CONNECT WITH US  

ಸೆ.1ರಿಂದ ಪೋಸ್ಟ್‌ ಪೇಮೆಂಟ್‌ ಬ್ಯಾಂಕ್‌ ಆರಂಭ

ಚಿತ್ರದುರ್ಗ: ಗ್ರಾಮೀಣ ಪ್ರದೇಶದ ಜನರು ಸರಳವಾಗಿ ಹಣಕಾಸು ಸೇವಾ ಸೌಲಭ್ಯ ಪಡೆಯಲು ಕೇಂದ್ರ ಸರ್ಕಾರ, ಇಂಡಿಯಾ ಪೋಸ್ಟ್‌ ಪೇಮೆಂಟ್‌ ಬ್ಯಾಂಕ್‌ ಸೇವೆಗೆ ಚಾಲನೆ ನೀಡಲಿದೆ. ಭಾರತೀಯ ಅಂಚೆ ಇಲಾಖೆ ವತಿಯಿಂದ ಸೆಪ್ಟಂಬರ್‌ 1 ರಂದು ಜಿಲ್ಲಾ ಕೇಂದ್ರದಲ್ಲಿ ಎರಡು ಮತ್ತು ತಾಲೂಕು ಕೇಂದ್ರದಲ್ಲಿ ಮೂರು ಪೋಸ್ಟ್‌ ಪೇಮೆಂಟ್‌ ಬ್ಯಾಂಕ್‌ ತೆರೆಯಲು ಉದ್ದೇಶಿಸಲಾಗಿದೆ. ಏಕಕಾಲದಲ್ಲಿ ಜಿಲ್ಲೆಯಲ್ಲಿ ಐದು ಅಂಚೆ ಬ್ಯಾಂಕ್‌ ತೆರೆಯಲಾಗುತ್ತಿದೆ.

ವರ್ಷಾಂತ್ಯದ ಹೊತ್ತಿಗೆ ಜಿಲ್ಲೆಯಲ್ಲಿನ ಎಲ್ಲ 463 ಅಂಚೆ ಕಚೇರಿಗಳ ಮೂಲಕ ಪೋಸ್ಟ್‌ ಪೇಮೆಂಟ್‌ ಬ್ಯಾಂಕ್‌ ಬ್ಯಾಂಕ್‌ ತೆರೆಯಲಾಗುತ್ತದೆ. ಗ್ರಾಮೀಣ ಜನರ ಮನೆಬಾಗಿಲಿಗೆ ಪೇಮೆಂಟ್ಸ್‌ ಬ್ಯಾಂಕ್‌ ಸೇವೆಯನ್ನು ಉಚಿತವಾಗಿ ಒದಗಿಸಲು ಅಂಚೆ ಇಲಾಖೆ ಕಾರ್ಯೋನ್ಮುಖವಾಗಿದೆ.

ಜಿಲ್ಲೆಯಲ್ಲಿ ಐದು ಬ್ಯಾಂಕ್‌ ತೆರೆಯಲಾಗುತ್ತಿದ್ದು ಆ ಪೈಕಿ ಚಿತ್ರದುರ್ಗದ ಮುಖ್ಯ ಅಂಚೆ ಕಚೇರಿಯಲ್ಲಿ ಒಂದು, ಸರಸ್ವತಿಪುರಂನ ಕಾಲೇಜು ರಸ್ತೆಯಲ್ಲಿ ಮತ್ತೂಂದು ತೆರೆಯಲಾಗುತ್ತದೆ. ಹಿರಿಯೂರು ಮುಖ್ಯ ಅಂಚೆ ಕಚೇರಿಯಲ್ಲಿ ಒಂದು, ಹಿರಿಯೂರು ತಾಲೂಕಿನ ಬಬ್ಬೂರು ಫಾರಂ ಮತ್ತು ಗೌಡನಹಳ್ಳಿಯಲ್ಲಿ ಎರಡು ಬ್ಯಾಂಕ್‌ ಶಾಖೆಗಳನ್ನು ಆರಂಭಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಇನ್ನುಳಿದಂತೆ ಜಿಲ್ಲೆಯಲ್ಲಿರುವ 362 ಅಂಚೆ ಕಚೇರಿಗಳಲ್ಲೂ ಡಿಸೆಂಬರ್‌ ಅಂತ್ಯದೊಳಗೆ ಅಂಚೆ ಬ್ಯಾಂಕ್‌ ಶಾಖೆಗಳನ್ನು ತೆರೆದು ಗ್ರಾಮೀಣ ಜನತೆಗೆ ಸೇವೆ ನೀಡಲಾಗುತ್ತದೆ.

