CONNECT WITH US  

ಜಿಲ್ಲಾದ್ಯಂತ ವರಮಹಾಲಕ್ಷ್ಮೀ ಸಂಭ್ರಮ

ಚಿತ್ರದುರ್ಗ: ನಗರದ ವಿವಿಧ ದೇವತೆಗಳಿಗೆ ವರಮಹಾಲಕ್ಷ್ಮೀ ಹಬ್ಬದ ಅಂಗವಾಗಿ ವಿಶೇಷ ಪೂಜೆ ನಡೆಯಿತು. ನಗರ ಪೊಲೀಸ್‌ ಠಾಣೆ ಆವರಣದಲ್ಲಿರುವ ಕಣಿವೆ ಮಾರಮ್ಮ ಹಾಗೂ ಜೋಗಿಮಟ್ಟಿ ರಸ್ತೆಯಲ್ಲಿರುವ ತ್ರಿಪುರ ಸುಂದರಿ ತಿಪ್ಪಿನಘಟ್ಟಮ್ಮನನ್ನು ಕಣ್ಮನ ಸೆಳೆಯುವಂತೆ ಸಿಂಗರಿಸಲಾಗಿತ್ತು. ದೇವಸ್ಥಾನದ ಮುಂಭಾಗ ಬಾಳೆಕಂದು ಹಾಗೂ ಮಾವಿನ ಎಲೆಗಳನ್ನು ಕಟ್ಟಲಾಗಿತ್ತು.

ಹೊಳಲ್ಕೆರೆ ರಸ್ತೆಯ ಬರಗೇರಮ್ಮನನ್ನು ಬರೀ ಆಭರಣಗಳಿಂದ ಕಂಗೊಳಿಸುವಂತೆ ಅಲಂಕರಿಸಲಾಗಿತ್ತು. ಬೆಳಗಿನಿಂದ ಸಂಜೆಯತನಕ ಸಾವಿರಾರು ಭಕ್ತರು ಆಗಮಿಸಿ ಅಮ್ಮನ ದರ್ಶನ ಪಡೆದರು. ವರಮಹಾಲಕ್ಷ್ಮೀ ಹಬ್ಬವನ್ನು ವಿಶೇಷವಾಗಿ ಮಹಿಳೆಯರೆ ಶ್ರದ್ಧಾಭಕ್ತಿಯಿಂದ ಆಚರಿಸುವುದರಿಂದ ಎಲ್ಲ ದೇವಸ್ಥಾನಗಳಲ್ಲಿಯೂ ಭಕ್ತರು ಸಾಲುಗಟ್ಟಿ ನಿಂತು ದೇವರ ದರ್ಶನ ಪಡೆದುಕೊಂಡರು.

ಕಣಿವೆಮಾರಮ್ಮ ದೇವಿಯನ್ನು ವಿವಿಧ ಹೂವು ಪತ್ರೆಗಳಿಂದ ಅಲಂಕರಿಸಲಾಗಿತ್ತು. ತಿಪ್ಪಿನಘಟ್ಟಮ್ಮ ದೇವಿಗೆ ಬೆಳ್ಳಿಯ ಆಭರಣಗಳಿಂದ ಸಿಂಗಾರ ಮಾಡಲಾಗಿತ್ತು. ಬರಗೇರಮ್ಮ ದೇವಿಗೆ ಚಿನ್ನದ ಆಭರಣ ಮತ್ತು ಹೊಂಬಾಳೆಗಳಿಂದ ಶೃಂಗರಿಸಲಾಗಿತ್ತು. 

ಕೆಳಗೋಟೆಯಲ್ಲಿರುವ ಕೊಲ್ಲಾಪುರದ ಲಕ್ಷ್ಮೀ, ಎಸ್‌.ಪಿ.ಕಚೇರಿ ರಸ್ತೆಯಲ್ಲಿರುವ ಅನ್ನಪೂರ್ಣೆಶ್ವರಿ ದೇವಸ್ಥಾನದಲ್ಲಿಯೂ ಅನ್ನಪೂರ್ಣೆàಶ್ವರಿ ದೇವಿಗೆ ಅದ್ದೂರಿಯಾಗಿ ಅಲಂಕರಿಸಿ ಪೂಜಿಸಲಾಯಿತು. ಎಲ್ಲೆಡೆ ಭಕ್ತರಿಗೆ ಪ್ರಸಾದ ವಿನಿಯೋಗಿಸಲಾಯಿತು. ಸ್ವಂತ ವಾಹನಗಳುಳ್ಳವರು ದೇವಸ್ಥಾನಗಳನ್ನು ಸುತ್ತು ಹಾಕುತ್ತಿದ್ದರೆ. ಇನ್ನು ಕೆಲವರು ಆಟೋಗಳನ್ನು ಬಾಡಿಗೆ ಪಡೆದುಕೊಂಡು ನಗರದ ಎಲ್ಲ ದೇವಸ್ಥಾನಗಳಿಗೂ ತೆರಳಿ ಪೂಜೆ ಸಲ್ಲಿಸಿದರು.

 ಬರಗೇರಮ್ಮ ದೇವಸ್ಥಾನದ ಆವರಣದಲ್ಲಿ ನೂರಾರು ಬೈಕ್‌, ಕಾರು, ಆಟೋಗಳು ನಿಂತಿದ್ದವು. ಕೆಲವರು ಗಂಟೆಗಟ್ಟಲೆ ಕಾದಿದ್ದು, ಭಕ್ತರ ದಟ್ಟಣೆ ಕಡಿಮೆಯಾದಾಗ ದೇವತೆಗಳ ದರ್ಶನ ಪಡೆದರು. 

ಇಂದು ಹೆಚ್ಚು ಓದಿದ್ದು

ಚಿಕ್ಕೋಡಿ: ಬಾವನ ಸೌದತ್ತಿಯಲ್ಲಿ ನಡೆದ ಮನೆ ವಾಸ್ತು ಶಾಂತಿ ಕಾರ್ಯಕ್ರಮದಲ್ಲಿ ವಿಧವೆಯರು ಗೃಹ ಪ್ರವೇಶ ಮಾಡಿದರು. ಈ ಸಂದರ್ಭದಲ್ಲಿ ಶಾಸಕ ಸತೀಶ ಜಾರಕಿಹೊಳಿ ಇದ್ದರು. 

Oct 20, 2018 04:43pm

Trending videos

Back to Top