಿಯಣ್ಣ ಮಾತನಾಡಿ, ಇಂದು ವಿಶ್ವಕ್ಕೆ ಅತ್ಯಂತ ದುಖಕರ ದಿನವಾಗಿದೆ. ರಾಷ್ಟ್ರದಲ್ಲಿ ವಿಕಾಸದ ಬೆಳಕನ್ನು ನೀಡಿದವರೇ ಅಟಲ್‌ಜೀಯವರು. ಇಂದು ಬಿಜೆಪಿ ಅತಿಶ್ರೇಷ್ಠ ಮಟ್ಟದ ನಾಯಕರನ್ನು ಹೊಂದಿದೆ ಎಂದರೆ ಅದಕ್ಕೆ ಮೂಲ ಕಾರಣ ವಾಜಿಪೇಯಿ ಎಂದರು. 

ಜಿಲ್ಲಾ ಉಪಾಧ್ಯಕ್ಷ ಬಾಳೆಮಂಡಿ ರಾಮದಾಸ್‌, ಬಿ.ಎಸ್‌. ಶಿವಪುತ್ರಪ್ಪ, ನಗರಸಭಾ ಸದಸ್ಯ ಎಂ. ಶಿವಮೂರ್ತಿ, ಡಿ.ಎಂ. ತಿಪ್ಪೇಸ್ವಾಮಿ, ಮಂಜುನಾಥ, ನಾಗೇಶ್‌ ನಾಯಕ, ಕರೀಕೆರೆ ತಿಪ್ಪೇಸ್ವಾಮಿ, ವೆಂಕಟೇಶ್‌, ಹಟ್ಟಿರುದ್ರಪ್ಪ, ಬೋರನಾಯಕ,
ಪ್ರೊ| ದೇವೀರಪ್ಪ, ದಿನೇಶ್‌ರೆಡ್ಡಿ, ಜೆಎಂಸಿ ವೀರೇಶ್‌, ಲಕ್ಷ ¾ಣ್‌, ವೆಂಕಟೇಶ್‌ ಇತರರು ಇದ್ದರು.  

Trending videos

Back to Top