ಏನಿದು ಪೋಸ್ಟ್‌ ಪೇಮೆಂಟ್‌ ಬ್ಯಾಂಕ್‌?: ಇಂಡಿಯಾ ಪೋಸ್ಟ್‌ ಪೇಮೆಂಟ್‌ ಬ್ಯಾಂಕ್‌ ತೆರೆದಲ್ಲಿ ಒಂದು ಲಕ್ಷ ರೂ.ವರೆಗೆ ಉಳಿತಾಯ ಖಾತೆಯಲ್ಲಿ ಬ್ಯಾಲೆನ್ಸ್‌ ಹೊಂದಲು ಅವಕಾಶವಿದೆ. ಇದರ ಜೊತೆಗೆ ಅಂಚೆ ಗ್ರಾಹಕರಿಗೆ ಡಿಜಿಟಲ್‌ ಪೇಮೆಂಟ್ಸ್‌ ಹಾಗೂ ರೆಮಿಟೆನ್ಸ್‌ ಸೇವಾ ಸೌಲಭ್ಯ ನೀಡಲಾಗುತ್ತದೆ. 

ಇಂಡಿಯಾ ಪೋಸ್ಟ್‌ ಪೇಮೆಂಟ್‌ ಬ್ಯಾಂಕ್‌ನಲ್ಲಿ ಗ್ರಾಹಕರು 25 ಸಾವಿರ ರೂ. ಠೇವಣಿ ಇಟ್ಟರೆ ಶೇ. 4 ರಷ್ಟು ಬಡ್ಡಿ, 25 ಸಾವಿರದಿಂದ 50 ಸಾವಿರ ರೂ. ಠೇವಣಿಗೆ ಶೇ.5 ಹಾಗೂ 50 ಸಾವಿರದಿಂದ ಒಂದು ಲಕ್ಷ ರೂ. ಠೇವಣಿ ಮೇಲೆ ಶೇ. 5.5 ರಷ್ಟು ಬಡ್ಡಿ ನೀಡುವ ವ್ಯವಸ್ಥೆ ಜಾರಿ ಮಾಡಲಾಗುತ್ತದೆ.
ಈ ಬ್ಯಾಂಕ್‌ನಲ್ಲಿ ಕರೆಂಟ್‌ ಅಕೌಂಟ್‌ ತೆರೆಯಲೂ ಅವಕಾಶವಿದೆ.

ಅಲ್ಲದೆ ಇನ್ಷೊರೆನ್ಸ್‌, ಮ್ಯೂಚುವಲ್‌ ಫಂಡ್‌, ಪೆನ್ಷನ್‌, ವಿದ್ಯುತ್‌, ಪೋನ್‌ ಬಿಲ್‌ ಪಾವತಿ, ಆರ್‌ ಟಿಜಿಎಸ್‌, ಎನ್‌ಇಎಫ್‌ಟಿ, ಐಎಂಪಿಎಸ್‌ ವ್ಯವಹಾರಕ್ಕೆ ಅವಕಾಶ ನೀಡಲಾಗಿದೆ. ಇದು ಯಾವುದೇ ಬ್ಯಾಂಕ್‌ ಖಾತೆಯಿಂದ ಹಣ ವರ್ಗಾವಣೆ ಮಾಡಲು ಮತ್ತು ಸ್ವೀಕರಿಸಲು ಅನುವು ಮಾಡಿಕೊಡಲಾಗುತ್ತದೆ.

ಕಾಗದ ರಹಿತ ವ್ಯವಹಾರ: ಪೋಸ್ಟ್‌ ಪೇಮೆಂಟ್‌ ಬ್ಯಾಂಕ್‌ನಲ್ಲಿ ಕಾಗದ ರಹಿತ ವ್ಯವಹಾರ ನಡೆಯಲಿದೆ. ಗ್ರಾಹಕರು ಖಾತೆ ತೆರೆಯಲು ಯಾವುದೇ ಕಾಗದಪತ್ರ ನೀಡುವ ಅಗತ್ಯವಿಲ್ಲ. ಕೇವಲ ಆಧಾರ್‌ ಸಂಖ್ಯೆ ಮತ್ತು ಮೊಬೈಲ್‌ ನಂಬರ್‌ ಹೇಳಿದರೆ ಸಾಕು. ಅರ್ಜಿಯನ್ನೂ ತುಂಬಬೇಕಿಲ್ಲ. ಖಾತೆ ತೆರೆದ ನಂತರ ಯಾವುದೇ ಫಾರಂಗಳನ್ನು ಭರ್ತಿ ಮಾಡಿ ವಹಿವಾಟು ಮಾಡುವಂತಿಲ್ಲ. ಇದೊಂದು ಕಾಗದ ರಹಿತ ಖಾತೆ ತೆರೆದು ವ್ಯವಹರಿಸುವ ಬ್ಯಾಂಕ್‌ ಆಗಿದೆ.

ಖಾತೆ ತೆರೆಯಲು ಕನಿಷ್ಠ ಮೊತ್ತ ಅಥವಾ ಠೇವಣಿ ಕಟ್ಟಬೇಕಿಲ್ಲ. ಶೂನ್ಯ ಮೊತ್ತದಲ್ಲಿ ಖಾತೆ ತೆರೆಯಲಾಗುತ್ತದೆ. ಖಾತೆ ತೆರೆದ ನಂತರ ವ್ಯವಹಾರ ಮಾಡಲು ಯಾವುದೇ ಪಾಸ್‌ಬುಕ್‌ ಬೇಕಿಲ್ಲ. ವ್ಯವಹಾರ ವಿವರಗಳನ್ನು ಉಚಿತವಾಗಿ ಖಾತೆದಾರರಿಗೆ ನೀಡಲಾಗುತ್ತದೆ. ಪ್ರತಿ ವ್ಯವಹಾರಕ್ಕೂ ಎಸ್‌ಎಂಎಸ್‌ ಬರಲಿದ್ದು ವ್ಯವಹಾರ ಖಚಿತ ಮತ್ತು ಸುರಕ್ಷಿತವಾಗಿರುತ್ತದೆ.

ಇಂಡಿಯಾ ಪೋಸ್ಟ್‌ ಪೇಮೆಂಟ್‌ ಬ್ಯಾಂಕ್‌ನಲ್ಲಿ ಖಾತೆ ಹೊಂದಿದರೆ ಗ್ರಾಮೀಣ ಪ್ರದೇಶದ ಜನರು ಮೊಬೈಲ್‌ ಬ್ಯಾಂಕ್‌ ಮತ್ತು ಹಣದ ವರ್ಗಾವಣೆ ಸೇರಿದಂತೆ ಹಣಕಾಸಿನ ಸೇವೆಗಳನ್ನು ಅಪ್ಲಿಕೇಶನ್‌ ಸಹಾಯದಿಂದ ಅಥವಾ ಅಂಚೆ ಕಚೇರಿಗಳಿಗೆ ಭೇಟಿ  ನೀಡುವ ಮೂಲಕ ಪಡೆಯಬಹುದು. ಖಾತೆ ತೆರೆದ ನಂತರ ಕ್ಯೂಆರ್‌ ಕಾರ್ಡ್‌ ನೀಡಲಾಗುತ್ತದೆ. ಈ ಕಾರ್ಡ್‌ನಲ್ಲಿ ಎಲ್ಲ ಮಾಹಿತಿ ಇರುತ್ತದೆ. ಒಂದು ವೇಳೆ ಇದು ಕಳೆದು ಹೋದರೂ ಚಿಂತೆಯಿಲ್ಲ, ಆಧಾರ್‌ ಅಥವಾ ಮೊಬೈಲ್‌ ಸಂಖ್ಯೆಯಿಂದ ಎಲ್ಲ ರೀತಿಯ ವಹಿವಾಟು ಮಾಡಬಹುದಾಗಿದೆ. ಒಟ್ಟಿನಲ್ಲಿ ಗ್ರಾಹಕ ಸ್ನೇಹಿ ಯೋಜನೆ ಇದಾಗಿದ್ದು, ಎಷ್ಟರ ಮಟ್ಟಿಗೆ ಪರಿಣಾಮಕಾರಿಯಾಗಿ ಜಾರಿಯಾಗುತ್ತದೆ ಎಂಬುದು ಕುತೂಹಲ ಮೂಡಿಸಿ¨

ಅಂಚೆ ಇಲಾಖೆಯ ಚಿತ್ರದುರ್ಗ ವಿಭಾಗದಲ್ಲಿ ಸೆ. 1 ರಂದು 10 ಅಂಚೆ ಬ್ಯಾಂಕ್‌ಗಳನ್ನು ತೆರೆಯಲಾಗುತ್ತದೆ. ಈ ಪೈಕಿ ಚಿತ್ರದುರ್ಗ ಮತ್ತು ದಾವಣಗೆರೆ ಜಿಲ್ಲೆಗಳಲ್ಲಿ ತಲಾ ಐದು ಬ್ಯಾಂಕ್‌ ಆರಂಭಿಸಲಾಗುತ್ತಿದ್ದು, ಡಿಸೆಂಬರ್‌ ಅಂತ್ಯದೊಳಗೆ ಎರಡು ಜಿಲ್ಲೆಗಳ ಎಲ್ಲಾ 463 ಅಂಚೆ ಕಚೇರಿಗಳಲ್ಲಿ ಬ್ಯಾಂಕ್‌
ಆರಂಭಿಸಲಾಗುತ್ತದೆ. 
 ಶಿವರಾಜ್‌ ಖಂಡಿಮಠ್, ಅಂಚೆ ಅಧಿಧೀಕ್ಷಕರು, ಚಿತ್ರದುರ್ಗ.

„ಹರಿಯಬ್ಬೆ ಹೆಂಜಾರಪ್ಪ

ಇಂದು ಹೆಚ್ಚು ಓದಿದ್ದು

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ - Representative Image Used

Jan 18, 2019 08:19am

ತುಮಕೂರಿನ ಹಳೆ ಸಿದ್ಧಗಂಗಾ ಮಠದ ಆವರಣದಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್

Jan 18, 2019 06:50am

ರಾಜ್ಯ ಸರ್ಕಾರ ಪತನಗೊಳಿಸಲು ಬಿಜೆಪಿ ಯತ್ನಿಸುತ್ತಿದೆ ಎಂದು ಆರೋಪಿಸಿ ಬೆಂಗಳೂರಿನಲ್ಲಿಮಾಜಿ ಸಚಿವ ಎಚ್‌.ಕೆ.ಪಾಟೀಲ್‌, ಜಯಮಾಲಾ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.

Jan 18, 2019 06:50am

Trending videos

Back to Top